ನನ್ನ ಪ್ರಕಾರ




 #ನನ್ನ_ಪ್ರಕಾರ | Prime



ಇದರಲ್ಲಿ ಮೊದಲಿಗೆ ಒಂದು ಆಕ್ಸಿಡೆಂಟ್ ನಡೆಯುತ್ತದೆ. 


ರಾತ್ರಿ ಹೊತ್ತಿನಲ್ಲಿ ಡ್ರೈವ್ ಮಾಡಿಕೊಂಡು ಹೋಗುತ್ತಿರುವ ಹುಡುಗಿಯೊಬ್ಬಳ ಕಾರಿನ ಮೇಲೆ ರಾಬರಿ ಗ್ಯಾಂಗ್ ನವರು ಕಾರು ನಿಲ್ಲಿಸುವುದಕ್ಕಾಗಿ ಕಾರಿನ ಗ್ಲಾಸ್ ಮೇಲೆ ಒಂದಷ್ಟು ಮೊಟ್ಟೆ ಹೊಡೆಯುತ್ತಾರೆ! 


ಹೆದರಿದ ಹುಡುಗಿ ಕಾರನ್ನು ನಿಲ್ಲಿಸದೆ ಮತ್ತಷ್ಟು ವೇಗವಾಗಿ  ಡ್ರೈವ್ ಮಾಡುತ್ತಾಳೆ.


ಆದರೆ ಡ್ರೈವ್ ಮಾಡಲು ಏನೂ ಕಾಣದೇ ಕಾರ್ ಒಂದು ಕಡೆ ಸ್ಕಿಡ್ ಆಗಿ.. ಕಣಿವೆಯೊಂದಕ್ಕೆ ಬಿದ್ದು ಬಿಟ್ಟು ಕಾರಿನ ಫ್ಯೂಲ್ ಟ್ಯಾಂಕ್ ಒಡೆದು ಹೋಗಿ ಕಾರು ಹಾಗೇ ಹೊತ್ತಿಕೊಂಡು ಉರಿಯುತ್ತದೆ.


ಡ್ರೈವಿಂಗ್ ಸೀಟ್ ನಲ್ಲಿದ್ದ ಹುಡುಗಿ ಕೂಡ ಸ್ಪಾಟ್ ನಲ್ಲಿಯೇ ಸತ್ತು ಹೋಗುತ್ತಾಳೆ! 


ಪೋಲಿಸರು ತನಿಖೆ ಶುರು ಮಾಡುತ್ತಾರೆ.


ಕಾರಿನಲ್ಲಿ ಸಿಕ್ಕಿದ ಸುಳಿವುಗಳ ಆಧಾರದ ಮೇಲೆ ಆ ಹುಡುಗಿಯ ಭಾಯ್ ಫ್ರೆಂಡೇ ಈ ಕೇಸಿನಲ್ಲಿ ಮೊದಲಿಗೆ ಸಿಕ್ಕಿ ಬೀಳುತ್ತಾನೆ.


ಅವನಿಗೆ ಏರೋಪ್ಲೇನ್ ಹತ್ತಿಸಿ ನಡೆದ ವಿಷಯವನ್ನು ಬಾಯಿ ಬಿಡಲು ಹೇಳುತ್ತಾರೆ.


ಅವನು ಪೋಲಿಸರಿಗೆ ಒಂದು ಕಥೆ ಹೇಳುತ್ತಾನೆ.


ಅದರಲ್ಲಿ ಅವನು ತನ್ನ ಗರ್ಲ್ ಫ್ರೆಂಡ್ ಗೆ ಚೆನ್ನಾಗಿ ಹೊಡೆದು, ಕಾರಿನ ಡಿಕ್ಕಿಯಲ್ಲಿ ನಾನೇ ಹಾಕಿದ್ದೆ... ಎಂಬ ಕಥೆ ಹೇಳುತ್ತಾನೆ.


ಪೋಲಿಸರು ಡೌಟ್ ಬಂದು ಪುನಃ ಆ ಆಕ್ಸಿಡೆಂಟ್ ಆದ ಕಾರಿನ  ಡಿಕ್ಕಿಯನ್ನು  ಓಪನ್ ಮಾಡಿ ನೋಡುತ್ತಾರೆ. 


ಆಗ ಅಲ್ಲಿ ಅವನು ಹೇಳಿದಂತೆಯೇ ಅವನ ಗರ್ಲ್ ಫ್ರೆಂಡ್ ನ ಶವ ಅಲ್ಲಿರುತ್ತದೆ!


ಅವಳನ್ನು ಅವನೇ  ಕೊಂದದ್ದು ಎಂದು ಕೂಡ ಪೋಲಿಸರಿಗೂ ಕೂಡ ಗೊತ್ತಾಗಿ ಬಿಡುತ್ತದೆ. 



ಹಾಗಾದರೆ ಆ ಕಾರ್ ಡ್ರೈವ್ ಮಾಡಿಕೊಂಡು ಹೋಗಿ ಸತ್ತು ಹೋದ ಆ ಹುಡುಗಿ ಯಾರು? 


ಅವಳ ಭಾಯ್ ಫ್ರೆಂಡ್ ಯಾರು? 


ಪರಸ್ಪರ ಪರಿಚಯವೇ ಇಲ್ಲದ ಈ ಜೋಡಿಗಳ ಕಥೆಗೂ ಆ ಜೋಡಿಗಳ ಕಥೆಗೂ ನಡುವಿನ ಲಿಂಕ್ ಏನು?


Actually ಇಬ್ಬರ ಹುಡುಗಿಯರ ಹೆಸರು ಕೂಡ ಒಂದೇ ಆಗಿರುವ ಈ ಗೊಂದಲದ ಕಥೆಯಲ್ಲಿ ಮೊದಲು ನಡೆದಂತಹ ಆ ಕಾರಿನ ಆಕ್ಸಿಡೆಂಟ್ ನಿಜವಾಗಿಯೂ ಅದು ಆಕ್ಸಿಡೆಂಟಾ..? ಅಥವಾ ಅದು ಎಷ್ಟೊಂದು ಕೊಲೆ?!! 


ಅದಕ್ಕಾಗಿ ನೀವು ಈ ಮೂವಿಯನ್ನೇ ನೋಡಬೇಕು. 


ಈ ಮೂವಿಯನ್ನು Vinay Balaji ಕಥೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ.ಈ ಚಿತ್ರದಲ್ಲಿ Kishore,Priyamani,Mayuri, Pramod Shetty,Girija Lokesh, Arjun Yogi, Niranjan Deshpande ಮುಂತಾದವರು ಅಭಿನಯಿಸಿದ್ದಾರೆ. 



#ನನ್ನ_ಪ್ರಕಾರ | Prime 

Kannada Movie 

Mystery Thriller 

Year - 2019


#Movies 

Ab Pacchu

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!