ಅರಿಷ್ವಡರ್ಗ
#ಅರಿಷ್ವಡರ್ಗ | Prime
ಇಲ್ಲಿ ಕೆಲವರು ಕೆಟ್ಟವರು.
ಹಾಗಂತ ಬಾಕಿ ಉಳಿದ ಎಲ್ಲರು ಒಳ್ಳೆಯವರು ಎಂದು ಅರ್ಥ ಕೂಡ ಅಲ್ಲ!
ಸಂಧರ್ಭಕ್ಕೆ ತಕ್ಕಂತೆ ಕೆಲವರು ಸ್ವಲ್ಪ ಕೆಟ್ಟವರು.. ಮತ್ತೆ ಕೆಲವರು ತುಂಬಾನೇ ಕೆಟ್ಟವರು!!
ಕಾಮ,ಕ್ರೋಧ,ಲೋಭ,ಮೋಹ, ಮದ, ಮಾತ್ಸರ್ಯ.. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಮನುಷ್ಯನ ಪ್ರಮುಖ ಆರು ಗುಣಗಳೆನಿಸುವ ಈ ಅರಿಷ್ವಡರ್ಗಗಳೇ ಈ ಮೂವಿಯ ಪ್ರಮುಖ ಕಥೆ.
ಖಂಡಿತವಾಗಿಯೂ Murder Mystery ಕಥೆಯೇ ಹೌದು ಇದು.
ಇದರ ಕೊಲೆಯನ್ನು ಮೂವಿ ಶುರುವಾಗುವುದಕ್ಕಿಂತ ಮೊದಲೇ ನೀಟ್ ಆಗಿ ಮಾಡಿ ಮುಗಿಸಿಟ್ಟಿರುತ್ತಾರೆ.
ಕೊಲೆ ನಡೆದ ಜಾಗದಲ್ಲಿ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಕೂಡ!
ಆದರೆ ಅವರೇ ಕೊಲೆಗಾರರಾ?
ಅದು ಗೊತ್ತಿಲ್ಲ!
ಹಾಗಾದರೆ ಯಾರು?
ಅದರ ಬೆನ್ನು ಹಿಡಿದೇ ಈ ಕಥೆ ಸಾಗುತ್ತದೆ.
ಒಬ್ಬೊಬ್ಬರ ಒಂದೊಂದು ಕಾಣುವ ಮುಖದ,ಮುಖವಾಡದ ಹಿಂದಿನ ಅಸಲಿ ಮುಖದ ಪರಿಚಯವಾಗುತ್ತಲೇ ಹೋಗುತ್ತದೆ.
ಪೋಲಿಸರ ತನಿಖೆ ಕೂಡ Excellent ಅಂತ ಕಥೆಯ ಮಧ್ಯದಲ್ಲೊಮ್ಮೆ ಅನ್ನಿಸಿ ಬಿಡುವುದಿದೆ.
ಆದರೆ ಕೊನೆಯಲ್ಲಿ ಅಲ್ಲ!!
ಎಲ್ಲರೂ ಅರಿಷ್ವಡರ್ಗಗಳಿಂದ ಹೊರತಾಗಿಲ್ಲ ಎನ್ನುವುದೇ ಇದರ ಮೈನ್ ಥೀಮ್!
#ಅರಿಷ್ವಡರ್ಗ ಈ ಮೂವಿಯನ್ನು Arvind Kamath ನಿರ್ದೇಶನ ಮಾಡಿದ್ದಾರೆ. Avinash, Samyukta Hornad, Nanda Gopal, Mahesh Bung, Anju Alva Naik, Arvind Kuplikar ನವರ ಅಭಿನಯವಿದೆ. ಪೋಲಿಸ್ ಪಾತ್ರದಲ್ಲಿ ಅಭಿನಯಿಸಿದ Nanda Gopal ಕಮ್ಮಿ ಮಾತು,ತೀಕ್ಷ್ಣ ನೋಟ ನಿಮಗೂ ಇಷ್ಟ ಆಗಬಹುದು.ವಿಶ್ವ ಸಿನಿರಂಗದಲ್ಲಿ ಕೂಡ ಈ ಮೂವಿ ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿದೆ.
#ಅರಿಷ್ವಡರ್ಗ | Prime
ಕನ್ನಡ ಮೂವಿ
#Movies
ab pacchu
moodubidire
Me watching movies based on u r review. Good movie
ReplyDeleteMe watching movies based on u r review. Good movie
ReplyDelete