ಆವೆ ಮಣ್ಣಿನ ಅಂಗಣಕ್ಕೆ ಅವನೊಬ್ಬನೇ ಗೂಳಿ.. ಹೆಸರು Rafa!
ಒಂದು ಕಡೆ ಸ್ವಿಸ್ ನ ಬಹು ಸುಂದರ ಆಟಗಾರ ಪೆಡರರ್,ಮತ್ತೊಂದು ಕಡೆ ಸರ್ಬಿಯಾದ ಸಪೂರ ಹುಡುಗ ಜೊಕೋವಿಕ್,ಇವರಿಬ್ಬರೊಂದಿಗಿನ ತನ್ನದೊಂದು Rivalry ಯಲ್ಲಿ ತನ್ನ ಹಿಡಿತವನ್ನು ಆವಾಗವಾಗ ಗಟ್ಟಿ ಗೊಳಿಸುತ್ತಾ,ಬಿದ್ದಾಗಲೆಲ್ಲ ಬಲು ಬೇಗ ಎದ್ದು ವೇಗವಾಗಿ ತನ್ನ ಕೈಯಲ್ಲಿರುವ racket ಬೀಸುತ್ತಾ.. ಆವೆ ಮಣ್ಣಿನ ಅಂಗಣ ಇರುವುದೇ ತಾನು ದೂಳೆಬ್ಬಿಸಲು,ಮಾತ್ರವಲ್ಲ ಪ್ರೆಂಚ್ ಓಪನ್ ಎಂದರೆ ಅದು ತಾನು,ನಾನು ಎಂದರೆ ಕ್ಲೇ ಕೋರ್ಟ್ ಎಂದು ಸಾರಿ ಸಾರಿ ಜಗತ್ತಿಗೆ ಹೇಳಿದ,ಪ್ರತೀ ಸಲ ಪ್ರೂವ್ ಮಾಡಿ ತೋರಿಸಿದ,ಬಲು ಸುಂದರ ಟೆನಿಸ್ ಆಟದಲ್ಲಿ ತೀರಾ ಒರಟನಂತೆ ಕಾಣುವ ಆವೆ ಮಣ್ಣಿನ ಅಂಗಣದ ರಾಜನಿಗೆ ಮತ್ತು ಸ್ಪೆನ್ ನ ಗೂಳಿಗೆ ಈಗ ಹನ್ನೆರಡನೆಯ ಬಾರಿಗೆ Barcelona Open ಪ್ರಶಸ್ತಿಯ ಗೌರವ.
ನೋಡುವ ಆಸಕ್ತಿ ಇದ್ದರೆ ಕ್ರಿಕೆಟ್ ಗಿಂತಲೂ ತುಂಬಾ ಶಿಸ್ತಿನ ಹಾಗೂ ಅತೀ ಸುಂದರ ಗೇಮ್ ಎಂದು ಅನ್ನಿಸುವ, ಅತ್ಯಂತ ಹೆಚ್ಚಿನ ದೈಹಿಕ ಸಾಮರ್ಥ್ಯ ಬೇಡುವ ಟೆನ್ನಿಸ್ ಆಟದಲ್ಲಿ ನಿಮಗೆ Big Three (Federer,Djokovic,Rafa) ಯಲ್ಲಿ ಯಾರಾದರೂ ಒಬ್ಬರು ಇಷ್ಟ ಆಗಿಯೇ ಆಗುತ್ತಾರೆ.
