Cycle
#Cycle | Netflix
ಯಾವುದೇ ಖಾರ ಮಸಾಲೆಗಳಿಲ್ಲದ ಸರಳ ಸುಂದರ ಮೂವಿ ಇದು.
ಜೀವನದಲ್ಲಿ ಮನುಷ್ಯ ಆಗಲಿ ವಸ್ತುವೇ ಆಗಲಿ ಸಿಕ್ಕಾಪಟ್ಟೆ Attachment ಬೆಳೆಸಿಕೊಂಡರೆ ಏನಾಗುತ್ತದೆ ಎಂಬುದನ್ನು ಇದರಲ್ಲಿ ನೋಡಬಹುದು.
ಅವನೊಬ್ಬ ಜ್ಯೋತಿಷಿ.
ಅವನ ಬಳಿ ಹಳೆಯ ಒಂದು ಹಳದಿ ಬಣ್ಣದ ಸೈಕಲ್ ಇರುತ್ತದೆ.
ಅದು ಅವನಿಗೆ ಅಜ್ಜನಿಂದ ಬಂದಿರುವುದು.
ಅಜ್ಜನಿಗೆ ಬ್ರಿಟಿಷ್ ಅಧಿಕಾರಿ ಒಬ್ಬ ಉಡುಗೊರೆಯಾಗಿ ಕೊಟ್ಟಿರುತ್ತಾನೆ.
ಇವನಿಗೆ ಈ ಸೈಕಲ್ ಅಂದರೆ ಜೀವ.
ಊರಿನ ಜನರು ಹೇಳುತ್ತಾರೆ ಅವನ ಆತ್ಮ ಇರುವುದೇ ಆ ಸೈಕಲ್ ನಲ್ಲಿ ಎಂದು.
ಅವನು ತನ್ನ ಪುಟ್ಟ ಮಗಳನ್ನು ಬಿಟ್ಟರೆ ಬೇರೆ ಯಾರಿಗೂ ಕೂಡ ತನ್ನ ಆ ಸೈಕಲ್ ಅನ್ನು ಕೊಡಲಾರ.
ಆದರೂ ಅವನು ತುಂಬಾ ಒಳ್ಳೆಯವನು.
ಊರಿಗೂ ತುಂಬಾ ಬೇಕಾದವನು.
ಜ್ಯೋತಿಷ್ಯ ಕೂಡ ಹೇಳುತ್ತಾನೆ.
ಪುಟ್ಟ ಮಗಳು ತಂದೆಯ ವಿಪರೀತ ಸೈಕಲ್ ಮೋಹ ಕಂಡು ಹೇಳುತ್ತಲೇ ಇರುತ್ತಾಳೆ...
- ನೀನು ಹೀಗೇ ಮಾಡುತ್ತಿರು... ಒಂದು ದಿನ ನಿನ್ನ ಸೈಕಲ್ ಗೂ ಕೂಡ ಬೋರ್ ಆಗಿ ನಿನ್ನಿಂದ ಅದು ಬಹು ದೂರ ಹಾರಿ ಹೋಗುತ್ತದೆ ನೋಡು.. ಎಂದು.
ಕಥೆಯಲ್ಲಿ ಹೆಚ್ಚು ಕಡಿಮೆ ಅದೇ ಆಗುತ್ತದೆ.
ಒಂದು ದಿನ ಕಳ್ಳರಿಬ್ಬರು ಅವನ ಸೈಕಲ್ ಅನ್ನು ಕದಿಯುತ್ತಾರೆ.
ಆ ನಂತರದ ಇವನ ಹಾಗೂ ಆ ಸೈಕಲ್ ಕಳ್ಳರ ಪಜೀತಿ,ತಾಕಲಾಟವೇ ಇದರ ಕಥೆ. ಅದಕ್ಕಾಗಿ ನೀವು ಮೂವಿಯನ್ನೇ ನೋಡಬೇಕು.
Prakash Kunte ಇದನ್ನು ನಿರ್ದೇಶಿಸಿದ್ದಾರೆ. Hrishikesh Joshi, Bhalchandra Kadam, Priyadarshan Jadhav ಇದರಲ್ಲಿ ಅಭಿನಯಿಸಿದ್ದಾರೆ.ಕೊನೆಯವರೆಗೆ ನೋಡುವ ಶ್ರದ್ಧೆ ಇದ್ದರೆ ನಿಮಗೂ ಇಷ್ಟ ಆಗಬಹುದು.ಒಟ್ಟಿನಲ್ಲಿ ಇದೊಂತರಹ Feel Good Movie ಎಂದು ಹೇಳಬಹುದು.
#Cycle | Netflix
Marathi Movie
Light Hearted Family film
Year - 2018
#Movies
Ab Pacchu



Comments
Post a Comment