ತಂಡಕ್ಕಾಗಿ ಆಟ ಆಡುವವನು..
ಲಾಕ್ ಡೌನ್ ಗಿಂತ ಸ್ವಲ್ಪ ಹಿಂದೆ ನಮ್ಮ ಮನೆಯ ಅಕ್ಕಪಕ್ಕ ಇರುವ ಮಕ್ಕಳು ನನ್ನನ್ನು ಬಿಟ್ಟು ಕ್ರಿಕೆಟ್ ಆಡುತ್ತಿರಲಿಲ್ಲ.ಈಗ ಅದೇ ಮಕ್ಕಳು ಈ ಜನ ಒಂದು ಬರದಿದ್ದರೆನೇ ನಮಗೆ ಒಳ್ಳೆಯದು ಎಂದು ತಮ್ಮ ತಮ್ಮಲ್ಲಿಯೇ ಚರ್ಚಿಸಿ ಒಮ್ಮತದ ನಿರ್ಧಾರವೊಂದು ತೆಗೆದುಕೊಂಡು,ಕ್ರಿಕೆಟ್ ಆಡ್ಲಿಕ್ಕೆ ಹೋಗುವಾಗ ಬೇಕಂತಲೇ ನನ್ನನ್ನು ಕರೆಯದೇ ಸೈಲೆಂಟ್ ಆಗಿ ಅವರಷ್ಟಕ್ಕೇ ಗ್ರೌಂಡಿಗೆ ಹೋಗಿ ಕ್ರಿಕೆಟ್ ಆಡಿ ಬರುತ್ತಿದ್ದಾರೆ.
ಏಕೆ ಒಮ್ಮೆಲೇ ಹೀಗೆ ಆಗ್ತ ಇದೆ ಅಂತ ಈ ರಹಸ್ಯವನ್ನು ಬೇಧಿಸಲು ಹೊರಟಾಗ ನನಗೆ ಗೊತ್ತಾದ ಸಮಾಚಾರ ಏನೆಂದರೆ ಮತ್ತು ಆ ಎಲ್ಲಾ ಮಕ್ಕಳ ಆಕ್ರೋಶಭರಿತ ಆ ಒಕ್ಕೊರಲಿನ ಕೂಗು ಎನೆಂದರೆ " ಈರ್ ಏತ್ ಅರಂಟ್ ದ್ ಸೈಪರ್ ಮಾರ್ರೆ,ಫಸ್ಟ್ ಬ್ಯಾಟಿಂಗ್ ಲ ಈರೇ.. ಫಸ್ಟ್ ಬೌಲಿಂಗ್ ಲ ಈರೇ..ಬೊಕ ಎಂಕುಲ್ ದಾಯೆಗ್ ಗ್ರೌಂಡ್ ಗ್ ಖಾಲಿ ಬಾಲ್ ಪೆಜ್ಜರೆ ಬರೋಡಾ😡😡..."
ಸಿಂಪುಳ್ ಶಬ್ದಗಳಲ್ಲಿ ಇದರ ಭಾವಾನುವಾದ ಹಾಗೂ ಆ " ಅರಂಟುವುದು" ಎಂಬ ಪೆಸಲ್ ವರ್ಡ್ ನ ಮೀನಿಂಗ್ ಏನೆಂದರೆ.. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಜೀವವನ್ನು ಪಣಕ್ಕಿಟ್ಟು ತಂಡದ ಹಿತಕ್ಕಾಗಿ,ತಂಡ ಗೆಲ್ಲಲೇಬೇಕು ಎಂಬ ಏಕೈಕ ಉದ್ದೇಶದಿಂದ ನಿರಂತರವಾಗಿ ಬೆವರು ಹರಿಸಿ ಪರ್ಫಾಮ್ ಮಾಡುವವ ತಂಡದ ಒಬ್ಬ ಸ್ಟಾರ್ ಆಟಗಾರ.
ನೋಡಿ... ತಂಡ ಗೆಲ್ಲಲ್ಲಿ ಎಂದು ಯಾರಿಗೂ ಏನನ್ನೂ ಕೊಡದೆ ನಾನೊಬ್ಬನೇ ಇಷ್ಟೊಂದು ಕಷ್ಟ ಪಟ್ಟು ಬ್ಯಾಟಿಂಗ್,ಬೌಲಿಂಗ್ ಎಲ್ಲಾ ಮಾಡಿದರೂ ಸ.. ಕೇವಲ ಜಯ ಒಂದೇ ನನ್ನ ಮೂಲ ಮಂತ್ರ ಎಂದು ಕೆಚ್ಚೆದೆಯಿಂದ ಹೋರಾಡಿದರೂ ಸ.. ಸಮಾಜಕ್ಕೆ ನಮ್ಮಂತಹ ಅರುಂಟುವ ಪ್ಲೇಯರ್ ಗಳ ನಿಜವಾದ ಉದ್ದೇಶವೇ ಅರ್ಥ ಆಗುವುದಿಲ್ಲ ಎನ್ನುವುದೇ ಒಂದು ಬಹಳ ನೋವಿನ ವಿಷಯವಾಗಿದೆ.
🙄🤔🏃🏻♂️
#ವಿಷಯ_ಎಂತ_ಗೊತ್ತುಂಟಾ
Ab Pacchu
Moodubidire
Comments
Post a Comment