Love


 #Love | Netflix


ಇದೊಂತರಹ ವಿಚಿತ್ರ ಮೂವಿ.


ಮೂವಿಯ ಹೆಸರು ಲವ್ ಅಂತ. 


ಆದ್ರೆ ಇಡೀ ಸಿನಿಮಾದಲ್ಲಿ ಲವ್ವೇ ಇಲ್ಲ.


Domestic Violence ಒಂದೇ ಇರುವುದು. 


ಫ್ಲ್ಯಾಟ್ ನ ನಾಲ್ಕು ಗೋಡೆಗಳ ಮಧ್ಯೆ ಗಂಡ ಹೆಂಡತಿಯರಿಬ್ಬರ ಸಿಕ್ಕಾಪಟ್ಟೆ ಹೊಡೆದಾಟವೇ ಇದರಲ್ಲಿ ಇದೆ. 


ಇಲ್ಲಿ ಬರುವ ಎಲ್ಲಾ ಪಾತ್ರಗಳು ವಿವಾಹಿತರದ್ದೇ. 


ಆದರೆ ಎಲ್ಲರೂ ಒಂದೊಂದು Extra affairs ಇಟ್ಟುಕೊಂಡಿರುತ್ತಾರೆ.


ಯೆಸ್... Extra Love. 


ಗಂಡನಿಗೆ ಒಂದು ಕಳ್ಳ ಸಂಬಂಧ ಇದ್ದರೆ.. .


ಹೆಂಡತಿಗೂ ಕೂಡ ಅದೇ ರೀತಿಯ ಸಂಬಂಧ ಇದೆ ಎಂದು ಗಂಡ ಆದವನು ತಿಳಿದುಕೊಂಡಿರುತ್ತಾನೆ. 


ಅವನ ಇಬ್ಬರು ಗೆಳೆಯರಿಗೂ ಕೂಡ ಅಂತಹದ್ದೇ ಅನೈತಿಕ ಸಂಬಂಧ ಇದೆ. 


ಅದೇ ರೀತಿ ಆ ಗೆಳೆಯರ ಹೆಂಡತಿರಿಗೂ ಕೂಡ ಬೇರೆ ಬೇರೆ ಕಳ್ಳ ಸಂಬಂಧಗಳು ಇದೆ. 


ಒಟ್ಟಿನಲ್ಲಿ ಇಲ್ಲಿ ಎಲ್ಲರಿಗೂ ಎಲ್ಲರ ಮೇಲೆಯೂ ಸಂಶಯವೇ.


ಇದರ ಕಥೆ ಈ ರೀತಿ ಶುರುವಾಗುತ್ತದೆ...


ಮೊದಲು ಫ್ಲ್ಯಾಟ್ ನಲ್ಲಿರುವ ಗಂಡ ಹೆಂಡತಿ ಇಬ್ಬರೂ ವಿಷಯ ಒಂದಕ್ಕೆ ಸಿಕ್ಕಾಪಟ್ಟೆ ಹೊಡೆದಾಡುತ್ತಿರುತ್ತಾರೆ. 


ಒಂದು ಹಂತದಲ್ಲಿ ಹೆಂಡತಿ ಗಂಡನಿಗೆ ಕಪಾಳ ಮೋಕ್ಷ ಮಾಡುತ್ತಾಳೆ.


ಅವಳು ಪುನಃ ಗಂಡನಿಗೆ ಹೊಡೆಯುತ್ತಾಳೆ.


ಮತ್ತಷ್ಟು ಹೊಡೆಯುತ್ತಾಳೆ..


ಕೊನೆಗೆ ಗಂಡ ಅವಳನ್ನು ಒಂದು ಕಡೆಗೆ ತಳ್ಳುತ್ತಾನೆ.


ಗೋಡೆಗೆ ತಲೆ ಬಡಿದು ಹೆಂಡತಿ ಸತ್ತು ಹೋಗುತ್ತಾಳೆ!


ಇದು ಇಷ್ಟು ಕಥೆಯ ಆರಂಭದಲ್ಲಿಯೇ ನಡೆದು ಬಿಡುತ್ತದೆ.


ಈಗ ಗಂಡನಿಗೆ ತನ್ನ ಹೆಂಡತಿಯ Dead Body ಯನ್ನು ತನ್ನ ಪ್ಲ್ಯಾಟ್ ನಿಂದ ಹೇಗೆ Dispose ಮಾಡುವುದು ಎಂದು ಚಿಂತೆ ಶುರುವಾಗುತದೆ.


ಅದಕ್ಕಾಗಿ ಅವನು YouTube ಓಪನ್ ಮಾಡಿ ನೋಡುತ್ತಾನೆ "How to Dispose a human body" ಅಂತ ತಡಕಾಡುತ್ತಾನೆ. 


