ನೀರುದೋಸೆಗೊಂದು ಸಿಹಿಯಾದ ಕಾಯಿಹಾಲು



ನೀರುದೋಸೆಗೆ ಕಾಯಿಹಾಲು ಜೊತೆ ಆದಾಗ ಅದರ ಮುಂದೆ ಬೇಳೆ ಹೋಳಿಗೆ,ಕಾಯಿ ಹೋಳಿಗೆಗಳು ಕೂಡ ತೀರಾ ಸಪ್ಪೆ ಎಂದು ಅನ್ನಿಸಿಬಿಡುತ್ತದೆ. 



ಎಲ್ಲಿಯ ಬೆಲ್ಲ,ಎಲ್ಲಿಯ ತೆಂಗಿನಕಾಯಿ.. ಎರಡೂ ಜೊತೆಯಾಗಿ ಹಾಲು ಆದಾಗ,ಆಹಾ..ಅದೆಂತಹ ಸಿಹಿ..ಅದೆಷ್ಟು ರುಚಿ.

ನೀರುದೋಸೆ,ಗುಂಡ,ಮೂಡೆ ಹಾಗೂ ಸೇಮೆದಡ್ಡೆಯ ಬಲು ದೊಡ್ಡ ದೋಸ್ತಿ ಅಂದರೆ ಅದು ಎಂದಿಗೂ ಬಹುಶಃ ಇದೇ ಇರಬೇಕು.. 


ನೀರುದೋಸೆ ಹೆಚ್ಚಿನವರಿಗೆ ಮಾಡ್ಲಿಕ್ಕೆ ಗೊತ್ತಿದೆ ಹಾಗಾಗಿ ಅದರ ಬಗ್ಗೆ ಇಲ್ಲಿ ಬರೆಯಲು ಹೋಗುವುದಿಲ್ಲ. ಬೇರೆ ಒಂದು ಪೋಸ್ಟ್ ಅಲ್ಲಿ ನೀರುದೋಸೆ ಮಾಡುವುದು ಹೇಗೆ ಎಂದು ಸವಿವರವಾಗಿ ಬರೆದಿದ್ದೇನೆ ಕೂಡ.


#ಈಗ_ಕಾಯಿ_ಹಾಲು_ಮಾಡುವುದು_ಹೇಗೆ_ಎಂದು_ನೋಡೋಣ.. 


ಕಾಯಿ ಮಾಡುವುದು ಕೂಡ ಬಹಳ ಸುಲಭ. 


ಇದಕ್ಕೆ ಮೂರು ಕಪ್ಪು ತೆಂಗಿನತುರಿ,ಒಂದೂವರೆ ಕಪ್ಪು ಬೆಲ್ಲ(ತುಂಬಾ ಸಿಹಿ ಬೇಕಾದವರು ಜಾಸ್ತಿ ಹಾಕಿಕೊಳ್ಳಿ), ಸ್ವಲ್ಪ ಎಲಕ್ಕಿ ಪುಡಿ ಇದ್ದರೆ ಸಾಕು.ಎಲಕ್ಕಿ ಕೂಡ ಬೇಕಾಗಿಲ್ಲ.ಸ್ವಲ್ಪ  ಪರಿಮಳ ಬೇಕಿದ್ದವರು ಹಾಕಿಕೊಳ್ಳಬಹುದು.ಹಾಕದಿದ್ದರು ಕಾಯಿ ಹಾಲು ರುಚಿಯಾಗಿರುತ್ತದೆ. 


ಕಾಯಿ ತುರಿ ಆಗಷ್ಟೇ ತುರಿದ ಫ್ರೆಶ್ ತೆಂಗಿನಕಾಯಿಯ ತುರಿಯೇ ಆಗಿರಲಿ.ಅದನ್ನುಮಿಕ್ಸರ್ ಹಾಕಿ ಸ್ವಲ್ಪವೇ ಸ್ವಲ್ಪ ನೀರು ಹಾಕಿ ಅದರಿಂದ ಹಾಲು ತೆಗೆಯಿರಿ.ಮೊದಲ ಸಲ ತೆಗೆಯುವ ದಪ್ಪ ಹಾಲು, ಎರಡನೆಯ ಸಲ ತೆಗೆಯುವ ತೆಳು ಹಾಲು ಎರಡೂ ಇರಲಿ.ನಂತರ ಎರಡನ್ನೂ ಮಿಕ್ಸ್ ಮಾಡಿ. 


