ಅಮ್ಮಚ್ಚಿ ಎಂಬ ನೆನಪು





 #ಅಮ್ಮಚ್ಚಿ_ಎಂಬ_ನೆನಪು | Prime



ಕೇಳುವ ಮನಸ್ಸಿದ್ದರೆ ಈ ಹಳ್ಳಿಯ ಪ್ರತಿಯೊಂದು ಜೀವಗಳು,ಜೀವ ಇಲ್ಲದೇ ಇರುವಂತವುಗಳು ಕೂಡ ನಮಗೊಂದು ತಮ್ಮ ತಮ್ಮ ಎದೆಯೊಳಗಿನ ಕಥೆ ಹೇಳಲು ಹೊರಡುತ್ತವೆ..


ನಾವು ಸುಮ್ಮನೆ ಕೇಳುವ ಮನಸ್ಸು ಮಾಡಬೇಕು ಅಷ್ಟೇ. 


ಇಲ್ಲಿ ಹಪ್ಪಳ ಸಂಡಿಗೆ ಕೊಟ್ಟಿಗೆಗಳ ನಡುವೆ ಮನೆ ಮನೆಯ ಚಾಕಿರಿ ಮಾಡುವ ಪುಟ್ಟಮ್ಮತ್ತೆ ಎಂಬ ಅಜ್ಜಿಯ ಹೊರಾಟದ ಬದುಕಿನ ಕಥೆ ಇದೆ.ನಡು ಬಗ್ಗಿಸಿಯೇ ನಡೆದರೂ ಅವಳು ಕಠಿಣ ಬದುಕಿನೆದುರು ಎಂದಿಗೂ ಬಗ್ಗಿದವಳಲ್ಲ. 




ಇನ್ನಿಲ್ಲದಂತೆ ಹುಚ್ಚಿ ಎನ್ನಿಸಿಕೊಂಡರೂ,ಮನೆಯವರಿಂದಲೂ  ಹುಚ್ಚಿ ಎಂದೇ ಪದೇ ಪದೇ ಕರೆಸಿಕೊಂಡರೂ.. ಅಕ್ಕು ಕೂಡ ತಾನೊಂದು ಕಥೆ ಹೇಳುವೆ ಎಂದು ಹೇಳುವ ಆ ಕೊನೆಯ ಕಥೆಗೆ ಮನೆ ಮಂದಿಯೇ ತಲೆ ತಗ್ಗಿಸದೇ ಇರುವುದಿಲ್ಲ. 



ವೆಂಕಪ್ಪಯ್ಯನ ಮೋಹ,ದಾಹ,ತೀರದ ಆಸೆ.. ಕೊನೆಯವರೆಗೂ ನಿಲ್ಲಲೇ ಇಲ್ಲ.



ಸೀತಾ ಎಂಬ ಪುಟ್ಟ ಹುಡುಗಿಗೆ ಅಮ್ಮಚ್ಚಿಯ ಗೆಳೆತನಕ್ಕಿಂತ ದೊಡ್ಡ ಪ್ರಪಂಚವೇ ಆ ಹಳ್ಳಿಯಲಿಲ್ಲ.ಅವಳಿಗೆ ಅಮ್ಮಚ್ಚಿ ಬಿಟ್ಟರೆ ಬೇರೆ ಏನೂ ಇಷ್ಟವಿಲ್ಲ.. ಅವಳು ಅಮ್ಮಚ್ಚಿಯ ನೆನಪಿನಲ್ಲಿಯೇ ಹಾಗೇ ಬದುಕಿ ಬಿಟ್ಟವಳು. 



ತನಗೆ ಇಷ್ಟ ಬಂದಂತೆ ಬದುಕ ಬಯಸುವ ಅದೇ ಅಮ್ಮಚ್ಚಿ ಎಂಬ ಪುಟ್ಟಮ್ಮತ್ತೆಯ ಆ ಮೊಮ್ಮಗಳಿಗೆ.. ಹಳ್ಳಿ ಅವಳಿಗೆ ಇಷ್ಟ ಬಂದಂತೆ ಬದುಕಲು ಕೊನೆಗೂ ಬಿಡುವುದಿಲ್ಲ! 



ಹಳ್ಳಿಯ ದೀಪಾವಳಿ ಚಂದ.


ಮನೆ ಮತ್ತು ಮನಸ್ಸುಗಳು ಕೂಡ ಅಷ್ಟೇ ಚಂದ.


ಇಲ್ಲಿಯ ಕಥೆಗಳು ಬೇಡ ಎಂದರೂ ಇನ್ನಿಲ್ಲದಂತೆ ಕಾಡುತ್ತವೆ. 


ನೋಡಿ.. ನಿಮಗೂ ಇಷ್ಟ ಆಗಬಹುದು "ಅಮ್ಮಚ್ಚಿ ಎಂಬ ನೆನಪು".


ಎಲ್ಲಾ ಮೂವಿ ಎಲ್ಲರಿಗೂ ಇಷ್ಟ ಆಗಬೇಕಾಗಿಲ್ಲ.ಇದೂ ಕೂಡ ಅಂತಹದ್ದೇ ಸರಕು.ಇಂತಹದ್ದೇ ಮೂವಿ ಇಷ್ಟ ಪಡುವವರಿಗೆ ಇದು ಒಂದು ಚೂರು ಮೋಸ ಮಾಡುವುದಿಲ್ಲ.


ಕುಂದಾಪುರ ಕನ್ನಡದ ಆ ಸೊಬಗು,ಆ ಸೊಗಡು ಎಂದಿಗೂ ಚಂದವೇ. 


ಅದು ಇಲ್ಲಿ ಯಥೇಚ್ಛವಾಗಿದೆ..ಕಥೆಯ ಪೂರ್ತಿ ಆವರಿಸಿಕೊಂಡಿದೆ.. ಮತ್ತು ತುಂಬಾನೇ ಇಷ್ಟವಾಗುತ್ತದೆ ಕೂಡ. 


ಈ ಮೂವಿ ವೈದೇಹಿಯವರ ಕಥೆಗಳನ್ನು ಆಧಾರಿಸಿ ಮಾಡಲಾಗಿದೆ. Champa P Shetty ಯವರು ಇದರ ನಿರ್ದೇಶನ ಮಾಡಿದ್ದಾರೆ. Raj B. Shetty, Vyjayanti V Adiga, Diya Palakkal, Deepika Aradhya,Geetha Surathkal,Chandrahas Ullal, Radhakrishna Urala,Vishwanatha Urala ಮುಂತಾದವರ ಸೊಗಸಾದ ಅಭಿನಯ ಇದಕ್ಕಿದೆ.


Kashinath Pattar ಅವರ ಸಂಗೀತ ಅಂತು ಕಥೆಯನ್ನು ಬೇರೆಯ ಸ್ತರಕ್ಕೆ ಕರೆದೊಯ್ದು ಬಿಡುವಂತಹದ್ದು. "ಹೊಳೆವ ಹೊಳೆಯಾಚೆಗೆ..", "ಸರಪಳಿ ಇಲ್ಲದೆ...", "ಏಳು ಸುತ್ತಿನ ಕೋಟೆ...", " ಕಿಟಕಿಯಾಚೆಯ ಕಾಲ.." ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿದೆ. 




#ಅಮ್ಮಚ್ಚಿ_ಎಂಬ_ನೆನಪು | Prime 

Kannada Movie 

Family Drama

Year - 2018 


#Movies 

Ab Pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