ಕೆಲವರಿಗೆ ಚಾಂಪಿಯನ್ ಆಟಗಾರ ಉದ್ದದ ವಿಂಬಲ್ಡನ್ ದೊರೆ 20 Grand Slam ಗಳ ಸರದಾರ ಫೆಡರರ್ ಇಷ್ಟ ಆಗ್ತಾನೆ.ಗ್ರಾಸ್ ಕೋರ್ಟ್ ಅಲ್ಲಿ ಗೆದ್ದಾಗ ಹುಲ್ಲು ತಿಂದು ಪ್ರೇಕ್ಷಕರನ್ನು ರಂಜಿಸುವುದು ಮಾತ್ರವಲ್ಲ ತಾನು ಕೂಡ ಯಾರಿಗೂ ಕಮ್ಮಿ ಇಲ್ಲ ಎಂದು ಪದೇ ಪದೇ ಟಕ್ಕರ್ ಕೊಡುವ 18 Grand slam ಗಳನ್ನು ಇಲ್ಲಿಯವರೆಗೆ ಬಾಚಿಕೊಂಡು ತನ್ನ ಜೋಳಿಗೆಗೆ ಹಾಕಿಕೊಂಡಿರುವ ಜೋಕೋವಿಕ್ ಕೂಡ ಹಲವರಿಗೆ ಇಷ್ಟ.ಎಲ್ಲರಿಗಿಂತ ಹೆಚ್ಚು ವೇಗದಲ್ಲಿ ಅಂದರೆ ಸರಾಸರಿ 3200 Revolution per Minute ವೇಗದಲ್ಲಿ Forehand ಹೊಡೆತವನ್ನು ಸ್ಪಿನ್ ಆಗುವಂತೆ ಬಾರಿಸಬಲ್ಲ ಹುಟ್ಟು ಬಲಗೈ ಆಟಗಾರ ಆಗಿದ್ದರೂ ಸಹ ಇನ್ನು ಮುಂದೆ ಎಡಗೈ ಆಟವೇ ತನ್ನ ಆಟವೆಂದು ಆಡಿದ ಜಿದ್ದಿನ ದೊರೆ Rafael Nadal ಕೂಡ ಹಲವಾರು ಟೆನ್ನಿಸ್ ಪ್ರೀಯರಿಗೆ ತುಂಬಾನೇ ಇಷ್ಟ.
ತಾನು ಗೆದ್ದಿರುವ 20 Grand Slam(Wimbledon,Australian Open, French Open, Us Open) ಗಳಲ್ಲಿ 13 ಅನ್ನು ಪ್ರತಿಷ್ಠಿತ Roland Garros ನ ಆವೆ ಮಣ್ಣಿನಲ್ಲಿಯೇ ಈತ ಗೆದ್ದಿದ್ದಾನೆ ಎಂದರೆ ಅದು French ಓಪನ್ ನಲ್ಲಿ ನಡಾಲ್ ಇನ್ನಿಲ್ಲದಂತೆ ನಡೆಸಿರುವ ತೀವ್ರ ತರಹದ ದಾಂಧಲೆಗೆ ಸಾಕ್ಷಿಯೂ ಹೌದು ಅದೇ ರೀತಿ ಅದು ಅಲ್ಲಿ ಆತ ಸ್ಥಾಪಿಸಿರುವ "ಇದು ನಂದೇ" ಎಂಬ ಸಾರ್ವಭೌಮತ್ವದ ಕುರುಹು ಕೂಡ ಹೌದು.
ಫುಟ್ಬಾಲ್ ರಾಷ್ಟ್ರದ ಈ ಟೆನ್ನಿಸ್ ಹುಡುಗ ತನ್ನದೊಂದು ಧ್ವಜವನ್ನು ಬಹಳ ಗಟ್ಟಿಯಾಗಿಯೇ ಪ್ಯಾರಿಸ್ ಅಂಗಣದಲ್ಲಿ ಬಹಳ ಹಿಂದೆಯೇ 2005 ರಲ್ಲಿಯೇ ನೆಟ್ಟು ಬಿಟ್ಟಿದ್ದಾನೆ.ಆ ನಂತರ ಹನ್ನೆರಡು ಬಾರಿ ಅದನ್ನು ಅಲ್ಲಿ ರಾರಾಜಿಸಿದ್ದಾನೆ ಅವನು.ಅಲ್ಲಿ ಅಂತಹ ಸಾಧನೆ ಮಾಡಿದವರ ಪಟ್ಟಿಯಲ್ಲಿ ಕುತೂಹಲದಿಂದ ಕಣ್ಣಾಡಿಸಿದರೆ ಎರಡನೆ ಸ್ಥಾನದಲ್ಲಿರುವ Björn Borg,6 ಬಾರಿ ಅಷ್ಟೇ ಆವೆ ಮಣ್ಣಿನ ಅಂಗಣದಲ್ಲಿ ಪಾರುಪತ್ಯ ಮೆರೆದಿದ್ದು.ಅಂತಹ ದೈತ್ಯ ಆಟಗಾರ ಫೆಡರರ್ ಕೂಡ ಕೇವಲ 2009 ರಲ್ಲಿ ಒಂದು ಬಾರಿ ಅಷ್ಟೇ ಅಲ್ಲಿ ಗೆದ್ದಿದ್ದ. ಜೊಕೋವಿಕ್ ಕೂಡ 2016 ರಲ್ಲಿ ಒಮ್ಮೆ ಮಾತ್ರ ಅಲ್ಲಿ ಗೆದ್ದು ಬೀಗಿದ್ದು.ಅದಕ್ಕಾಗಿಯೇ ಟೆನ್ನಿಸ್ ಜಗತ್ತು Rafa ನನ್ನು "King of Clay" ಅನ್ನುತ್ತೆ. ಯೆಸ್ ಅದೇ.. ಆವೆ ಮಣ್ಣಿನ ಅಂಗಣದ ರಾಜನವನು.
