Chernobyl
#Chernobyl | Hotstar
ಆ ಸಭೆಯಲ್ಲಿ Mikhail Gorbachev ಕೂಡ ಇದ್ದ.
ಅಂದು ಪಾರ್ಟಿಯ ಜನರಲ್ ಸೆಕ್ರೆಟರಿ ಆಗಿದ್ದ ಅವನ ಅಧ್ಯಕ್ಷತೆಯಲ್ಲಿಯೇ ಆ ದಿನದ ಆ ಸಭೆ ಕೂಡ ನಡೆದಿತ್ತು.
ಯಾವುದೋ ವಿಷಯದ ಚರ್ಚೆ ಮುಗಿದ ನಂತರ ಕುಶಲೋಪರಿಯ ಮಾತುಗಳೊಂದಿಗೆ ನಿಧಾನಕ್ಕೆ ಉಪ್ಪಿಟ್ಟು ಶೀರಾ ತಿಂದು,ಬಿಸಿ ಚಹಾ ಹೀರಿ ಕೊನೆಯಲ್ಲಿ ನಗು ನಗುತ್ತಾ ಬಂದಿದ್ದವರ ಕೈ ಕುಲುಕಿ ಮೇಲೆಳುವ ನಾರ್ಮಲ್ ಟೀ- ಪಾರ್ಟಿಯಂತಹ ಮೀಟಿಂಗ್.. ಖಂಡಿತವಾಗಿಯೂ ಅದಾಗಿರಲಿಲ್ಲ!
Pripyat ನಗರದ Chernobyl Nuclear Power Plant ನ ನಾಲ್ಕನೇ Reactor ಒಂದು ತನ್ನ ಹೃದಯ ಎಂದೆನಿಸುವ Core ಅನ್ನೇ ಹರಿದುಕೊಂಡು,ಊರ್ಧ್ವಮುಖವಾಗಿ ನೆಲದಿಂದ ಆಕಾಶಕ್ಕೆ ಇಂಟೆನ್ಸಿವ್ ಲೇಸರ್ ಬೀಮ್ ಒಂದನ್ನು ಹರಿಬಿಟ್ಟಂತೆ ಪ್ರಖರ ವಿಕಿರಣವನ್ನು ಹೊರ ಸೂಸುತ್ತಾ ನಿಂತುಕೊಂಡು ಅದಾಗಲೇ ಬಹಳ ಹೊತ್ತೇ ಆಗಿತ್ತು!!
ಆದರೆ ಆ ಸಭೆಯಲ್ಲಿ ಇದ್ದಂತಹ ನಡೆದ ಘಟನೆಗೆ ಸ್ಪಷ್ಟನೆ ಕೊಡಬೇಕಾಗಿದ್ದ ಜವಾಬ್ದಾರಿಯುತ ಅಧಿಕಾರಿ ವರ್ಗಕ್ಕೆ ಸಂಭವಿಸಿದ್ದು ಎಂತಹ ಘನಘೋರ ದುರಂತ ಎಂದು ಗೊತ್ತಿದ್ದರೂ ಸಹ... ಮಂಗಗಳನ್ನು ಒಡಿಸಲು ಗರ್ನಲ್ ಒಂದನ್ನು ಸಿಡಿಸಲಾಗಿದೆ,ಇಲ್ಲವೇ ಸಂಭ್ರಮದ ಜಾತ್ರೆಯಲ್ಲೊಂದು ದೊಡ್ಡ ಸದ್ದಿನ ಕದೋನಿಯಂತಹ ಸಿಡಿಮದ್ದು ಸಿಡಿದಿದೆ ಮತ್ತು ಅದರ ತೀವ್ರತೆಗೆ Plant ನ ಒಂದಷ್ಟು ಸಿಮೆಂಟ್ ಚೆಕ್ಕೆಗಳು ಗಾಳಿಯಲ್ಲಿ ಹಾರಿ ನೆಲದಲ್ಲಿ ಅಲ್ಲಲ್ಲಿ ಬಿದ್ದಿದೆ ಅಷ್ಟೇ.. ಎಂಬ ರೇಂಜಿಗೆ ಬಹಳ ಸರಳವಾಗಿ ಆದರೆ ಅತ್ಯಂತ ಬೇಜವಾಬ್ದಾರಿಯಿಂದ ಮಾತಾಡಿ.. ಇದೆಲ್ಲಾ Nuclear Plant ಗಳಲ್ಲಿ ನಡೆಯುವ ಮಾಮೂಲಿ ವಿಷಯ,Radiation ಕೂಡ ಅಂತಹ ದೊಡ್ಡ ಪ್ರಮಾಣದಲ್ಲಿ ಏನೂ ಇಲ್ಲ, Nuclear Plant ನ Deputy Chief