Kilometres and kilometres
#Kilometers_And_Kilometers | Netflix
ಅವನಿಗೆ ಇಂಗ್ಲಿಷ್ ಬರಲ್ಲ.
ಅವಳಿಗೆ ಇಂಗ್ಲಿಷ್ ಬಿಟ್ಟು ಬೇರೆ ಏನೂ ಬರಲ್ಲ.
ಇವನು ದೇಸಿ ಅವಳು ವಿದೇಶಿ.
ಬುಲೆಟ್ ಲವರ್ ಆಗಿರುವ ಇವನಿಗೆ ಸಿಕ್ಕಾಪಟ್ಟೆ ಹಣದ ಅವಶ್ಯಕತೆ.
ಅವಳಿಗೆ ಟ್ರಾವೆಲ್ ಮಾಡಲು ನಮ್ಮ ದೇಶ ಸುತ್ತಲು ಬಾಡಿಗೆಗಾಗಿ ಒಂದು ಬೈಕ್ ಬೇಕು.
ಹಾಗಾಗಿ ಇವನು ತನ್ನ ಬುಲೆಟ್ ಜೊತೆ ಅವಳೊಂದಿಗೆ ಸವಾರಿ ಹೊರಡುತ್ತಾನೆ.
ಟ್ರಾವೆಲಿಂಗ್ ಸ್ಟೋರಿಗಳ ನಡುವೆ ಒಂದು ಕಡೆ ಇವನ ಬೈಕ್ ಕಳೆದು ಹೋಗುತ್ತದೆ.
ಸ್ವಲ್ಪ ಹಾಸ್ಯ,ಒಂದಷ್ಟು ಪ್ರಯಾಣ,ಹಣವೇ ಎಲ್ಲವೂ ಅಲ್ಲ ಎಂಬ ಮೆಸೇಜ್,ಸಂಬಂಧಗಳ ಬೆಲೆ... ಈ ಕಥೆಯಲ್ಲಿ ಇದೆ.
2020 ರಲ್ಲಿ ಬಂದಂತಹ ಈ ಕಾಮಿಡಿ ಡ್ರಾಮ ಮೂವಿಯನ್ನು Jeo Baby ನಿರ್ದೇಶನ ಮಾಡಿದ್ದಾರೆ.Tovino Thomas, Joju George,India Jarvis ಇದರಲ್ಲಿ ಅಭಿನಯಿಸಿದ್ದಾರೆ.
#Kilometers_And_Kilometers | Netflix
Malayalam movie
#Movies
Ab pacchu


Comments
Post a Comment