ಸ್ವತಃ Barcelona ದ ಸೆಂಟರ್ ಕೋರ್ಟ್ ಕೂಡ Pista Rafa Nadal ಎಂದು ತನ್ನದೊಂದು ಹೆಸರು ಬರೆಸಿಕೊಂಡು ಗುರುತಿಸಿಕೊಳ್ಳುವಂತೆ ಮಾಡಿದ,ತಲೆಗೊಂದು ಸದಾ ಪಟ್ಟಿ ಕಟ್ಟಿಕೊಂಡು ಆಡುವ Rafa,ಈಗ ಅದೇ ಕ್ಲೇ ಕೋರ್ಟಿನಲ್ಲಿ ಗ್ರೀಸ್ ನ ಆಟಗಾರ Stefanos Tsitsipas ನೊಂದಿಗೆ ಮೂರು ಗಂಟೆಗಳ ವರಗೆ ಸೆಣಸಾಡಿ ತನ್ನ ಹನ್ನೆರಡನೆಯ Barcelona ಒಪನ್ ಟೈಟಲ್ ಅನ್ನು ಗೆದ್ದುಕೊಂಡು,ಎಂದಿನ ತನ್ನ ಶೈಲಿಯಲ್ಲಿ ಟ್ರೋಫಿಯನ್ನು ಬಹು ಪ್ರೀತಿಯಿಂದ ಕೈಗೆತ್ತಿಕೊಂಡು ತನ್ನ ಬಾಯಿಯಿಂದ ವಿಜಯದ ಬೈಟ್ ಕಚ್ಚಿಕೊಂಡು ಬಿಟ್ಟಿದ್ದಾನೆ.ಭಾರತೀಯ ಕ್ರಿಕೆಟ್ ತಂಡದಂತೆ ಅವನ ಮನೆಯ ಟ್ರೋಪಿ ಇಡುವ ಕಪಾಟಿನ ಗಾತ್ರ ಕೂಡ ದಿನದಿಂದ ದಿನಕ್ಕೆ ಹಿಗುತ್ತಲೇ ಹೋಗುತ್ತಿದೆ..
ಫುಟ್ಬಾಲ್ ಅನ್ನು ಕೂಡ ಅಷ್ಟೇ ಇಷ್ಟ ಪಡುವ ನಡಾಲ್ ಗೆ ರೋನಾಲ್ಡೋ ಅಂದರೆ ತುಂಬಾ ಇಷ್ಟವಂತೆ. ಆದರೆ ಈಗೀನ ಪೋರ್ಚುಗಲ್ ದೇಶದ Juventus FC ಪರವಾಗಿ ಆಡುವ ವೆರಿ ಫೇಮಸ್ ಕ್ರಿಸ್ಟಿಯನೋ ರೋನಾಲ್ಡೋ ಅಲ್ಲ, ಬ್ರೆಜಿಲ್ ನ ಮಾಜಿ ಫಾರ್ವರ್ಡ್ ಪ್ಲೇಯರ್ ರೋನಾಲ್ಡೋ ಅವನಿಗೆ ಇಷ್ಟವಂತೆ.