ಹಲವು Expert ಗಳ ವೀಡಿಯೇ ನೋಡಿ ತನ್ನ ಹೆಂಡತಿಯ Body ಯನ್ನು Dispose ಮಾಡಲು ರೆಡಿ ಆಗುತ್ತಾನೆ.


ಅದಕ್ಕಾಗಿ ತನ್ನ ಹೆಂಡತಿಯ ಡೆಡ್ ಬಾಡಿಯನ್ನು ಟಾಯ್ಲೆಟ್ ಗೆ ಎಳೆದುಕೊಂಡು ಹೋಗುತ್ತಾನೆ. 


ಆಗ ಅವನ ಫ್ಲ್ಯಾಟ್ ಗೆ ಅವನ ಫ್ರೆಂಡ್ ಒಬ್ಬ ಬರ್ತಾನೆ.


ಅವನ ಸಮಸ್ಯೆ ಕೂಡ ಅವನ  ಹೆಂಡತಿಯೇ..


ಅವನು ಬಂದನು ಬೇಗನೆ ಹೋಗುವ ಹಾಗೆ ಕಾಣಿಸುತ್ತಿಲ್ಲ..ಕುಡಿಯುತ್ತಾ ಅಲ್ಲೇ ಝಂಡಾ ಹೂಡುತ್ತಾನೆ. 


ಇವನಿಗೆ Dead body ಯ ಚಿಂತೆ.


ಸ್ವಲ್ಪ ಹೊತ್ತಿನ ನಂತರ ಮತ್ತೊಬ್ಬ ಫ್ರೆಂಡ್ ತನ್ನ ಗರ್ಲ್ ಫ್ರೆಂಡ್  ಜೊತೆಗೆ ಅದೇ ರೂಮಿಗೆ ಬರುತ್ತಾನೆ.ಅವನಿಗೂ ಮದುವೆ ಏನೋ ಆಗಿರುತ್ತದೆ.ಆದರೆ ಹೆಂಡತಿಯ ಜೊತೆಗಿನ ಸಂಬಂಧ ನೆಟ್ಟಗಿಲ್ಲ.ಹಾಗಾಗಿ Already ಮದುವೆ ಆಗಿರುವವಳೊಂದಿಗೆಯೇ ಕಳ್ಳ ಸಂಬಂಧ ಬೆಳೆಸಿರುತ್ತಾನೆ.ಇವನೂ ಕೂಡ ಬೇಗ ಹೋಗುವ ಸೂಚನೆ ಇಲ್ಲ.


ಕೊನೆಗೆ ಫ್ರೆಂಡ್ ನ ಆ  ಗರ್ಲ್ ಫ್ರೆಂಡ್,ಪ್ಲ್ಯಾಟ್ ನಿಂದ ಹೊರ ಹೋಗುತ್ತಾಳೆ.


ಈಗ ಮೂವರೇ ಇರುವುದು.


ಆ ಇಬ್ಬರು ಫ್ರೆಂಡ್ ಗಳು ಚೆನ್ನಾಗಿ ಕುಡಿದು ತಮ್ಮ ವೈವಾಹಿಕ ಜೀವನದ ಸಮಸ್ಯೆಗಳ ಬಗ್ಗೆ ಡೀಪಾಗಿ ಚರ್ಚೆ ಮಾಡ್ತಾರೆ.


ಇವನಿಗೆ ಟೆನ್ಶನ್ ಆಗ್ತದೆ.


ಮನೆಯಿಂದ ಒಮ್ಮೆ ಹೋಗಿ ಎಂದು ಅವನು  ಬಾಯಿ ಬಿಟ್ಟು ಹೇಳಿದರೂ ಅವರಿಬ್ಬರು ಹೋಗುವುದಿಲ್ಲ. 


ಆ ಇಬ್ಬರು ಫ್ರೆಂಡ್ ಗಳು ತಾವು ತಮ್ಮ ಹೆಂಡತಿಯರನ್ನು ಕೊಲ್ಲುವುದೇ ತಮ್ಮ ಜೀವನದ ಸಮಸ್ಯೆಗೆ ಪರಿಹಾರ ಎಂದು ಒಂದು ನಿರ್ಧಾರಕ್ಕೆ ಬರುತ್ತಾರೆ. 


ಆಗ ಇವನು ತನ್ನ ಫ್ರೆಂಡ್ಸ್ ಗೆ.. ಕೊಲ್ಲುವುದು ಎಲ್ಲಾ ತಪ್ಪು,ಹಾಗೆ ಮಾಡ್ಬೇಡಿ.. ಎಂದು ಬುದ್ಧಿವಾದ ಹೇಳ್ತಾನೆ. 


