Lupen

 

#Lupin | Netflix



ಕಳ್ಳ & ಕಳ್ಳತನ...


ಎರಡೂ ತುಂಬಾ ಕೆಟ್ಟದೇ. 


ಆದರೆ ಪರ್ಫೆಕ್ಟ್ Plan & Execution... ಇವೆರಡನ್ನು ತಾನು ಅಂದುಕೊಂಡಂತೆಯೇ ಬಹಳ ಸಲೀಸಾಗಿ ಮಾಡಿ Security System ಗೆ ಚಳ್ಳೆಹಣ್ಣು ತಿನ್ನಿಸಿ ಆರಾಮ್ ಸೇ Escape ಆಗುವ ಇಂಟೆಲಿಜೆಂಟ್ ಕಳ್ಳನೊಬ್ಬನ ಕಥೆ ಮಾತ್ರ ಬಹುತೇಕ ಎಲ್ಲರಿಗೂ ಇಷ್ಟ ಆಗಿಯೇ ಆಗುತ್ತದೆ. 


ಇದರ ಮೊದಲ ಎಪಿಸೋಡ್ ನಲ್ಲಿ ಇದೆ ಅಂತಹದ್ದೇ ಕಥೆ.


ಆದರೆ ಇದು ಬರೀಯ Robbery ಯ ಕಥೆ ಅಲ್ಲ. 


ಮೂಲದಲ್ಲಿ ಇದೊಂದು Revenge ನ ಕಥೆ. 


25 ವರ್ಷದ ಹಿಂದೆ ನೀಟಾಗಿ ಮಾಡಿ ಮುಗಿಸಿದ ಮೋಸ ಒಂದಕ್ಕೆ ನ್ಯಾಯ ಒದಗಿಸಲು ಹೊರಡುವ,ಹೋರಾಟ ನಡೆಸುವ,ಜಾಣ್ಮೆಯ ತಂತ್ರ ಹೆಣೆಯುವ ಕಥೆ ಇದು. 


ಅವನು ಕಳ್ಳನಲ್ಲ.. 


He doesn't care about anything, 

Except what matters! 


He plays the game,

but respects the rules!


Yess.. He is a Gentleman!!


ಈ ರೀತಿಯ ಜನರು ಇರುತ್ತಾರೆ ಎಂದು ಕಥೆಯಲ್ಲಿ ಒಂದು ಕಡೆ  ಅವನೇ ತನ್ನ ಪ್ರೇಯಸಿಗೆ ಹೇಳುತ್ತಾನೆ.


ಕಾದಂಬರಿ ಒಂದರ ಚಾಣಕ್ಯ ಕಳ್ಳ,World-famous gentleman thief and Master of disguise "Arsène Lupin" ಬಗ್ಗೆಯೇ ಅವನು ಹೇಳುತ್ತಾನಾದರೂ ನಿಜದಲ್ಲಿ ಅವನು ಕೂಡ ತನ್ನ ನೆಚ್ಚಿನ Gentleman ಕಳ್ಳನಂತೆಯೇ ಆಗಿ ಹೋಗಿರುತ್ತಾನೆ.


Arsène Lupin ಎಂಬ ಕಳ್ಳ ಸಿಕ್ಕಿ ಹಾಕಿಕೊಂಡರೂ.. ಎಂದಿಗೂ ತನ್ನ ಗೇಮ್ ನಲ್ಲಿ ಸೋತದ್ದು ಕಡಿಮೆ.ಇಲ್ಲಿರುವುದು ಅವನಂತೆಯೇ ಇರುವ  Assane Diop ಎಂಬುವವನ ಕಥೆ. 



10 Episode ಗಳಿರುವ ಈ French Mystery Thriller ಸಿರೀಸ್ #Lupin ನ Part - 1 ರ 5 Episode ಗಳು ಅಷ್ಟೇ ಸದ್ಯಕ್ಕೆ ರಿಲೀಸ್ ಆಗಿದ್ದು. Part- 2 ನಲ್ಲಿ ಮುಂದಿನ ಎಲ್ಲಾ ಎಪಿಸೋಡ್ ಗಳು 2021 ರ ಮಧ್ಯ ಭಾಗದಲ್ಲಿ ಬರಲಿದೆ. 

Omar Sy ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. 


Michael Bublé ನ ಹಾಡು..


" When marimba rhythms start to play

  Dance with me, make me sway.. 

  Like a lazy ocean hugs the shore

  Hold me close, sway me more…."  ಪದೇ ಪದೇ ಕೇಳುವಷ್ಟು ಹಿತವಾಗಿದೆ.




#Series

Ab Pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