Blackmail
#Blackmail(Blackमेल) | Prime
Dark Comedy ಗಳ ಸ್ವಾಧವೇ ಹಾಗೆ.
ಒಂದೆರಡು ಗಂಟೆಗಳನ್ನು ಇನ್ನಿಲ್ಲದಂತೆ ಉಲ್ಲಾಸಗೊಳಿಸಿಬಿಡುತ್ತದೆ.ಅದಕ್ಕಾಗಿಯೇ ನನಗೆ ಈ ಒಂದು Genre ಯಾವತ್ತೂ ತುಂಬಾನೇ ಇಷ್ಟ ಆಗುವುದು.
ಕಥೆಯಲ್ಲಿ ಅವನೊಬ್ಬ ಇರ್ತಾನೆ.
ಅವನು ಅಂತಹ ಆಸಕ್ತಿ ಹುಟ್ಟಿಸುವ ಮನುಷ್ಯನೇನಲ್ಲ.
ಅವನಿಗೂ ಅಷ್ಟೇ ಯಾವುದರಲ್ಲಿಯೂ ಆಸಕ್ತಿ ಇಲ್ಲ.
ಜೀವನದಲ್ಲಿಯೂ ಇಲ್ಲ.. ವೈವಾಹಿಕ ಜೀವನದಲ್ಲಿಯೂ ಇಲ್ಲ.
ಅವನ ಹೆಂಡತಿಗೂ ಅಷ್ಟೇ.. ಅವನೆಂದರೆ ಸ್ವಲ್ಪವೂ ಆಸಕ್ತಿ ಇಲ್ಲ.
ಅದಕ್ಕಾಗಿ ಅವನು ಆಫೀಸ್ ನಲ್ಲಿ ಕೆಲಸ ಬಿಟ್ಟ ನಂತರವೂ ಆಫೀಸ್ ನಲ್ಲಿಯೇ ತುಂಬಾ ಹೊತ್ತು ಕಂಪ್ಯೂಟರ್ ಅಲ್ಲಿ ಗೇಮ್ ಆಡುತ್ತಾ ಇದ್ದು, ಆ ನಂತರ ಲೇಟ್ ಆಗಿಯೇ ಡೈಲಿ ಮನೆ ಸೇರುತ್ತಾನೆ.
ಅವನ ನಿರಾಸಕ್ತಿಯನ್ನು ಗಮನಿಸಿದ ಕಂಪನಿಯ ಸ್ನೇಹಿತ ಒಬ್ಬ ಅವನಿಗೆ ಹೆಂಡತಿಯನ್ನು ಮೊದಲು ಇಂಪ್ರೆಸ್ ಮಾಡು,ಜೀವನದಲ್ಲಿ ಎಲ್ಲಾ ಸರಿ ಹೋಗುತ್ತದೆ.. ಎಂಬ ಅಧ್ಭುತ ಐಡಿಯಾ ಕೊಡುತ್ತಾನೆ.
ಅದಕ್ಕಿವನು... ನಾನು ಈಗ ಏನು ಮಾಡಬೇಕು ಇಂಪ್ರೆಸ್ ಮಾಡಲು.. ಎಂದು ಕೇಳುತ್ತಾನೆ.
ಒಂದು ಹೂವಿನ ಬೊಕ್ಕೆ ತೆಗೆದುಕೊಂಡು ಹೋಗಿ ಕೊಡು.. ಅವಳಿಗೆ ಖಂಡಿತಾ ಖುಷಿ ಆಗ್ತದೆ... ಎಂದು ಫ್ರೆಂಡ್ ಒಟ್ರಾಸಿ ಪ್ರೋತ್ಸಾಹ ಕೊಡ್ತಾನೆ.
ಆ ದಿನ ಹೂವಿನ ಮಾರ್ಕೆಟ್ ಬಂದ್ ಬೇರೆ ಇರುತ್ತದೆ.
ಈ ಟೈಂ ಅಲ್ಲಿ ಎಲ್ಲಿ ಹೂವು ಸಿಗಬಹುದು ಎಂದು ಡೀಪಾಗಿ ಯೋಚಿಸಿ ಅವನೇ ಒಂದು ಉಪಾಯ ಕಂಡುಕೊಳ್ಳುತ್ತಾನೆ.
ಅದಕ್ಕಾಗಿ ಅವನು ನೇರಾ ಸ್ಮಶಾನಕ್ಕೆ ಹೋಗಿ ಆಗ ತಾನೇ ಯಾರೋ ಗೋರಿಯ ಮೇಲೆ ಇಟ್ಟು ಹೋಗಿರುವ ಹೂಗುಚ್ಛ ವೊಂದು ತೆಗೆದುಕೊಂಡು ಖುಷಿ ಖುಷಿಯಿಂದ ಮನೆಗೆ ಜಿಗಿದು ಕುಣಿದು ಕುಪ್ಪಳಿಸುತ್ತಾ.. ಆ ದಿನ ಸ್ವಲ್ಪ ಬೇಗನೆ ಮನೆಗೆ ಬಂದು ಬಿಡುತ್ತಾನೆ.
