ನಮ್ಮ ಕಾಲದಲ್ಲಿ ಹೀಗೆಲ್ಲಾ ಇರ್ಲಿಲ್ಲ..

 




ಹಿಂದೆ ಚಿಕ್ಕವನಿದ್ದಾಗ ದೊಡ್ಡವರೆಲ್ಲಾ ಮಾತು ಮಾತಿಗೂ ಇದೊಂದು ಮಾತು ತಪ್ಪದೇ  ಹೇಳ್ತಾ ಇದ್ರು... "ಇದೆಲ್ಲ ಎಂತದ ಲಾಟ್ ಪೋಟ್(ನಿಕೃಷ್ಟ),ಒಂದು ಟೈಮಿನಲ್ಲಿ ನಾವೆಲ್ಲ ಉಂಟಲ್ಲಾ..ಅದು ಮಾಡಿದ್ದೆವು, ಇದು ಮಾಡಿದ್ದೆವು...ಆ ಕಾಲನೇ ಬೇರೆ..ಈಗ ಎಂತದು ಮಣ್ಣಂಗಟ್ಟಿ " ಎಂದು ಹೇಳಿಯೇ  ಮುಗಿಸುತ್ತಿದ್ದರು.ಆಗ ನನಗೆಲ್ಲ,ಆಹಾ.. ಎನಪ್ಪಾಆಆಆ ಇವರು,ಎಂತಹ ಚಿನ್ನದ ಯುಗದಲ್ಲಿ ಬದುಕಿದ್ದರು ಅಂತಲೇ ಅನ್ನಿಸುತ್ತಿತ್ತು. 


ನಂತರ ದೊಡ್ಡವನಾಗಿ ಮುಂದೆ ಕಾಲೇಜಿಗೆ ಬಂದಾಗ ಒಬ್ಬ ಫ್ರೆಂಡ್ ಸಿಕ್ಕಿದ,ಅವನೂ ಕೂಡ ಮಾತು ಮಾತಿಗೆ " ಹಿಂದೆ ನಾವೆಲ್ಲ ಉಂಟಲ್ಲಾ... ನಮ್ಮ ಕಾಲದಲ್ಲಿ ಹೀಗೆಲ್ಲಾ ಇರ್ಲೇ ಇಲ್ಲ.. " ಅಂತಾನೇ ಹೇಳ್ತಾ ಇದ್ದ.ಹೆಚ್ಚು ಕಡಿಮೆ ನನ್ನ ವಯಸ್ಸಿನ ಅವನು ಯಾವ ತೆನಾಲಿರಾಮನ ಕಾಲದಲ್ಲಿ ಜೀವಿಸಿದ್ದ ಎಂಬ ಪ್ರಶ್ನೆಯೊಂದು ಯಕ್ಷ ಪ್ರಶ್ನೆಯಾಗಿಯೇ ನನ್ನಲ್ಲಿ ಉಳಿದಿತ್ತು. ಆದರೆ ಮಾತು ಮಾತಿಗೂ ಅದೊಂದು ಮಾತ್ರ ತಪ್ಪದೇ ಹೇಳ್ತಾ ಇದ್ದ... "ಹಿಂದೆ ನಾವೆಲ್ಲ ಉಂಟಲ್ಲಾ...". 



ಮೊನ್ನೆ ನಮ್ಮ ಗುಡ್ಡದ ಗ್ರೌಂಡಿಗೆ ಹೋಗಿದ್ದೆ.ಅಲ್ಲಿ ಐದನೇ ಕ್ಲಾಸಿನ  ಬಾಲಕ ಒಬ್ಬ ಕ್ರಿಕೆಟ್ ಆಡ್ಲಿಕ್ಕೆ ಬರ್ತಾನೆ.ಅವನು ಸ ಮಾತು ಮಾತಿಗೆ.. "ಹಿಂದೆ ನಾವೆಲ್ಲ ಕ್ರಿಕೆಟ್ ಆಟ ಆಡುವಾಗ ಉಂಟಲ್ಲಾ...." ಎಂದು ಡಾನ್ ಬ್ರಾಡ್ಮನ್ ಜೊತೆಗೆ ಕ್ರಿಕೆಟ್ ಆಡಿದ್ದೆ ಎಂಬ ರೇಂಜಿನ ಕಥೆಗಳನ್ನೇ ಹೇಳ್ತಾ ಇದ್ದ.



ಇದೆಲ್ಲಾ ನೋಡಿದ ಮೇಲೆ ನನಗೆ ಅನಿಸುವುದು... ಯಾರಪ್ಪಾಆಆಆಆ ಇವರೆಲ್ಲಾ, ಪ್ರತಿಯೊಬ್ಬರೂ ಯಾಕೆ ಡೈನಾಸೋರ್ ಜೊತೆಗೆಯೇ ಹುಟ್ಟಿ ಆಡಿ ನಲಿದು ಬೆಳೆದವರಂತೆ  ಮಾಡ್ತಾರೆ..


ಮತ್ತೆ ವಿಷಯ ಎಂತ ಗೊತ್ತುಂಟಾ... ಹಿಂದೆ ನಮ್ಮ ಕಾಲದಲ್ಲಿ  ಹೀಗಿನ ಹಾಗೆ ಎಲ್ಲಾ ಇರ್ಲಿಲ್ಲ,ನಾವೆಲ್ಲ ಆವಾಗ ಮೈಗೆ ಈ ಸೊಪ್ಪು ತೊಗಟೆಗಳನ್ನು ಕಟ್ಟಿಕೊಂಡು,ಕಾಡಿನಲ್ಲಿ ಗೆಡ್ಡೆ ಗೆಣಸುಗಳನ್ನು ಕೋಲಿನ ಸಹಾಯದಿಂದ ಅಗೆಯುತ್ತಾ..... 🏃🏻‍♂️🏃🏻‍♂️🏃🏻‍♂️


#ವಿಷಯ_ಎಂತ_ಗೊತ್ತುಂಟಾ...

Ab Pacchu

Moodubidire

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..