Mumbai Police
ಅವರಿಬ್ಬರು ಪೋಲಿಸರು ಹಾಗೂ ಅಷ್ಟೇ ಒಳ್ಳೆಯ ಗೆಳೆಯರು.
ಒಬ್ಬ ಓಕೆ ಓಕೆ ಟೈಪ್ ಜನ ಆಗಿದ್ದರೆ ಮತ್ತೊಬ್ಬನಂತು ತುಂಬಾನೇ ಖಡಕ್,ರಗಡ್ ಹಾಗೂ ಸ್ವತಃ ಪೋಲಿಸ್ ಡಿಪಾರ್ಟ್‌ಮೆಂಟ್ ಗೆನೇ ವಿಪರೀತ ಕಿರಿಕಿರಿ ಅಂತೆನಿಸುವ ಮನುಷ್ಯ.
ಒಂದು ರಾತ್ರಿ ಇಂಡಿಯನ್ನೇ ನೇವಿಯ ಹುಡುಗರೊಂದಿಗೆಯೇ ಅವರಿಬ್ಬರು ಸಿಕ್ಕಾಪಟ್ಟೆ ಕಿರಿಕಿರಿ ಮಾಡಿಕೊಳ್ಳುತ್ತಾರೆ!
ಆ ನಂತರ ಅವರಿಬ್ಬರಲ್ಲಿ ಒಬ್ಬ ಸ್ಟೇಜ್ ಮೇಲೆ ಗ್ಯಾಲಂಟರಿ ಆವಾರ್ಡ್ ತೆಗೆದುಕೊಂಡು ಸ್ಪೀಚ್ ಕೊಡುತ್ತಿರುವ ಸಂದರ್ಭದಲ್ಲಿ... ಸ್ನೈಪರ್ ಬಳಸಿ ತುಂಬಾ ದೂರದಿಂದಲೇ ಗುಂಡಿಕ್ಕಿ ಕೊಲ್ಲಲಾಗುತ್ತದೆ!!
ಈಗ ಉಳಿದ ಮತ್ತೊಬ್ಬ ಪೋಲಿಸ್ ಆಫೀಸರ್ ತನ್ನ ಗೆಳೆಯನ ಕೊಲೆಯ ತನಿಖೆಯನ್ನು ಕೈಗೆ ತೆಗೆದುಕೊಂಡು ಕೊಲೆಗಾರನನ್ನು ಪತ್ತೆ ಹಚ್ಚಲು ಶುರು ಮಾಡುತ್ತಾನೆ.
ಅವನಿಗೆ ಕೊನೆಗೊಂದು ದಿನ ಕೊಲೆಗಾರ ಯಾರು ಎಂದು ಕೂಡ ಗೊತ್ತಾಗುತ್ತದೆ.
ಆದರೆ ಅದನ್ನು ಜಗತ್ತಿನೆದುರು ಸಾಬೀತು ಪಡಿಸುವ ಮೊದಲೇ ಅವನಿಗೆ ರೋಡ್ Accident ಆಗಿ ಅವನ ನೆನಪುಗಳೆಲ್ಲವೂ ತಾತ್ಕಾಲಿಕವಾಗಿ ಮರೆತು ಹೋಗಿರುತ್ತದೆ.!
ಅವನಿಗೆ ಈ ರೀತಿಯಾಗಿ Partial memory loss ಆಗಿರುವ ವಿಷಯ..ಅವನಿಗೆ,ವೈದ್ಯರಿಗೆ ಮತ್ತು ಅವನ ಹಿರಿಯ ಆಫೀಸರ್ ಗೆ ಒಬ್ಬರಿಗೆ ಅಷ್ಟೇ ಗೊತ್ತಿರುತ್ತದೆ.
ಈ ವಿಷಯವನ್ನು ಹೊರಗಿನ ಯಾರಿಗೂ ಗೊತ್ತು ಪಡಿಸದೇ ಆ ಹಿರಿಯ ಆಫೀಸರ್.. ಅವನನ್ನೇ ಮತ್ತೆ ಅವನ ಸ್ನೇಹಿತನ ಕೊಲೆಯ ತನಿಖೆ ಮುಂದುವರಿಸಲು ಹೇಳುತ್ತಾನೆ!
ಅವನೂ ಕೂಡ ಕಷ್ಟಪಟ್ಟು ತನಿಖೆ ಮುಂದುವರಿಸುತ್ತಾನೆ.
ಹಲವರ ಮೇಲೆ ಬಲವಾದ ಸಂಶಯಗಳು ಬರುತ್ತದೆ.
ಆದರೆ ಯಾವುದೇ ಗಟ್ಟಿಯಾದ ಸಾಕ್ಷ್ಯಗಳು ಸಿಕ್ಕಿರುವುದಿಲ್ಲ.
ಕಥೆ.. ತನಿಖೆ ಎರಡೂ ಹಾಗೇ ಮುಂದುವರಿಯುತ್ತದೆ
ಕೊನೆಗೊಂದು ದೊಡ್ಡ ಅಚ್ಚರಿಯೊಂದಿಗೆಯೇ ಇದರ ಕಥೆ ಹಾಗೇ ಮುಗಿದು ಬಿಡುತ್ತದೆ!!
ಹಾಗಾದರೆ ಮೆಮೊರಿ ಲಾಸ್ ಆಗಿರುವ ಒಬ್ಬ ಪೋಲಿಸ್ ಆಫೀಸರ್ ಹೇಗೆ ಕೊಲೆಗಾರನನ್ನು ಪತ್ತೆ ಹಚ್ಚುತ್ತಾನೆ..? ಅದಕ್ಕಿಂತಲೂ ಹೆಚ್ಚಾಗಿ ಆ ಬುದ್ಧಿವಂತ ಕೊಲೆಗಾರ ಯಾರು?..ಏತಕ್ಕಾಗಿ ಕೊಲೆ ಮಾಡಿದ? ಇದೇ ಮೂವಿಯ ಕಥೆ. ಅದಕ್ಕಾಗಿ ನೀವು ಮೂವಿಯನ್ನೇ ನೋಡಬೇಕು.
2013 ರಲ್ಲಿ ಬಂದಂತಹ ಈ Psychological Thriller ಮೂವಿ #Mumbai_Police ಅನ್ನು Rosshan Andrrews ನಿರ್ದೇಶನ ಮಾಡಿದ್ದಾರೆ. Prithviraj Sukumaran,Jayasurya ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಈ ಮೂವಿ Hotstar ನಲ್ಲಿ ಇದೆ.
#Movies
Ab
Comments
Post a Comment