ಆ ನಂತರ ಈ ಹಾಲಿಗೆ ಬೆಲ್ಲವನ್ನು ತುರಿದು ಹಾಕಿ,ಪುಡಿ ಮಾಡಿ ಇಟ್ಟುಕೊಂಡಿರುವ ಎಲಕ್ಕಿ ಪುಡಿಯನ್ನು ಕೂಡ ಸೇರಿಸಿ ಬಿಡಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿದರೆ ಸಿಹಿಯಾದ ರುಚಿಯಾದ ಕಾಯಿ ಹಾಲು ರೆಡಿ. ಕೆಲವರು ಚಿಟಿಕೆ ಉಪ್ಪು ಕೂಡ ಸೇರಿಸುತ್ತಾರೆ.


ಇನ್ನು ಕೆಲವರು ಎಲ್ಲವನ್ನೂ ಒಟ್ಟಿಗೆ ಮಿಕ್ಸರ್ ಗೆ ಹಾಕಿ ರುಬ್ಬಿ,ಆ ನಂತರ ಅದನ್ನು ಚೆನ್ನಾಗಿ ಸೋಸಿ ಕೂಡ ಕಾಯಿಹಾಲು ಮಾಡುತ್ತಾರೆ.ಹಾಗೇ ಕೂಡ ಮಾಡಿಕೊಳ್ಳಬಹುದು.ಈ ರೀತಿ ಮಾಡುವಾಗ ಬದಾಮ್,ಗಸಗಸೆ ಕೂಡ ಹಾಕಿಕೊಳ್ಳುತ್ತಾರೆ. ಅದೂ ಚೆನ್ನಾಗಿರುತ್ತದೆ ಸ್ವಲ್ಪ ರಿಚ್ ಆಗಿ.ನಾನು ಹೇಳಿದಂತೆ ಸಿಂಪುಳ್ ಆಗಿ ಮಾಡಿದರೆ ಅದೂ ಕೂಡ ಚೆನ್ನಾಗಿರುತ್ತದೆ...


ಒಟ್ಟಿನಲ್ಲಿ ಕಾಯಿಹಾಲಿನಲ್ಲಿ ನೀರುದೋಸೆಯನ್ನು ಒಂದರ ನಂತರ ಒಂದು ಬಾರಿಸುತ್ತಿದ್ದರೆ,ಆ ಕ್ಷಣಕ್ಕೆ ಅದೇ ಸ್ವರ್ಗ... ನೀರುದೋಸೆ ಮೆಲ್ಲಗೆ ಅದರಷ್ಟಕ್ಕೆ ಖಾಲಿ ಆಗಿ ಜಾಗ ಖಾಲಿ ಮಾಡಿದ್ದು ಗೊತ್ತೇ ಆಗುವುದಿಲ್ಲ..ದೋಸೆ ಖಾಲಿ ಆದ ನಂತರ ಹಾಗೇ ಲೋಟದಲ್ಲಿ ಕಾಯಿಹಾಲು ಹಾಕಿಕೊಂಡು ಕುಡಿಯುವುದು ಉಂಟಲ್ಲಾ.. ಅದು ಯಾವ ಬದಾಮ್ ಹಾಲಿಗಿಂತ ಕೂಡ ಕಮ್ಮಿ ಏನಲ್ಲ ಬಿಡಿ.ಅದರ ಸುಖ ಅನುಭವಿಸಿದವರಿಗೆ ಅಷ್ಟೇ ಗೊತ್ತು. 




#ನೀರ್ದೋಸೆ_ಪೇರ್

ತುಳುನಾಡ್ ಫುಡ್


.....................................................................................


#ಪಚ್ಚುಪಾಕಗಳು 

ab pacchu

Moodbidri

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