Anuraga Karikkin Vellam
#Anuraga_Karikkin_Vellam | MX Player
ಈ ಮೂವಿಯ ಹೆಸರೇ ಎಷ್ಟು ಚೆನ್ನಾಗಿದೆ ಅಲ್ವಾ..
ಕನ್ನಡದಲ್ಲಿ ಇದನ್ನು " ಎಳನೀರಿನಂತಹ ಪ್ರೇಮ" ಎಂದು ಹೇಳಬಹುದು.
ಎಳನೀರಿನಷ್ಟೇ ತುಂಬಾ ಸಿಹಿಯಾದದ್ದು,ಹಾಗೆ ಅದರಂತೆಯೇ ಎಳೆಯದ್ದಾದ ಅಂದರೆ Immature ಆದ ಪ್ರೀತಿ.. ಎಂದೇ ಇದರ ಒಟ್ಟಾರೆ ಅರ್ಥ.
ತಿಳಿಯಾದ ಹಾಸ್ಯದ ಜೊತೆಗೆ ಮುದ ನೀಡುವ ನವಿರಾದ ಪ್ರೇಮ...
ಇವೆರಡೂ ಇದರಲ್ಲಿ ಹದವಾಗಿ ಬೆರೆತಿದೆ.
ಅವನೊಬ್ಬ ಪೋಲಿಸ್ ಅಧಿಕಾರಿ.
ತುಂಬಾನೇ Strict.
ಮನೆಯಲ್ಲಿ ಕೂಡ ಒಂಥರಾ ಹಾಗೆಯೇ.
ಮಾತು ಕಮ್ಮಿ, ಮೌನ ಜಾಸ್ತಿ.
ಅವನಿಗೊಬ್ಬ ಬೆಳೆದು ನಿಂತ ಮಗ.
ಅವನೊಂತರ Useless Fellow.
ಡಿಗ್ರಿ ಮುಗಿದರೂ ಸರಿಯಾದ ಕೆಲಸವಿಲ್ಲ.
ಮಾತ್ರವಲ್ಲ ಸರಿಯಾಗಿ ಯಾವ ಕೆಲಸ ಕೂಡ ಮಾಡಲ್ಲ.
ಆದರೂ ಅವನಿಗೊಂದು ಚಂದದ ಹುಡುಗಿಯ ಜೊತೆ ಮೊಹಬ್ಬತ್.
ಅವಳು ತುಂಬಾನೇ ಕೇರಿಂಗ್.
ಅದೇ ಅವನಿಗೆ ಅತಿಯಾದ ಕಿರಿಕಿರಿ.
ಫ್ರೆಂಡ್ಸ್ ಗಳ ಒಟ್ರಾಸಿ ಪ್ರೋತ್ಸಾಹ ಹಾಗೂ ಅತ್ಯಧ್ಭುತ ಸಲಹಗೆಳಿಂದ ಪ್ರೇರಣೆಗೊಂಡು ಅವನು ತನ್ನ ಹುಡುಗಿಯೊಂದಿಗೆ ಬ್ರೇಕ್ ಅಫ್ ಮಾಡಿಕೊಳ್ಳುತ್ತಾನೆ.
ಆ ಹುಡುಗಿಗೆ ಅದರಿಂದ ತುಂಬಾನೇ ಬೇಜಾರ್ ಆಗುತ್ತದೆ.
ಇದೇ ಟೈಂ ಅಲ್ಲಿ ಅವನ ಅಪ್ಪ ಆ ಫೋಲಿಸ್ ಅಧಿಕಾರಿ ಒಂದು ದಿನ ತನ್ನ ಬಾಲ್ಯದ ಪ್ರೇಯಸಿಯನ್ನು ಅವಳು ಕಾರಿನಲ್ಲಿ ಹೋಗುವಾಗ ನೋಡುತ್ತಾನೆ.
ಅವನಿಗೆ ಅವಳೊಂದಿಗೆ ಮತ್ತೊಮ್ಮೆ ಮಾತನಾಡಬೇಕು ಎಂದು ಅನಿಸುತ್ತದೆ.
