ಹಾಗೇ ಸಿಂಪಲ್ ಆಗಿ ಒಂದು ಕಡ್ಲೆಬೇಳೆ ಪಾಯಸಂ
ಇದು ಮಾಡುವುದು ತುಂಬಾನೇ ಸುಲಭ.ಇದಕ್ಕೆ ಹಸಿ ಗೇರುಬೀಜ ಹಾಕಿ ಮಾಡಿದರೆ ಬಹಳ ರುಚಿ.ಅದನ್ನೇ ಹಾಕಿ ಮಾಡಿದ ಪಾಯಸ ಇದು.
ಮೊದಲು 200 ಗ್ರಾಂ ಕಡ್ಲೆಬೇಳೆ ಯನ್ನು ನೀರಿನಲ್ಲಿ ನೆನೆಸಿಡಿ.
ಈಗ ತೆಂಗಿನ ದಪ್ಪ ಹಾಲು ಹಾಗು ತೆಳು ಹಾಲು ತೆಗೆದುಕೊಂಡು ಬಿಡಿ.
ಸ್ವಲ್ಪ ಬೆಳ್ತಿಗೆ ಅಕ್ಕಿಯನ್ನು (ಅರ್ಧ ಹಿಡಿ) ಕೂಡ ನೆನೆಯಲು ಹಾಕಿ. ನಂತರ ಅದನ್ನು ಕೂಡ ಸಪರೇಟ್ ಆಗಿ ನುಣ್ಣಗೆ ಕಡೆದುಕೊಳ್ಳಿ.ಇದು ಹಾಕಲೇಬೇಕು ಎಂದು ಏನು ಇಲ್ಲ. ಇದು ಹಾಕಿದರೆ ಪಾಯಸ ಸ್ವಲ್ಪ ದಪ್ಪ ಬರುತ್ತದೆ ಅಂತ ಅಷ್ಟೇ.
ಈಗ ಮೊದಲಿಗೆ ಸ್ವಲ್ಪ ನೀರು ಹಾಕಿ ಕಡ್ಲೆಬೇಳೆಯನ್ನು ಬೇಯಿಸಿ.ಅದಕ್ಕೆ ಸ್ವಲ್ಪ ತುಪ್ಪ ಕೂಡ ಸೇರಿಸಿ.ಅದು ಬೆಂದ ನಂತರ ಈ ಕಡೆದಿಟ್ಟ ಬೆಳ್ತಿಗೆ ಅಕ್ಕಿಯ ಹಿಟ್ಟನ್ನು ತೆಂಗಿನ ತೆಳುಹಾಲಿನ ಜೊತೆಗೆ ಮಿಕ್ಸ್ ಮಾಡಿ ಅದನ್ನು ಪಾಯಸಕ್ಕೆ ಸೇರಿಸಿ.
ಈಗ ತುರಿದ ಬೆಲ್ಲ(400 ಗ್ರಾಂ )ವನ್ನು ಸೇರಿಸಿ. ಸಿಹಿ ಬೇಕಿದ್ದರೆ ಜಾಸ್ತಿ ಬೆಲ್ಲ ಹಾಕಬಹುದು. ರುಚಿಗೆ ಚಿಟಿಕೆ ಉಪ್ಪು ಕೂಡ ಸೇರಿಸಿಬಿಡಿ.
ನಿಮಗೆ ಸಾಬಕ್ಕಿ ಇಷ್ಟ ಆಗುವುದಾದರೆ ಅದನ್ನು ಕೂಡ ಈ ಪಾಯಸಕ್ಕೆ ಸೇರಿಸಿಕೊಳ್ಳಬಹುದು.
ನಂತರ ತೆಂಗಿನ ದಪ್ಪ ಹಾಲು ಹಾಕಿ.
ಕೊನೆಗೆ ಹಸಿ ಗೇರುಬೀಜ ಹಾಗೂ ಎಲಕ್ಕಿ ಪುಡಿಯನ್ನು ಸೇರಿಸಿ ಬಿಟ್ಟರೆ ರುಚಿಕರ ಕಡ್ಲೆಬೇಳೆ ಪಾಯಸ ಸವಿಯಲು ಸಿದ್ದ.
ನಮ್ಮಲ್ಲಿ ಯುಗಾದಿ ಹೆಚ್ಚಾಗಿ ಮಾಡುತ್ತಾರೆ.. ಆವಾಗ ಎಳೆಯ ಗೇರುಬೀಜ ಕೂಡ ಬೇಕಾದಷ್ಟು ಸಿಗುತ್ತದೆ.ಚೆನ್ನಾಗಿರುತ್ತದೆ.. ಸಾಧ್ಯ ಆದರೆ ಒಮ್ಮೆ ಮಾಡಿ ನೋಡಿ.
#ಕಡ್ಲೆಬೇಳೆ_ಪಾಯಸ
ಪಚ್ಚುಪಾಕಗಳು
ತುಳುನಾಡ್ ಫುಡ್
ಪಚ್ಚುಪಟಗಳು
ab pacchu
Moodubidire



Comments
Post a Comment