Engineer ಕೂಡ ಮನುಷ್ಯನ ಚೆಸ್ಟ್ X-ray ಯ 3.6 Roentgen ಪ್ರಮಾಣದಷ್ಟು ವಿಕಿರಣ ಅಷ್ಟೇ ಹೊರ ಸೂಸಿದೆ ಎಂದು ತಿಳಿಸಿದ್ದಾರೆ,ಹೊರಗಿನ ಯಾವುದೇ ವೈರಿಗಳ ದಾಳಿ ಕೂಡ ನಡೆದಿಲ್ಲ ಎಂದು KGB First Deputy Chairman ಕೂಡ ಸ್ಪಷ್ಟ ಪಡಿಸಿದ್ದಾರೆ... ಆದ್ದರಿಂದ ಎಲ್ಲವೂ ನಮ್ಮ Control ನಲ್ಲಿಯೇ ಇದೆ ಎಂದು Gorbachev ಮುಂದೆ ಗಿಣಿಪಾಠ ಒಪ್ಪಿಸಿದಂತೆ ವರದಿಯೊಂದನ್ನು ಮಂಡನೆ ಮಾಡಿದ್ದರು ಆ ಸಭೆಯಲ್ಲಿದ್ದ ಅಧಿಕಾರಿಗಳು!!
ಹೇಗೆ ಕಲ್ಲಿದ್ದಲನ್ನು ಉರಿಸಿ ನೀರಿನ ಹಬೆಯ ಮೂಲಕ Steam Turbine ಗಳನ್ನು ಗಿರ ಗಿರ ತಿರುಗಿಸಿ ಆ ಮೂಲಕ Coal based Thermal Power Plant ಗಳಲ್ಲಿ ಊರನ್ನು ಜಗಮಗಿಸುವ Electricity ಜನರೇಟ್ ಮಾಡುತ್ತೆವೆಯೋ ಅದೇ ರೀತಿ ಈ Uranium 235 ಕೂಡ ಜಸ್ಟ್ ಒಂದು Fuel ಆಗಿರಬಹುದು ಅಷ್ಟೇ ಎಂದು ತಿಳಿದಿದ್ದ Mikhail Gorbachev ಗೆ ಕಂಟ್ರೋಲ್ ತಪ್ಪಿದರೆ ಈ U 235 ಯ ಪುಟ್ಟ ಅಣುಗಳೇ ಸ್ವತಃ ಪರಮಾಣು ಬಾಂಬ್ ಆಗಿ ಬದಲಾಗಿ Plant ಅನ್ನೇ ಸ್ಪೋಟಿಸಿ ಬಿಡಬಲ್ಲದು ಎಂಬುದರ ಮಾಹಿತಿ ಎಷ್ಟು ತಿಳಿದಿತ್ತೋ ದೇವರಾಣೆಗೂ ಗೊತ್ತಿಲ್ಲ.. ಏಕೆಂದರೆ ಅದಕ್ಕಿಂತ ಮೊದಲು ಯಾವುದೇ Nuclear Power Plant ನಲ್ಲಿ ಅಂತಹದ್ದೊಂದು ಘಟನೆಯೇ ಅಲ್ಲಿಯವರೆಗೆ ನಡೆದಿರಲಿಲ್ಲ!
ಎಲ್ಲವನ್ನೂ ಕೇಳಿಸಿಕೊಂಡ Gorbachev ನೇರವಾಗಿ ಮತ್ತೆ ಅಧಿಕಾರಿಗಳನ್ನೇ ಕೇಳಿದ್ದ.. ಎಷ್ಟು ದಿನದಲ್ಲಿ ಇದೆಲ್ಲಾ ಸರಿ ಮಾಡಬಹುದು ?
ಅದಕ್ಕೊಬ್ಬ ಅಧಿಕಾರಿ ಎದ್ದು ನಿಂತು ಹೇಳಿದ್ದ.. ಹೆಚ್ಚೆಂದರೆ ಒಂದು,ಎರಡು ದಿನ ಅಷ್ಟೇ .. ಎಲ್ಲವೂ ನಮ್ಮ ಕಂಟ್ರೋಲ್ ನಲ್ಲಿಯೇ ಇದೆ.... ಎಂದು ಮತ್ತೊಮ್ಮೆ "ಕಂಟ್ರೋಲ್ ನಲ್ಲಿದೆ" ಎಂಬುದನ್ನು ಒತ್ತಿ ಒತ್ತಿ ಹೇಳಿದ್ದ ಆ ಅಧಿಕಾರಿ.
