Mayanadi



 #Mayanadi | MX Player


ಕಥೆಯಲ್ಲಿ ತಲೆಗೊಂದು ಸದಾ ಕ್ಯಾಪ್ ಸಿಕ್ಕಿಸಿಕೊಂಡು ನೋಡಲು ತುಂಬಾನೇ ಮ್ಯಾನ್ಲಿ ಯಾಗಿ ಕಾಣುವ ಆ ಹ್ಯಾಂಡ್ಸಂ ಹುಡುಗ ಚಿಕ್ಕಂದಿನಿಂದಲೇ ಅನಾಥ.


ಬೇಕು ಬೇಕು ಎಂದಲ್ಲ.. Accidentally ಒಬ್ಬ  ಪೋಲಿಸನ ಕೊಲೆ ಅವನಿಂದಾಗಿಯೇ ಆಗಿ ಹೋಗುತ್ತದೆ! 


ಪೋಲಿಸರು ಅವನ ಬೆನ್ನು ಬೀಳುತ್ತಾರೆ.


ಅವನು ತಪ್ಪಿಸಿಕೊಂಡು ಓಡುತ್ತಾನೆ.


ಅವನಿಗೊಂದು ಲವ್ವ್.





ಸುಖವಾದ ಲವ್ವ್ ಎಂದು ಹೇಳಲು ಸಾಧ್ಯವಿಲ್ಲವಾದರೂ ಇಬ್ಬರೂ ಒಬ್ಬರನ್ನೊಬ್ಬರು ತುಂಬಾನೇ ಪ್ರೀತಿಸುತ್ತಾರೆ.. ಆದರೂ ಪರಸ್ಪರ ಮನಸ್ಥಾಪಗಳೇ ಜಾಸ್ತಿ.


ಜಗಳ ಇದ್ದಲ್ಲಿ ಪ್ರೀತಿ ಕೂಡ ಹೆಚ್ಚು.


ಇಲ್ಲೂ ಅದೇ...


ಪರಸ್ಪರ ಇಷ್ಟು ಪ್ರೀತಿಸುತ್ತೇನೆ ಎಂದು ಹೇಳಿಕೊಳ್ಳದಿದ್ದರೂ.. ಎಷ್ಟು ಪ್ರೀತಿ ಎಂದು ಕಾಣಿಸುವಂತಹ ಮೊಹಬ್ಬತ್ ಅವರದ್ದು. 




ಅವಳಿಗೆ ಸಿನೆಮಾದಲ್ಲಿ ನಾಯಕಿ ಆಗುವ ಆಸೆ.


ಆದರೆ ಇಂಡಸ್ಟ್ರಿಯಲ್ಲಿ ಅವಳದ್ದು ಮುಗಿಯದ Struggle. 


ಕೊನೆಗೆ ಪೋಲೀಸರಿಗೆ ಅವರಿಬ್ಬರ ಅನುರಾಗದ ಬಗ್ಗೆ ಗೊತ್ತಾಗುತ್ತದೆ.


ಅವಳಿಗೇ ಗೊತ್ತಿಲ್ಲದೆಯೇ ಅವಳ ಮೂಲಕವೇ ಅವನನ್ನು ಹಿಡಿಯಲು ಪೋಲಿಸರು ಬಲೆ ಬೀಸುತ್ತಾರೆ.


ಇದರ ಸುಳಿವಿರದ ಹುಡುಗ ಒಂದು ದಿನ ಅವಳ ಭೇಟಿಗಾಗಿ ಒಂದು ಕಡೆಗೆ ಬರುತ್ತಾನೆ..


ಪೋಲಿಸರು ಅಲ್ಲೇ ಅವನಿಗಾಗಿಯೇ ಹೊಂಚು ಹಾಕಿ ಕಾದಿರುತ್ತಾರೆ.


ಮುಂದೆ ಏನೆನೋ ಆಗಿ ಹೋಗುತ್ತದೆ..! 


Actually ಅವನಿಗೆ ಈ ಕಥೆಯಲ್ಲಿ ಏನಾಗುತ್ತದೆ ಎನ್ನುವುದನ್ನು ತಿಳಿಯಲು ನೀವು ಮೂವಿಯನ್ನೇ ನೋಡಬೇಕು. 


Realistic Emotions ಕೂಡಿರುವ ಈ ಮೂವಿ Romantic ಮೂವಿಯನ್ನು ನೋಡುವವರಿಗೆ ಹೆಚ್ಚು ಇಷ್ಟ ಆಗಬಹುದು. Aashiq Abu ಇದನ್ನು ನಿರ್ದೇಶಿಸಿದ್ದಾರೆ. Tovino Thomas, Aishwarya Lekshmi, Leona Lishoy,Harish Uthaman, Darshana Rajendran,Khalid Rahman ಇದರಲ್ಲಿ ಅಭಿನಯಿಸಿದ್ದಾರೆ. 



#Mayanadi | MX Player 

Malayalam movie 

Romantic Thriller 

Year - 2017


#Movies 

Ab Pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