Joji

 




ಅವನ ಹೆಸರು Joji(Fahadh Faasil).

ಒಂದು ಸಣಕಲು ಕುದುರೆ ಹೊಂದಿರುವ ಆತ Engineering Drop out.ತಂದೆಗೆ ಕೊನೆಯ ಮಗ.ಸದ್ಯಕ್ಕೆ ಮಾಡ್ಲಿಕ್ಕೆ ಕೆಲಸ ಏನೂ ಇಲ್ಲ..ಆದರೂ ಮೂವಿಯಲ್ಲಿ ಅವನು ಏನೇನೋ ಮಾಡ್ತಾನೆ!

ರಬ್ಬರ್ ತೋಟದ ಸೆರಗಿನಲ್ಲಿ ನಡೆಯುವ ಈ ಕಥೆಯಲ್ಲಿ ಎರಡು ಕೊಲೆ ಇದೆ!

ಒಂದು ಕೊಲೆ ಎಂದು ಸುಲಭಕ್ಕೆ ಯಾರಿಗೂ ಗೊತ್ತಾಗದ Plan ಮಾಡಿ ಮಾಡಿರುವ Joji ಯ ತಂದೆಯ ಕೊಲೆ... ಮತ್ತೊಂದು ಊರಿಗೆಲ್ಲಾ ಗೊತ್ತಿರುವ Joji ಯ ಅಣ್ಣನದ್ದೇ ಕೊಲೆ!

ನಡುವೆ ಪಾತ್ರಗಳು ತಾವುಗಳು ನಗದೆ ನೋಡುಗನನ್ನು ತಣ್ಣಗೆ ನಗಿಸುವ ಒಂದಷ್ಟು Black humor ಕೂಡ ಇದೆ.ಪೂರ್ತಿ ಕಥೆ ಹೇಳಲಾರೆ..ನೀವೇ ನೋಡಿ Enjoy ಮಾಡಿ.

William Shakespeare ನ Macbeth ನಾಟಕ ಆಧಾರಿತ ಮಲಯಾಳಂ ಮೂವಿ ಇದು.ಈ Crime Drama ಮೂವಿಯನ್ನು Maheshinte Prathikaaram ಮತ್ತು Thondimuthalum Driksakshiyum ನಂತಹ ಚಿತ್ರಗಳನ್ನು ನಿರ್ದೇಶನ ಮಾಡಿದ Dileesh Pothan ಎಂದಿನಂತೆ ಅವರದ್ದೇ ಶೈಲಿಯಲ್ಲಿ ನಿರ್ದೇಶಿಸಿದ್ದಾರೆ.

ನಿನ್ನೆ ರಾತ್ರಿ ಅಷ್ಟೇ OTT ಗೆ ಬಂದಿರುವ ಇದು Prime ನಲ್ಲಿ ಇದೆ.ಮೂವಿಯನ್ನು ಕೊನೆಯವರೆಗೂ ನೋಡಿ ಆಸ್ವಾದಿಸುವ ತಾಳ್ಮೆ ಇದ್ದರೆ ಇದೂ ಕೂಡ ನಿಮಗೆ ಅಷ್ಟೇ ಇಷ್ಟವಾಗಬಹುದು..

Movie_Review
Ab Pacchu







Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