ಆಯಿತಲ್ಲಾ ಹಾಗಾದರೆ.. ಇನ್ನು ಈ ಮೀಟಿಂಗ್ ಅನ್ನು ಇಲ್ಲಿಗೆಯೇ ಮುಗಿಸಿ ಬಿಡುವ.. ಎಂದು ತನ್ನ ಫೈಲ್ ಅನ್ನು ಮಡಚಿ ಅಲ್ಲಿಂದ ಎದ್ದು ಹೊರಡಲುನುವಾದ Gorbachev ಗೆ,ಅಲ್ಲಿಯವರೆಗೆ ಎಲ್ಲರ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನೆ ಕುಳಿತಿದ್ದ RBMK Reactor ಗಳ ತಜ್ಞ,Nuclear Scientist ಆಗಿದ್ದಂತಹ Kurchatov Institute ನ Deputy Director ಪ್ರೊಫೆಸರ್ Valery Legasov ಮೇಜು ಕುಟ್ಟಿ ಆಕ್ರೋಶದಿಂದ ಹಾಗೂ ಅಷ್ಟೇ ಭಯದಿಂದ ಬೆದರುತ್ತಾ ಬೆವರುತ್ತಾ ಹೇಳಿದ್ದು ಇಷ್ಟೇ....
ನೋ..
ನೋ.....
ಇವರುಗಳು ಹೇಳುವಂತೆ ಇದು ಎರಡು ದಿನದಲ್ಲಿ ರಿಪೇರಿ ಆಗುವ ವಿದ್ಯಮಾನ ಅಲ್ಲವೇ ಅಲ್ಲ.ಇವರುಗಳು ಹೇಳುವಂತೆ ಹೊರಗಿನ ಪ್ಲೋರ್ ನಲ್ಲಿ ಬಿದ್ದಿರುವುದು ಕಟ್ಟಡದ ಯಾವುದೇ Debris ಕೂಡ ಅಲ್ಲ.ಅದು Reactor Core ನ ಒಳಗೆ ಇರಬೇಕಾದ Graphite.ಇದರ ಅರ್ಥ ಯಾವುದು ಎಂದಿಗೂ ಆಗಬಾರದೋ ಅದೇ ಆಗಿದೆ..Reactor ಅದಾಗಲೇ Explode ಆಗಿದೆ!!
ನೀವು ಎಲ್ಲವನ್ನೂ ತೇಪೆ ಹಾಕಿ ಸರಿ ಮಾಡಿ ಬಿಡಬಹುದು.ಆದರೆ ಇದರ ಎಫೆಕ್ಟ್ಸ್ ಎರಡು ಮೂರು ದಿನವಲ್ಲ... 100, 500,1000 ವರ್ಷ ಮಾತ್ರವಲ್ಲ ತಪ್ಪಿದರೆ 50,000 ವರ್ಷಗಳ ವರೆಗೂ ಇಡೀಯ ಸೋವಿಯತ್ ಒಕ್ಕೂಟವನ್ನು ಬೆಂಬಿಡದ ಭೂತದಂತೆ ಕಾಡಲಿದೆ.. ಬರೀಯ ಸ್ಮಶಾನವಲ್ಲ ಅಕ್ಷರಶಃ ನರಕವೇ ನಿರ್ಮಾಣವಾಗಿ ಬಿಡುತ್ತದೆ ಮತ್ತು ನಮಗೆ ಇದನ್ನು ಅಷ್ಟು ಸುಲಭದಲ್ಲಿ ಹ್ಯಾಂಡಲ್ ಮಾಡಲು ಎಂದಿಗೂ ಸಾಧ್ಯವಿಲ್ಲ!!
