ಬಂಧುಗಳೇ,ವಿಷಯ ಏನೆಂದರೆ...
ಬಂಧುಗಳೇ...
ಬೆಳಿಗ್ಗಿನ ತಿಂಡಿಗೆ ನಿರಂತರವಾಗಿ ನೀರುದೋಸೆ ಒಂದನ್ನೇ ಮಾಡಿದುದರ ಪರಿಣಾಮ ಫೇಸ್ಬುಕ್ ನ ಜನ ಸಮುದಾಯ ಅಲ್ಲಲ್ಲಿ ರೊಚ್ಚಿಗೆದ್ದಿರುವುದು ಲೈಟಾಗಿ ಬೆಳಕಿಗೆ ಬಂದಿದೆ.
ತಾಳ್ಮೆಯ ಡ್ಯಾಮ್ ಒಡೆದು ಹೋಗಿ ನೇರವಾಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದು ಮಾತ್ರವಲ್ಲ ಇದೊಂದು ಮಾನಸಿಕ ಕಿರುಕುಳ ಎಂದು ಮನಸ್ಸಿನಲ್ಲಿಯೇ ಕತ್ತಿ,ಲಾಂಗ್ ಹಾಗೂ ಹರಿತವಾದ ಮಚ್ಚು ಮಸೆಯುತ್ತಿರುವುದು ಅರಿವಿಗೆ ಬಂದಿದೆ.
ಯಾಕಪ್ಪಾಆಆಆಆ...ಇವನು ಹೀಗೆ ಮಾಡಿ ಸಾಯ್ತಾನೆ,ನಮ್ಮ ನೆಚ್ಚಿನ ನೀರುದೋಸೆಯ ಮೇಲೆ ನಮಗೆಯೇ ಜಿಗುಪ್ಸೆ ಬರುವಂತೆ ಮಾಡುತ್ತಿದ್ದಾನೆ.. ಎಂದು ಹೆಂಗೆಳೆಯರು,ಮಹಿಳಾಮಣಿಗಳು ಹಲ್ಲುಗಳನ್ನು ಕಟ ಕಟ ಎಂದು ಕಡಿಯುತ್ತಾ ಹಿಡಿಶಾಪ ಹಾಕುತ್ತಿರುವುದು ಸ ಮಸುಕು ಮಸುಕಾಗಿ ಗೋಚರಿಸುತ್ತಿದೆ.
ಕೆಲವು ಪುರುಷ ಪುಂಗವರು ಹಾಗೂ ವೀರಬಾಲಕರು..."ಇಲ್ಲ.. ಇನ್ನು ಸಹಿಸಲು ಸಾಧ್ಯವೇಏಏಏಏ ಇಲ್ಲ.. ಇವನನ್ನು ಎತ್ತಿ ಬಿಡುವ.." ಎಂದು ಅಲ್ಲಲ್ಲಿ ಗಂಭೀರವಾಗಿ ಡಿಸ್ಕಸನ್ ಮಾಡುತ್ತಿರುವುದು ಸ ಬೆಳಕಿಗೆ ಬಂದಿದೆ.
ನನ್ನ ಫೇಸ್ಬುಕ್ ಗೆ ಹೊಸದಾಗಿ ಲಗ್ಗೆ ಹಾಕಿದವರು "Kaun Hai yeh log -kaha se aate hai yeh log.. " ಎಂದು ಅನ್ಯಗ್ರಹ ಜೀವಿಯೊಂದನ್ನು ಮೇಲಿಂದ ಕೆಳಗೆ ನೋಡಿದಂತೆ ನೋಡುತ್ತಿರುವ ಆ ಮಾಹಿತಿಯೂ ಬಂದಿದೆ.
ಬಂಧುಗಳೇ & ಬ್ರದರ್ ಗಳೇ..ಮಹಿಳಾಮಣಿಗಳೇ,ಪುರುಷ ಪುಂಗವರೇ & ನನ್ನ ನೆಚ್ಚಿನ ವೀರಬಾಲಕರೇ... ಇಷ್ಟೆಲ್ಲ ವಿಷಯ ಸ್ಪಷ್ಟವಾಗಿ ನನಗೆ ಅರಿವಾದ ಮೇಲೆ.. ನಾನು ಹೇಳತಕ್ಕಂತಹ & ನಿಮಗೆಲ್ಲ ಸ್ಪಷ್ಟ ಪಡಿಸತಕ್ಕಂತಹ ಆ ಒಂದು ಮಾತು ಏನೆಂದರೆ ಬಂದುಗಳೇ....
ಬೇಕಿದ್ದರೆ ಪ್ರಾಣ ಹೋಗಲಿ,ಜೀವ ಇರುವ ತನಕವೂ.. ನಮ್ಮ ಬಾವಿಯಲ್ಲಿ,ಪಕ್ಕದ ಬಾವಿಯಲ್ಲಿ & ಭೂಮಿಯಲ್ಲಿ ನೀರು ಇರುವ ತನಕವೂ.. ನಾನು ನೀರುದೋಸೆ ಮಾತ್ರ ಮಾಡುವುದೇ... 🏃🏻♂️🏃🏻♂️🏃🏻♂️😅🤟
#ವಿಷಯ_ಎಂತ_ಗೊತ್ತುಂಟಾ
Ab Pacchu
Moodubidire
Comments
Post a Comment