ಆದರೆ ಮನೆಗೆ ಬಂದಾಗ ಮನೆಯಲ್ಲಿ ಅವನ ಹೆಂಡತಿ ಯಾವುದೋ ಪರಪುರಷನೊಂದಿಗಿರುವುದು ಅವನು ಆ ದಿನ ಕದ್ದು ಮುಚ್ಚಿ ನೋಡುತ್ತಾನೆ.
ಹೆಂಡತಿಯ ಆ ಗೆಳೆಯನನ್ನು ಚಾಕು ಹಾಕಿ ಕೊಲ್ಲಲೇ ಅಥವಾ ತನ್ನ ಹೆಂಡತಿಯನ್ನು ಸ್ಕ್ರೂ ಡ್ರೈವರ್ ನಿಂದ ತಿವಿದು ಕೊಲ್ಲಲೇ ಎಂದು ಒಮ್ಮೆ ಯೋಚಿಸುತ್ತಾನಾದರೂ.. ಅವನು ಹಾಗೆ ಮಾಡುವುದಿಲ್ಲ.ಏಕೆಂದರೆ ಅವನಿಗೆ Violence ಅಂದರೆ ಇಷ್ಟವಿಲ್ಲ.
ಈಗ ಏನು ಮಾಡುವುದು.
ಅವನಿಗೆ ಜೀವನದಲ್ಲಿ ಸಿಕ್ಕಾ ಪಟ್ಟೆ ಸಾಲ,ಬ್ಯಾಂಕ್ ಲೋನ್ ಮತ್ತು ಕಂಡಾಬಟ್ಟೆ EMI ಗಳು ಇರುತ್ತವೆ.
ಅದಕ್ಕಾಗಿ ಇವನು ಒಂದು ಬೇರೆಯೇ ಉಪಾಯ ಮಾಡುತ್ತಾನೆ.
ತನ್ನ ಹೆಂಡತಿಯ ಆ ಗೆಳೆಯನನ್ನು ಹಣಕ್ಕಾಗಿ Blackmail ಮಾಡಲು ಶುರು ಮಾಡುತ್ತಾನೆ.ಅವನಿಗೂ ಕೂಡ ಮದುವೆ ಆಗಿರುತ್ತದೆ.ಹಣ ಕೊಡದಿದ್ದರೆ ಅವನ ಹೆಂಡತಿಗೆಯೇ ನೇರವಾಗಿ ವಿಷಯ ಹೇಳ್ತೇನೆ.. ಎಂದು ಮೆಸೇಜ್ ಕಳುಹಿಸುತ್ತಾನೆ.
ಈ ರೀತಿಯಾಗಿ ಮೊದಲ Blackmail ಕಥೆಯಲ್ಲಿ ಶುರುವಾಗುತ್ತದೆ.
ಆ ನಂತರ ಒಂದರ ನಂತರ ಒಂದು Blackmail ಗಳೇ ಇರುವುದು ಈ ಕಥೆಯಲ್ಲಿ. ಇವನಿಗೂ ಕೂಡ Blackmail ಗಳು ಆಗುತ್ತದೆ!
ಆ ಕಥೆಗಾಗಿ ಸಿಕ್ಕಾಪಟ್ಟೆ ಗಮ್ಮತ್ ಇರುವ ಈ ಮೂವಿಯನ್ನೇ ನೋಡಬೇಕು ನೀವು.
Abhinay Deo ಇದನ್ನು ನಿರ್ದೇಶಿಸಿದ್ದಾರೆ. Irrfan Khan ನದ್ದು ಸೊಗಸಾದ ಅಭಿನಯ ಇಲ್ಲಿ. Kirti Kulhari, Divya Dutta, Omi Vaidya ಮುಂತಾದವರ ಅಭಿನಯವಿದೆ. Dark Comedy ಗಳನ್ನು ಅತಿಯಾಗಿ ಇಷ್ಟ ಪಡುವವರಿಗೆ ಹೇಳಿ ಮಾಡಿಸಿದ ಮೂವಿ ಇದು. ಬಹಳ ಹಿಂದೆಯೇ ಬಂದಿರುವ ಈ ಮೂವಿಯನ್ನು ಹೆಚ್ಚಿನವರು ನೋಡಿರುತ್ತೀರಿ.ನೋಡಿರದಿದ್ದರೆ ಖಂಡಿತವಾಗಿಯೂ ಒಮ್ಮೆ ನೋಡಬಹುದು.
#Blackmail(Blackमेल) | Prime
Hindi Movie
Dark Comedy
Year - 2018
#Movies
Ab Pacchu




Comments
Post a Comment