ಅರ್ಜೆಂಟ್ ನಲ್ಲಿ ಮೀಟಿಂಗ್ ಮುಗಿಸಿ ಅಲ್ಲಿಂದ ಎದ್ದು ಹೊರ ನಡೆಯಲು ಎದ್ದು ನಿಂತಿದ್ದ ಬಕ್ಕ ತಲೆಯ ಮೇಲೊಂದು ಯಾವುದೋ ಭೂಪ್ರದೇಶದ ನಕ್ಷೆಯಂತಹ ಮಚ್ಚೆ ಹೊಂದಿದ್ದ Gorbachev ಎಂಬ ಒರಟು ಮನುಷ್ಯನಿಗೆ,ಕಮ್ಯುನಿಸ್ಟ್ ಪಕ್ಷದ ಆ ಕಾಮ್ರೇಡ್ ಗೆ ಈ ಮಾತನ್ನು ಕೇಳಿ ಒಮ್ಮೆಲೇ ಗಂಟಲಿನ ಜೊತೆ ಜೊತೆಗೆ ಉಸಿರು ಕೂಡ ಕಟ್ಟಿಹೋದಂತೆ ಆಯಿತು!
ಒಮ್ಮೆ ಹಾಗೇ ಉಗುಳು ನುಂಗಿಕೊಂಡು ಕುತ್ತಿಗೆಗೆ ಕಟ್ಟಿದ್ದ ಟೈ ಯನ್ನು ಸಡಿಲಿಸಿ ಮತ್ತೆ ತನ್ನ ಕುರ್ಚಿಯಲ್ಲಿ ಕುಳಿತುಕೊಂಡು ಸಭೆ ಮುಂದುವರಿಸುತ್ತಾನೆ Gorbachev ಮತ್ತು ಪ್ರೊಫೆಸರ್ Valery Legasov ನಲ್ಲಿಯೇ ಅವನು ಮೊದಲ ಬಾರಿಗೆ ನಡುಗುವ ಧ್ವನಿಯಲ್ಲಿ ಕೇಳುತ್ತಾನೆ... ಏತಕ್ಕಾಗಿ ಇದು ಇಷ್ಟೊಂದು ಭೀ..ಕ..ರ? ನಾವು ಇನ್ನು ಏನು ಮಾ..ಡ..ಬ..ಹು..ದು?
ಸೋವಿಯತ್ ಒಕ್ಕೂಟ ತನ್ನದೊಂದು RBMK Reactor (Reaktor Bolshoy Moshchnosty Kanalny)ಮೇಲೆ ಸಣ್ಣ ಒಂದು ಗೀರು ಕೂಡ ಎಂದಿಗೂ ಬೀಳಲು ಸಾಧ್ಯವಿಲ್ಲ,ಇನ್ನು ಅದು ಒಡೆದು ಹೋಗುವುದು ಅಂತು ದೂರದ ಮಾತು ಎಂದೇ ಬಲವಾಗಿ ನಂಬಿದ್ದ ಕಾಲದಲ್ಲಿಯೇ ಈ ಘಟನೆ ಒಂದು ನಡೆದು ಹೋಗಿತ್ತು. ಹೀರೋಶಿಮ,ನಾಗಸಾಕಿ ಯಂತಹ ಅಣು ಬಾಂಬು ಪ್ರಕರಣಕ್ಕಿಂತಲೂ ದುಪ್ಪಟ್ಟು ದುಷ್ಪರಿಣಾಮದ ಈ Chernobyl Disaster ನ ಹಿಂದಿದ್ದ ಅತೀ ದೊಡ್ಡ ಸತ್ಯ ಶೋಧನೆಯೇ ಈ ಸೀರಿಸ್ ನ ಕಥೆ.
ದುರಂತವೊಂದು ಈ ಕಥೆಯ ಆರಂಭದಲ್ಲಿಯೇ ಹಾಗೇ ನಡೆದು ಬಿಡುತ್ತದೆ.
ಆದರೆ ಅದು ಹೇಗಾಯಿತು?
ಏತಕ್ಕಾಗಿ ಆಯಿತು?