ಟೆನ್ನಿಸ್ ಇಷ್ಟ ಇಲ್ಲದವರಿಗೂ ಟೆನ್ನಿಸ್ ಮೇಲೆ ಆಸಕ್ತಿ ಹುಟ್ಟಿಸಿದ್ದು ಪ್ರತೀ ಹೊಡೆತದಲ್ಲೂ ಬಾಯಿಯಿಂದ ಒಂದು ಶಬ್ದವೂ ಹೊರಬರದಂತೆ ಕಲಾತ್ಮಕವಾಗಿ ಆಡುವ ಒಬ್ಬ ಸುಂದರಾಗ ಫೆಡರರ್ ಆದರೆ.. ಮತ್ತೊಬ್ಬ ಅವನಿಗಿಂತ ಐದು ವರ್ಷ ಚಿಕ್ಕವ ನೋಡಲು ತೀರಾ ಒರಟನಂತೆ ಕಾಣುವ ತನ್ನ ಪ್ರತೀ ಜೋರಾದ ಹೊಡೆತದಲ್ಲೂ ಚೀತ್ಕಾರವನ್ನು ಬೆರೆಸಿಯೇ ಹಲ್ಲು ಕಚ್ಚಿಕೊಂಡುವ ಆಡುವ ಆವೆ ಮಣ್ಣಿನ ಅಂಗಣದಲ್ಲಿ ಜಾರುತ್ತಾ ಎದುರಾಳಿಗಳಿಗೆ ನೀರು ಕುಡಿಸುವ ಇದೇ ನಡಾಲ್.
Big Three ಗಳ Rivalry ಇನ್ನಷ್ಟು ಕಾಲ ಟೆನ್ನಿಸ್ ಪ್ರಿಯರ ಮನ ರಂಜಿಸಲಿ.ಏಕೆಂದರೆ ಸುಂದರ ಆಟ ಟೆನ್ನಿಸ್ ಅನ್ನು ಈ ಕಾಲಕ್ಕೆ ಮತ್ತಷ್ಟು ಸುಂದರಗೊಳಿಸುತ್ತಿರುವುದು ಈ ಮೂವರೇ.ಈ ಮೂವರಲ್ಲಿ ಯಾರಾದರೊಬ್ಬರ " ನಾನಾ ನೀನಾ.. " ಎಂಬಂತಹ Rivalry ಯ Rally ಇದ್ದಾಗ ನೋಡಿ ಕಣ್ಣು ತುಂಬಿಸಿಕೊಳ್ಳಲು ಯಾವತ್ತೂ ಮರೆಯಬೇಡಿ.
ಏಕೆಂದರೆ ಸದ್ಯಕ್ಕೆ ಮೂವರಿಗೂ ಮೂವತ್ತು ಮೀರಿದ ವಯಸ್ಸಾಗುತ್ತಾ ಬಂತು.ಆದರೂ ಈಗಲೂ ಇಪ್ಪತ್ತರ ಯುವಕರಿಗೂ ನೀರು ಕುಡಿಸುವ ಆಟ ಆಡುತ್ತಿದ್ದಾರೆ.ಮುಂದೆ ಹೊಸ ಹುಡುಗರು ಬರಬಹುದು.. ಅಲ್ಲಿಯವರಗೆ ದಿಗ್ಗಜರ ಆಟ ಟೆನಿಸ್ ಕೋರ್ಟ್ ನಲ್ಲಿ ಇನ್ನಿಲ್ಲದಂತೆ ಮುಂದುವರಿಯಲಿದೆ,ರಾರಾಜಿಸಲಿದೆ.ಅಂದ ಹಾಗೆ 2020 ರ ಪ್ರೆಂಚ್ ಓಪನ್ ಅನ್ನು ಕೂಡ ಸ್ಪೆನ್ನಿನ ಗೂಳಿಯೇ ಗೆದ್ದಿದ್ದು..ಒಟ್ಟು ಹದಿಮೂರನೆಯ ಬಾರಿಗೆ.
.....................................................................................
#ಏನೋ_ಒಂದು
ab pacchu
Moodbidri
(https://phalgunikadeyavanu.blogspot.com)
Comments
Post a Comment