Inside Man




#Inside_Man | Netflix 



“My name is Dalton Russell. Pay strict attention to what I say because I choose my words carefully and I never repeat myself. I’ve told you my name: that’s the Who.The Where could most readily be described as a prison cell. But there’s a vast difference between being stuck in a tiny cell and being in prison.The What is easy: recently I planned and set in motion events to execute the perfect bank robbery...! "


ಈ ತರಹ ಮೊದಲ ಫ್ರೇಮ್ ನಲ್ಲಿಯೇ ಕುತೂಹಲವನ್ನು ನಿಧಾನಕ್ಕೆ ಕೆರಳಿಸುವಂತೆ ಮಾತಾಡುವ ಅವನೊಬ್ಬ Robber. 


ಬುದ್ಧಿವಂತ ದರೋಡೆಕೋರ. 


Plan ಮಾಡಿ ಬ್ಯಾಂಕ್ ಒಂದನ್ನು ರಾಬರಿ ಮಾಡುವುದು.. ಮಾಡಿದ ನಂತರ ಅಲ್ಲಿಂದ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುವ Heist ಕಥೆಗಳು ಥ್ರಿಲ್ಲರ್ ಮೂವಿಗಳಿಗೆ ಯಾವತ್ತೂ ಹೇಳಿ ಮಾಡಿಸಿದ ಸರಕುಗಳೇ ಆಗಿರುತ್ತದೆ.ನೋಡುಗ ಕೂಡ ಕಳ್ಳನ ಜಾಣ್ಮೆಯನ್ನು Appreciate ಮಾಡಲು ಹೊರಡುವ,ಕಳ್ಳ ಅವನ ಸಾಹಸ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ಮನಸಾರೆ ಬಯಸುವ Genre ಅಂತ ಒಂದು ಇದ್ದರೆ ಅದು ಇಂತಹದ್ದೇ  Heist Thriller ಗಳು ಆಗಿರುತ್ತದೆ. 


ಇಲ್ಲೊಂದು ಅಂತಹದ್ದೇ ಕಥೆ ಇದೆ. 


ರಾಬರ್ ಕೂಡ ಬುದ್ದಿವಂತನೇ.


ಬುದ್ಧಿವಂತ ಆದವನು ಮಾತ್ರ ಇಂತಹ ಸಾಹಸಗಳಿಗೆ ಹೆಚ್ಚಾಗಿ ಕೈ ಹಾಕುತ್ತಾನೆ.


ಸಾಹಸಕ್ಕೆ ಕೈ ಹಾಕುವುದು ದೊಡ್ಡ ವಿಷಯ ಅಲ್ಲ.


ತಪ್ಪಸಿಕೊಂಡು ಬರುವುದೇ ಅತೀ ದೊಡ್ಡ ವಿಷಯ


ಕೆಲವೊಮ್ಮೆ ಕಳ್ಳರ ಮಿಷನ್ Fail ಆಗುತ್ತದೆ. ಇನ್ನು ಕೆಲವೊಮ್ಮೆ ಎಣಿಸಿದಂತೆಯೇ Success. 


ತಾನೊಂದು Perfect Bank robbery ಗೆ ಪ್ಲ್ಯಾನ್ ಮಾಡಿದ್ದೇನೆ ಎಂದು ಹೇಳುವ Robber ನಿಜವಾಗಿಯೂ ಈ ಕಥೆಯಲ್ಲಿ ಏನು ಮಾಡುತ್ತಾನೆ?ಅವನಿಗೆ ಏನಾಗುತ್ತದೆ?!! 



Spike Lee ಇದರ ನಿರ್ದೇಶನ ಮಾಡಿದ್ದಾರೆ.Denzel Washington, Clive Owen, Jodie Foster ಮುಂತಾದವರ ಅಭಿನಯ ಇದಕ್ಕಿದೆ.




#Inside_Man | Netflix

English Movie

Heist Thriller

Year - 2006


#Movies

Ab Pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..