3,200 Megawatt ಸಾಮರ್ಥ್ಯದ Reactor ಒಂದು Control Rod ಗಳ ಅನುಪಸ್ಥಿತಿಯಲ್ಲಿ ಅಂಕೆಗೆ ಸಿಗದ Nuclear Reaction ಗೆ ಒಳಪಟ್ಟು 33,000 Megawatt ಗಿಂತಲೂ ಅಧಿಕ Power ನಿರಂತರವಾಗಿ ಜನರೇಟ್ ಮಾಡುತ್ತಲೇ ಹೋಗಿ ಕೊನೆಗೊಮ್ಮೆ Plant ನ Control Station ನಲ್ಲಿ Panel ಎದುರು ಕಣ್ಣು ಹಿಗ್ಗಿಸುತ್ತಾ Console ಮುಂದೆ ನಿದ್ದೆ,ನೆಮ್ಮದಿ ಎರಡನ್ನೂ ಕಳೆದುಕೊಂಡು ಕುಳಿತ್ತಿದ್ದ ಎಲೆಕ್ಟ್ರಿಕ್ ಇಂಜಿನಿಯರ್ಸ್ ಗಳನ್ನು ಇನ್ನಿಲ್ಲದಂತೆ ದಂಗು ಬಡಿಸುವುದು ಮಾತ್ರವಲ್ಲ.... ಪರಿಸ್ಥಿತಿ ಕೈ ತಪ್ಪಿ ಹೋದಾಗ ಯಾವ AZ-5 ಎಂಬ ಕೊನೆಯ ಸ್ವಿಚ್ ಅನ್ನು ಒತ್ತಿ ಎಲ್ಲಾ Control Rod ಗಳನ್ನು ಮತ್ತೊಮ್ಮೆ Reactor ನೊಳಗೆ ತುರುಕಿಸಿ ಸಂಪೂರ್ಣವಾಗಿ Nuclear Reaction ಅನ್ನೇ ತಟಸ್ಥಗೊಳಿಸುವ ಮೂಲಕ ಆಗಬಹುದಾದ ದೊಡ್ಡ ವಿಪತ್ತಿಗೆ ಇತಿಶ್ರೀ ಹಾಡಬಹುದೋ,ಅಂತಹ AZ-5 ಅನ್ನೇ ಕೊನೆಯ ಕ್ಷಣದಲ್ಲಿ ಒತ್ತಿ ಬಿಟ್ಟ ಮರು ಕ್ಷಣವೇ.. Reactor ನ ಬ್ರೇಕ್ ಎಂದೇ ಪರಿಗಣಿಸಲಾಗುವ Graphite tip ಹೊಂದಿರುವ ಒಂದೊಂದು 350 KG ತೂಕದಷ್ಟು ತೂಗುವ ಸುಮಾರು 211 ರಷ್ಟು Boron Control Rod ಗಳು Reactor ನಿಂದ ಒಂದೊಂದಾಗಿ ಸಣ್ಣ ಸಣ್ಣ ಕಡ್ಡಿಗಳಂತೆ ಸಿಡಿದೆದ್ದು ಹೋಗಿ Boom.. ಎಂದೆನಿಸುವ.. ಅವುಗಳು ಹಾಗೇ ಹೊರಗೆ ಹಾರುವ ಆ ದೃಶ್ಯ ಮತ್ತು ಅದರದ್ದೊಂದು ಭೀಕರತೆಯ ಸ್ಪಷ್ಟವಾಗಿ ಅರಿವಿದ್ದರೆ... ಸ್ವತಃ ನೋಡುಗನ ಎದೆ ಕೂಡ ಒಮ್ಮೆ ಹಾಗೇ ಝುಲ್ಲೆಂದು ಅಲ್ಲಾಡಿ ಬಿಡುತ್ತದೆ!!!
ಹೃದಯ ಹೊರಗೆ ಚೆಲ್ಲಿ ಹೊಟ್ಟೆ ಬಗಿದುಕೊಂಡ Chernobyl ನ ಆ ನಾಲ್ಕನೇ Reactor.. ಅಂದು ಹೊರ ಸೂಸಿದ ವಿಕಿರಣಗಳ ತೀವ್ರತೆ ಪಕ್ಕಕ್ಕೆ ಶಾಂತವಾಗಲೇ ಇಲ್ಲ!
ಮುಂದೆ ನಡೆದದ್ದು ಬರೀ ಮಾರಣಹೋಮ!!
ಅದೆಷ್ಟೋ ಅಮಾಯಕರು ಸತ್ತರು,ಬದುಕಿ ಉಳಿದವರು ಕೂಡ ನರಳಿ ನರಳಿ ಸತ್ತರು,ಇನ್ನಿಲ್ಲದಂತೆ ಎಲ್ಲಾ ಬಗೆಯ ಕ್ಯಾನ್ಸರ್ ಗೆ ತುತ್ತಾದರು. ಅದೆಷ್ಟೋ ಜನರು,ಯುವಕರು,ಸೈನಿಕರು,ಅಗ್ನಿಶಾಮಕ ಸಿಬ್ಬಂದಿಗಳು ಪ್ರಾಣದ ಹಂಗು ತೊರೆದು ತಮ್ಮ ಜೀವ,ಜೀವನ ಎರಡನ್ನೂ Chernobyl ಗಾಗಿ,ಸೋವಿಯತ್ ಒಕ್ಕೂಟದ ಭವಿಷ್ಯಕ್ಕಾಗಿ Sacrifice ಮಾಡಿದರು.