ಪೋಲಿಸನ ಎದೆಯಲ್ಲಿ ಹಾಗೇ ಅಮರ ಮಧುರ ಪ್ರೇಮವೊಂದು ಗರಿಗೆದರಿ ಹಾರಾಡುತ್ತದೆ.
ಪೋಲಿಸ್ ತನ್ನ ಬಾಲ್ಯದ ಗೆಳತಿಯ ನಂಬರ್ ಪಡೆಯಲು ಇನ್ನಿಲ್ಲದಂತೆ ಕಸರತ್ತು ಮಾಡುತ್ತಾನೆ.
ಕಥೆಯಲ್ಲಿ ಏನೇನೋ ಆಗಿ ಕೊನೆಗೆ ಪೋಲಿಸನ ಮಗನ ಮೂಲಕವೇ ಅವನ ಆ ಬ್ರೇಕ್ ಅಫ್ ಆಗಿರುವ ಗರ್ಲ್ ಫ್ರೆಂಡ್ ನ ಪೋನ್ ನಂಬರೇ ಆ ಪೋಲಿಸ್ ಗೆ ಸಿಕ್ಕಿ ಬಿಡುತ್ತದೆ.
ಈ ಪೋಲಿಸ್ ಅದು ತನ್ನ ಬಾಲ್ಯದ ಪ್ರೇಯಸಿ ಎಂದೇ ತಿಳಿದು ಅವಳ ಜೊತೆ ಮಾತಾಡುತ್ತಾಳೆ.
ಮಗನ ಗರ್ಲ್ ಫ್ರೆಂಡ್ ಕೂಡ ತಾನೇ ಪೋಲಿಸನ ಬಾಲ್ಯದ ಗೆಳತಿ ಎಂಬಂತೆ ಆ ಪೋಲಿಸ್ ನೊಂದಿಗೆ ದಿನಾಲೂ ಮಾತಾಡುತ್ತಾ ಹೋಗುತ್ತಾಳೆ..
ಆ ದಿನದಿಂದ ಆ Strict ಪೋಲಿಸ್ ನ ಲೈಫೇ ಬದಲಾಗುತ್ತದೆ...
Strict ಪೋಲಿಸ್ ಆಫೀಸರ್ ಗುಲಾಬ್ ಜಾಮೂನಿನಂತೆ ಮೃದು ವಾಗುತ್ತಾನೆ..
ಮನೆಯ ವಾತಾವರಣವೂ ಬದಲಾಗುತ್ತದೆ..
ಆ ನಂತರ ಏನಾಗುತ್ತದೆ.
ಪೋಲಿಸ್ ನ ಲವ್ ಏನಾಗುತ್ತದೆ..ಮಗನ ಲವ್ ಏನಾಗುತ್ತದೆ ಎಂದು ನೋಡಲು ನೀವು ಮೂವಿಯನ್ನೇ ನೋಡಬೇಕು.
ಒಂಥರಾ ಚೆನ್ನಾಗಿದೆ...
ಎರಡು ಗಂಟೆ ಕಳೆದು ಹೋಗುವುದೇ ಗೊತ್ತಾಗುವುದಿಲ್ಲ. ಇಷ್ಟವಾಯಿತು.ಇದನ್ನು MX Player ನಲ್ಲಿ ಫ್ರೀಯಾಗಿಯೇ ನೋಡಬಹುದು.
ಈ Romantic Comedy ಮೂವಿಯನ್ನು Khalid Rahman ನಿರ್ದೇಶನ ಮಾಡಿದ್ದಾರೆ.Biju Menon, Asif Ali, Asha Sarath, Rajisha Vijayan, Soubin Shahir, Sreenath Bhasi ಮುಂತಾದವರ ಅಭಿನಯವಿದೆ.
#Anuraga_Karikkin_Vellam | MX Player
Malayalam movie
Romantic Comedy
Year - 2016
#Movies
Ab Pacchu



Comments
Post a Comment