ಈಗ ಕೊಲೆಯಾದ ಹುಡುಗಿಯ ತಂದೆ ಆ ರೂಮಿಗೆ ಬರ್ತಾರೆ. 


ಅವರಿಗೆ ತಮ್ಮ ಅಳಿಯನ ಬುದ್ಧಿ ಗೊತ್ತಿರುತ್ತದೆ. 


ತಮ್ಮ ಮಗಳಿಗೆ ನೀನು ಸಿಕ್ಕಾಪಟ್ಟೆ ಹಿಂಸೆ ನೀಡುತ್ತಿಯಾ ಎಂದು ನನಗೆ ಗೊತ್ತು ಎಂದು ಹೇಳಿ.. ಅವನಿಗೆರಡು ಕಪಾಳಕ್ಕೆ ಬಾರಿಸಿ ಹೋಗುತ್ತಾರೆ. 


ಅಲ್ಲೇ ಇದ್ದ ಆ ಇಬ್ಬರು ಫ್ರೆಂಡ್ಸ್ ಕೇಳುತ್ತಾರೆ... ಯಾಕೆ  ಏನಾಯಿತು.. ನಿನ್ನ ಹೆಂಡತಿಗೆ ನೀನು ನಿಜವಾಗಿಯೂ ಹೊಡೆಯುತ್ತೀಯಾ? ಎಂದು.


ಅದಕ್ಕೆ ಅವನು ಸತ್ಯ ಹೇಳುತ್ತಾನೆ.. 


ನಾನು ಹೊಡಿದಿಲ್ಲ.. ಕೊಂದೇ ಹಾಕಿದ್ದೇನೆ.. ಆದರೆ ಬೇಕೆಂದು ಕೊಂದಿಲ್ಲ... ಎಂದು ನಡುಗುತ್ತಾ ಹೇಳುತ್ತಾನೆ. 


ಅಡಪಾವಿ... ಹೆಂಡತಿಯನ್ನು ಸಾಯಿಸ್ಬಾರ್ದು ಎಂದು ಬುಧ್ಧಿ ಹೇಳಿ.. ನೀನೇ ನಿನ್ನ ಹೆಂಡತಿಯನ್ನು ಸಾಯಿಸಿದ್ದೀಯಾ ಎಂದು ಒಬ್ಬ ಫ್ರೆಂಡ್ Rash ಆಗ್ತಾನೆ... ಮತ್ತು ನಾನು ಇದರಲ್ಲಿ ಸಿಕ್ಕಿ ಬೀಳುವುದಿಲ್ಲ... ನಾನೀಗಲೇ ರೂಮ್ ಬಿಟ್ಟು ಹೋಗುತ್ತೇನೆ..ನೀನೊಬ್ಬನೇ ಸಾಯಿ.. ಎಂದು ಹೇಳುತ್ತಾನೆ.. 


ಆದರೆ ಮತ್ತೊಬ್ಬ ಫ್ರೆಂಡ್ ಹೇಳುತ್ತಾನೆ... ಇಲ್ಲ.. ಇಲ್ಲ.. ಕಷ್ಟದಲ್ಲಿರುವಾಗ ಫ್ರೆಂಡ್ ಗೆ ಸಹಾಯ ಮಾಡಬೇಕು.. ಅವನೇನೋ ಬೇಕೆಂದೇ ಕೊಲ್ಲಲಿಲ್ಲ.. Accidentally ಆಗಿದ್ದು.. ನಾವು ಸಹಾಯ ಮಾಡಲೇಬೇಕು ಎಂದು ಅವನು ಹೇಳುತ್ತಾನೆ. 


ಕೊನೆಗೆ ಟಾಯ್ಲೆಟ್ ನಲ್ಲಿರುವ ಫ್ರೆಂಡ್ ನ ಹೆಂಡತಿಯ ಹೆಣವನ್ನು ಕೂಡ ಅವರಿಬ್ಬರು ನೋಡುತ್ತಾರೆ.


ಮೂವರೂ  ಸೇರಿ ಈಗ ಡೆಡ್ ಬಾಡಿಯನ್ನು Dispose ಮಾಡಲು ಮಾಸ್ಟರ್ ಪ್ಲ್ಯಾನ್  ರೆಡಿ ಮಾಡುತ್ತಾರೆ. 


ಈಗ ಪುನಃ ಡೋರ್ ಬೆಲ್ ಆಗುತ್ತದೆ. 


ಗಂಡ ಹೋಗಿ ಡೋರ್ ತೆಗಿತಾನೆ. 


ಆಗ ಅಲ್ಲಿ ಅವನ ಹೆಂಡತಿಯೇ ಇರ್ತಾಳೆ!