Chernobyl city ಪ್ರೊಫೆಸರ್ Valery Legasov ಈ ಮೊದಲೇ ಹೇಳಿದಂತೆ ಅಕ್ಷರಶಃ Dead City, Ghost city ಆಗಿಯೇ ಬದಲಾಗಿ ಹೋಗಿತ್ತು!
ಈಗಿನ ರಷ್ಯಾ ಎಂದು ಕರೆಯಲ್ಪಡುವ ಆಗಿನ USSR ತುಂಬಾ ವರ್ಷಗಳ ಕಾಲ ಜಗತ್ತಿನ ಮುಂದೆ ಬರೀ ಸುಳ್ಳನೇ ಹೇಳಿತು!
26 April 1986 ರ ಆ ನಡು ರಾತ್ರಿ 1.23 ಗಂಟೆಗೆ ನಿಜವಾಗಿಯೂ Chernobyl Nuclear Power Plant ಅಲ್ಲಿ ನಡೆದದ್ದಾದರೂ ಏನು?
ಆ ಕಥೆಗಾಗಿ ಈ ಸೀರಿಸ್ ಅನ್ನೇ ನೋಡಬೇಕು ನೀವು.
Johan Renck ಅವರು ಇದನ್ನು ನಿರ್ದೇಶಿಸಿದ್ದಾರೆ. Jared Harris, Stellan Skarsgard,Emily Watson,Paul Ritter ಮುಂತಾದವರ ಅತ್ಯದ್ಭುತ ಅಭಿನಯ ಇದರಲ್ಲಿ ಇದೆ. HBO ಹೊರ ತಂದ ಈ ಮಿನಿ ಸಿರೀಸ್ ನಲ್ಲಿ ಒಂದೊಂದು ಗಂಟೆಗಳ ಕೇವಲ ಐದು ಎಪಿಸೋಡ್ ಗಳು ಅಷ್ಟೇ ಇರುವುದು.
ಹೊಗೆ ಹಾಗೂ ಬೆಂಕಿ ಉಗುಳದೇ ಊರಿಗೆಲ್ಲಾ ವಿದ್ಯುತ್ ಒದಗಿಸುವ Nuclear Energy ಎಂಬ ಬ್ಯೂಟಿಯನ್ನು ಸರಿಯಾಗಿ ಹ್ಯಾಂಡಲ್ ಮಾಡದಿದ್ದರೆ ಅದೆಷ್ಟು ಡೆಡ್ಲಿ ಎಂಬುದು ಅರಿವಾಗಬೇಕಾದರೆ ಇದನ್ನೊಮ್ಮೆ ನೀವು ನೋಡಲೇಬೇಕು ಮತ್ತು ನಿಜವಾಗಿಯೂ ಇದೊಂದು ಎಲ್ಲರೂ ನೋಡಲೇಬೇಕಾದ ಸೀರಿಸ್ ಅಂದರೂ ಕೂಡ ತಪ್ಪಾಗಲಿಕ್ಕಿಲ್ಲ.ವಿಜ್ಞಾನ,ಫಿಸಿಕ್ಸ್ ಹಾಗೂ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನ ಬಗ್ಗೆ ಅಪಾರ ಆಸಕ್ತಿ ಹಾಗೂ ಸಿಕ್ಕಾಪಟ್ಟೆ ಕುತೂಹಲ ಹೊಂದಿರುವವರು ಇದನ್ನು ಇನ್ನೂ ನೋಡಿರದಿದ್ದರೆ ಖಂಡಿತವಾಗಿಯೂ ಇದನ್ನಂತು ಮಿಸ್ ಮಾಡಿಕೊಳ್ಳಬೇಡಿ.
ನಿಜ ಘಟನೆಯನ್ನೇ ಆಧಾರಿಸಿ ಮಾಡಿದ ಈ ಸೀರಿಸ್ ಅಪಾರ ಮೆಚ್ಚುಗೆ ಪಡೆದುಕೊಂಡಿದ್ದು ಮಾತ್ರವಲ್ಲ ಹಲವಾರು ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿದೆ.
#Chernobyl | Hotstar
English Mini Series
Historical Drama
Year - 2019
#Series
Ab Pacchu
(https://phalgunikadeyavanu.blogspot.com)
Comments
Post a Comment