Vaarikkuzhiyile Kolapathakam

 


ಅದೊಂದು Backwaters ನಿಂದ ಆವೃತ್ತವಾದ ಚಿಕ್ಕ ದ್ವೀಪದಂತಹ ಪ್ರದೇಶ.


ಆ ನಡುವಿನ ಪುಟ್ಟ ಹಳ್ಳಿಯಲ್ಲಿ ಒಂದು ರಾತ್ರಿ ಒಂದು ಕೊಲೆ ನಡೆಯುತ್ತದೆ!

ಕೊಲೆ ಮಾಡಿ ಒಬ್ಬನನ್ನು ಗುಂಡಿ ತೆಗೆದು ಹೂಳಲಾಗುತ್ತದೆ!

ಆದರೆ ಕೊಲೆ ನಡೆಯುವುದನ್ನು ಆ ಊರಿನ ಚರ್ಚಿನ ಫಾದರ್ ಮರೆಯಲ್ಲಿ ನಿಂತು ನೋಡಿರುತ್ತಾರೆ!

ಚರ್ಚಿನ ಫಾದರ್ ನೋಡಿರುವುದನ್ನು ಕೊಲೆಗಾರ ಕೂಡ ಸೂಕ್ಷ್ಮವಾಗಿ ಗಮನಿಸುತ್ತಾನೆ.

ಅದೇ ದಿನ ಆ ಕೊಲೆಗಾರ ಚರ್ಚಿಗೆ ಬಂದು ಫಾದರ್ ಬಳಿ Confession ಮಾಡ್ತಾನೆ.

ನಾನೊಂದು ಕೊಲೆ ಮಾಡಿದ್ದೇನೆ ಎಂದು!

ಅವನಿಗೂ ಗೊತ್ತು Confess ಮಾಡಿದ ನಂತರ ಫಾದರ್ ಯಾರಿಗೂ ತಾನು ಹೇಳಿರುವ ವಿಷಯವನ್ನು ಬಹಿರಂಗ ಪಡಿಸಲ್ಲ ಎಂದು.ನಿಯಮ ಪ್ರಕಾರ ಮಾಡಬಾರದು.

ಆದರೆ ಫಾದರ್ ಗೆ ಏನೋ ಸಮಾಧಾನವಿಲ್ಲ.

ಅವರಿಗೆ ಕೊಲೆಗಾರನಿಗೆ ಶಿಕ್ಷೆ ಆಗಲೇಬೇಕೆಂದು ಇರುತ್ತದೆ.ಆದರೆ ನಿಯಮ ಮುರಿಯಲು ಅವರಿಗೆ ಕೂಡ ಮನಸ್ಸಿಲ್ಲ.

ಈ ಫಾದರ್ ಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೊಲೆಗಾರ  ಧೈರ್ಯದಲ್ಲಿಯೇ ಇರುತ್ತಾನೆ.

ಆದರೆ ಕಣ್ಣ ಮುಂದೆಯೇ ಆರಾಮವಾಗಿ ತಿರುಗಾಡುತ್ತಿರುವ  ಕೊಲೆಗಾರನಿಗೆ ಫಾದರ್  ಚಾಲೆಂಜ್ ಮಾಡ್ತಾರೆ... ನಾನು ಬಾಯಿ ಬಿಡಲ್ಲ,ಆದರೆ ನಿನಗೆ ಶಿಕ್ಷೆ ಸಿಗುವಂತೆ ಮಾಡುತ್ತೇನೆ ಎಂದು!

ಆದರೆ ಹೇಗೆ?.. ಕೊಲೆ ಆದವನು ಯಾರು? ಏತಕ್ಕಾಗಿ ಕೊಲೆ ಆದ..? ಇದುವೇ ಈ ಮೂವಿಯ ಕಥೆ.

2019 ರಲ್ಲಿ ಬಂದಂತಹ ಈ Mystery Thriller ಮಲಯಾಳಂ ಮೂವಿ  #Vaarikkuzhiyile_Kolapathakam  ಅನ್ನು Rejishh Midhila ನಿರ್ದೇಶನ ಮಾಡಿದ್ದಾರೆ. Amith Chakalakkal, Dileesh Pothan,Lal, Amira Varma ಮೊದಲಾದವರು ಅಭಿನಯಿಸಿದ್ದಾರೆ.ಈ ಮೂವಿ Prime ನಲ್ಲಿ ಉಂಟು.

#Movies
Ab


Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..