Uppena
#Uppena..
ಅವಳು ಒಬ್ಬಳೇ ಮಗಳು.
ಮುದ್ದಾದ ಮಗಳು ಮತ್ತು ಸಿರಿವಂತನ ಮಗಳು ಕೂಡ ಹೌದು.
ಅವನು ಅವಳ ತಂದೆ.
ಊರಿಗೆ ಅವನೇ ದೊಡ್ಡ ಜಮೀನ್ದಾರ.
ಅವನು ತುಂಬಾ ಒಳ್ಳೆಯವನಲ್ಲ.
ತುಂಬಾ ತುಂಬಾ ಕೆಟ್ಟವನು..!
ಅದಾಗಲೇ ಅವನು ತನ್ನ ಮಗಳನ್ನು,ಅವಳು ಪ್ರೀತಿಸಿದವನಿಂದ ದೂರ ಮಾಡಿ ಮನೆಗೆ ಅವಳನ್ನು ಕರೆದುಕೊಂಡು ಬಂದಿರುತ್ತಾನೆ !
ಮನೆಯ ನಡುವಲ್ಲಿ ನಿಲ್ಲಿಸಿ ತಂದೆ ಮಗಳಿಗೆ ಹೇಳುತ್ತಾನೆ... ನಾನು ಅವನಿಂದ ನಿನ್ನನ್ನು ಮಾತ್ರ ದೂರ ಮಾಡಿಲ್ಲ,ನಿನ್ನವನ ಪುರುಷತ್ವವನ್ನು ಕೂಡ ಅವನಿಂದ ಕಸಿದುಕೊಂಡಿರುವೆ ಎಂದು!!
ಆ ದಿನ ಆ ಕ್ಷಣ.. ಮಗಳು ತಂದೆಯ ಎದುರು ನಿಂತು ಮಾತಾಡುತ್ತಾಳೆ.
ಪ್ರೀತಿಯ ಬಗ್ಗೆ,ತನ್ನ ಪ್ರೀತಿಯ ಬಗ್ಗೆ,ತನ್ನವನ ಪ್ರೀತಿಯ ಬಗ್ಗೆ...ಪುರುಷನ ಬಗ್ಗೆ.. ಪುರುಷತ್ವದ ಬಗ್ಗೆ... ಬರೋಬ್ಬರಿ ಹತ್ತು ನಿಮಿಷ ಅವಳು ಒಬ್ಬಳೇ ಬಿಡದೇ ಮಾತಾಡಿ ಬಿಡುತ್ತಾಳೆ..!
ತಂದೆ ಸೋಲುತ್ತಾನೆ..!
ಒಂದೇ ಒಂದು ಮಾತು ಕೂಡ ಆಡಲಾಗದೆ ತಂದೆ ಸೋತು ಬಿಡುತ್ತಾನೆ!
ಮಗಳು ಮನೆಯಿಂದ ಹೊರ ನಡೆಯುತ್ತಾಳೆ!!
ಖಡಕ್ ತಂದೆಯಾಗಿ Vijay Sethupathi ಇದ್ದರೆ,ಮಗಳಾಗಿ Krithi Shetty ಯದ್ದು ಚಂದದ ಅಭಿನಯ. Panja Vaisshnav Tej ಇದರಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.Sethupathi ಗೆ ರವಿಶಂಕರ್ ಧ್ವನಿ ನೀಡಿದ್ದಾರೆ.ಸೇತುಪತಿಯ ಆ ಓರಿಜಿನಲ್ ರಗಡ್ ವಾಯ್ಸ್ ಇದ್ದಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು.
ಲವ್ ಸ್ಟೋರಿ ಮೂವಿ ಇಷ್ಟ ಆಗುವವರಿಗೆ ಈ ಮೂವಿ ಕೂಡ ಇಷ್ಟ ಆಗಬಹುದು.ಈ romantic drama ತೆಲುಗು ಮೂವಿ #Uppena ವನ್ನು Bucchi Babu Sana ನಿರ್ದೇಶನ ಮಾಡಿದ್ದಾರೆ. ಈ ಮೂವಿ Netflix ನಲ್ಲಿ ಇದೆ.
ab
Comments
Post a Comment