ಈ ಮನೆಯದ್ದೊಂದು ಸೀಕ್ರೆಟ್ಸ್ ಇಂಗ್ರಿಡಿಯೆಂಟ್ಸ್ ಈ ಕವಂಟೆ

 



ಇದರ ಮರದ್ದು ಉಪಯೋಗ ಕೂಡ ಹಲವಾರು ಉಂಟು.ಅದರಲ್ಲೂ ಈ ಕಾಯಿ ಉಂಟಲ್ಲಾ ಇದನ್ನು ಹಿಂದೆಲ್ಲಾ ನಮ್ಮಲ್ಲಿ ಹೆಚ್ಚಾಗಿ ಎಲ್ಲಾ ಕಡೆ ಈ ಫಿಶ್ ಕರಿಗೆ ಅದರಲ್ಲೂ ಬಂಗುಡೆ ಪದಾರ್ಥಕ್ಕೆ ತಪ್ಪದೇ ಹಾಕುತ್ತಿದ್ದರು.ಎಷ್ಟೇ ರುಚಿ ಆದರೂ  ಬಂಗುಡೆ ಸ್ವಲ್ಪ ನಂಜು ಅಲ್ವಾ ಹಾಗಾಗಿ ಸ್ವಲ್ಪ ಪ್ರಮಾಣದಲ್ಲಿ  ಓಮ,ಕಾಲ್ ಜೀರಿಗೆ ಹಾಗೂ ಈ ಒಣ ಕಾಯಿಗಳನ್ನು ಮಸಾಲೆ ಕಡೆಯುವಾಗ ಸೇರಿಸುತ್ತಿದ್ದರು.


ಅದರೆ ಈಗ ಇದನ್ನು ಹೆಕ್ಕುವವರೂ ತುಂಬಾ ಕಡಿಮೆ,ಅದರಲ್ಲೂ ಫಿಶ್ ಕರಿಯಲ್ಲಿ ಇದರ ಬಳಕೆ ಅಂತು ತುಂಬಾನೇ ಅಪರೂಪವೇ ಆಗಿ ಬಿಟ್ಟಿದೆ.ಹಳ್ಳಿಯಲ್ಲಿ ಕೂಡ ಕೊತ್ತಂಬರಿ, ಜೀರಿಗೆ,ಮೆಂತೆ ಇಷ್ಟೇ ಪ್ರಮುಖ Ingredients ಆಗಿ ಹೋಗಿ ಬಿಟ್ಟಿದೆ.ಹಿಂದಿನವರು ಬಿಂಬುಳಿ,ಪುನರ್ಪುಳಿ, ಜಾರಿಗೆಯಂತಹ ಹುಳಿಗಳನ್ನು ಕೂಡ ಹಾಕಿ ಘಮ್ಮೆನಿಸುವ ರುಚಿಕರ ಮೀನು ಪದಾರ್ಥಗಳನ್ನು ಮಾಡುತ್ತಿದ್ದರು ಎಂದರೆ ಈಗ ಹೆಚ್ಚಿನವರು ನಂಬುವುದೇ ಇಲ್ಲ. 


ನನ್ನ ಅಮ್ಮನಿಗೆಗಂತು ಈ ಕಾಯಿಗಳ ಮೇಲೆ ಬಹಳ ಪ್ರೀತಿ.. ಇದು ಎಲ್ಲಿ ಕಂಡರೂ ಒಂದಷ್ಟು ಇವುಗಳನ್ನು ಹೆಕ್ಕಿಕೊಂಡು  ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಏನೋ ಗೊತ್ತಿಲ್ಲ ಅವರ  ಅಡುಗೆಯ ಕೈ ರುಚಿಯಲ್ಲಿ ಇಂತಹ ಹಲವಾರು ಸಿಕ್ರೇಟ್ ಇಂಗ್ರಿಡಿಯೆಂಟ್ಸ್ ಗಳು ನಿರಂತರವಾಗಿ ಶಾಮೀಲಾಗಿ ಮನೆ ಅಡುಗೆಯ ರುಚಿ ಹೆಚ್ಚಿಸುತ್ತಲೇ ಬಂದಿದೆ.


ಇದರ ಮರಗಳು ಕೂಡ ಈಗ ಅಪರೂಪ ಆಗಿವೆ.ಹಿರಿಯರು, ತಿಳಿದವರು ಇದ್ದರೆ.. ಮರದಡಿಗೆ ಹೋಗಿ ಅರಳಿ ಮರದಿಂದ ಉದುರಿದ ಇದರ ಒಣ ಕಾಯಿಗಳನ್ನು ಬಹಳ ಆಸ್ಥೆಯಿಂದ ಹೆಕ್ಕಿ ಡಬ್ಬಗಳಲ್ಲಿ ಸಂಗ್ರಹಿಸಿಟ್ಟು ಕೊಳ್ಳುತ್ತಾರೆ.ಮೈ ಪೂರ್ತಿ ದಪ್ಪ ಮುಳ್ಳುಗಳನ್ನೇ ಹೊದ್ದುಕೊಂಡಿರುವ ಈ ಮರದ ದೊಡ್ಡ ಮುಳ್ಳುಗಳನ್ನು ಕಿತ್ತು ತೆಗೆದರೆ ಸ್ಟ್ಯಾಂಪ್ ಪ್ಯಾಡ್ ಮೇಲೆ ಒತ್ತಬಹುದಾದ ಮುದ್ರೆಯ ಫೀಲ್ ಕೊಡುತ್ತದೆ.ಹಿಂದೆ ಇಲ್ಲ ಇದರ ಹಸಿ ಕಾಯಿಗಳಲ್ಲಿ ಒಬ್ಬರಿಗೊಬ್ಬರು ಓಂಟೆಯಲ್ಲಿ(ಬಿದಿರಿನ ಕೊಳವೆ)ಕಾಯಿ ಹೊಡೆದು ಕೊಳ್ಳುವ ಪೇಟ್ಲ ಎನ್ನುವ ಆಟ ಕೂಡ  ಆಡುತ್ತಿದ್ದರು.ತುಳುವಲ್ಲಿ ಇದಕ್ಕೆ ಕಾವಂಟೆಕಾಯಿ ಇಲ್ಲವೆ ಕವಂಟೆ  ಎಂದು ಕರೆಯುತ್ತೇವೆ.ಕನ್ನಡದಲ್ಲಿ ಜುಮ್ಮನಕಾಯಿ ಹಾಗೂ ಪೇಟ್ಲಕಾಯಿ ಎಂದು ಕೂಡ ಹೇಳುತ್ತಾರೆ. 


ಈಗ ಎಲ್ಲಾ ಮೀನು ಸಾರು ಹೇಗೆ ಮಾಡಿದರೂ ಹಿಂದಿನಷ್ಟು ರುಚಿ ಅಲ್ಲ ಎಂದು ಹೇಳಲು ಅದಕ್ಕೆ ಪ್ರಮುಖ ಕಾರಣ  ಮೀನು ಪದಾರ್ಥ ಮಾಡುವ ವಿಧಾನ ಹಾಗೂ ಕೆಲವೊಂದು ಇಂತಹ ಅಪರೂಪದ ಇಂಗ್ರಿಡಿಯೆಂಟ್ಸ್ ಗಳು ಅಡುಗೆ ಕೋಣೆಯಿಂದ ಮೆಲ್ಲಗೆ ಕಣ್ಮರೆಯಾಗುವುದೇ ಆಗಿದೆ.



.....................................................................................


#ಏನೋ_ಒಂದು


Ab Pacchu

Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