ಅವಳು ಸತ್ತಿರುವುದಿಲ್ಲ..!! 


ಈಗ ಅವರಿಬ್ಬರ ಮಧ್ಯೆ ಪುನಃ ಎಂದಿನಂತೆ ಜಗಳ ಆಗುತ್ತದೆ. 


ಹೆಂಡತಿ ಗಂಡನಿಗೆ ಹೊಡಿತಾಳೆ.


ಗಂಡ ಕೂಡ ಜೋರಾಗಿ ಐರನ್ ಬಾಕ್ಸ್ ನಿಂದ ಬಾರಿಸುತ್ತಾನೆ. 


ಹೆಂಡತಿ ಸಾಯುತ್ತಾಳೆ!!


ಆ ರಾತ್ರಿ ಹೆಣವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. 


ಪೋಲಿಸರು ಒಂದು ಕಡೆ ಕಾರು ನಿಲ್ಲಿಸುತ್ತಾರೆ. 


ಡ್ರೈವಿಂಗ್ ಸೀಟಿನ ವೀಂಡೋ ಗ್ಲಾಸ್ ಕೆಳಗಿಸಲು ಪೋಲಿಸರು ಹೇಳುತ್ತಾರೆ. 


ವೀಂಡೋ ಗ್ಲಾಸ್ ಕೆಳಗಿಳಿಯುತ್ತದೆ. 


ಆಗ ಅಲ್ಲಿ ಡ್ರೈವರ್ ಸೀಟ್ ಅಲ್ಲಿ ಹೆಂಡತಿ ಇರ್ತಾಳೆ!! 


ಹಿಂದಿನ ಸೀಟಿನಲ್ಲಿ ಗಂಡನ ಶವ ಇರುತ್ತದೆ!!! 


ಕಥೆ ಲೈಟಾಗಿ Confusion ಮಾಡ್ತಾ ಇದೆ ಅಲ್ವಾ. 


Yess.. ಇದರ ನರೇಶನ್ ಇರುವುದೇ ಹೀಗೆ. 


ಕಥೆಗಳನ್ನು ಹಿಂದೆ ಮುಂದೆ ಅಂಟಿಸಿದ್ದಾರೆ... ಗೊಂದಲ ಮೂಡಿಸಿದ್ದಾರೆ...ಗೆಸ್ ಮಾಡಿಕೊಳ್ಳಲು ನೋಡುಗನಿಗೆಯೇ  ಬಿಟ್ಟಿದ್ದಾರೆ. 


ಹಾಗಾಗಿ ನಾನು ಕೂಡ ಯಾರು ಏತಕ್ಕಾಗಿ ಕೊಂದರು..? ನಿಜವಾಗಿಯೂ ಸತ್ತದ್ದು ಯಾರು?.. ಎಂದು ಹೇಳಲಾರೆ.ನೀವೇ ನೋಡಿ ಒಂದು Conclusion ಗೆ ಬನ್ನಿ. 


2020 ರಲ್ಲಿ ಬಂದಂತಹ ಈ Black Comedy Psychological Thriller ಮೂವಿಯನ್ನು Khalid Rahman ನಿರ್ದೇಶನ ಮಾಡಿದ್ದಾರೆ. Rajisha Vijayan,Shine Tom Chacko ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.




ಇದರ 99 ಭಾಗದಷ್ಟು ಕಥೆ ಫ್ಲ್ಯಾಟ್ ನ ಒಳಗೆಯೇ ನಡೆಯುತ್ತದೆ.ನನಗಂತು Dark Comedy ಯಾವಾಗಲೂ ಇಷ್ಟವಾದ Genre.ಇದರ Dark Comedy ಯೂ ಚೆನ್ನಾಗಿದೆ.

ಇಷ್ಟವಾಯಿತು. ಥ್ರಿಲ್ಲರ್ ಅನ್ನು ವಿಭಿನ್ನ ಶೈಲಿಯಲ್ಲಿ Present ಮಾಡಿದ ರೀತಿಯೂ ಕೂಡ ಅಷ್ಟೇ ಚೆನ್ನಾಗಿದೆ.ಅಂದ ಹಾಗೆ ಇದು ಕೇವಲ 1.30 ಗಂಟೆಯ ಸಿನಿಮಾ.ಕಥೆಗಳನ್ನು Analysis ಗೆ ಒಳಪಡಿಸುವ ಅಭ್ಯಾಸ ಹೊಂದಿರುವವರಿಗೆ ಈ ಮೂವಿ ಕೂಡ  ಇಷ್ಟ ಆಗಬಹುದು. 




#Love | Netflix 

Malayalam movie 


#Movies 

Ab Pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