My Client's Wife
#My_Clients_Wife! | Prime
ಆ ಮನೆಯ ಮಹಡಿಯಲ್ಲಿ ಏನೋ ಇದೆ..!
ಯಾರೋ ಒಬ್ಬರು ಕಣ್ಣಿಗೆ ಕಾಣದವರು ಅಲ್ಲಿ ಇದ್ದಾರೆ!!
ತುಂಬಾನೇ Abnormal ಅನಿಸುವಂತಹದ್ದು,Unusual ನಂತಿರುವುದು ಏನೋ ಒಂದು ಅಲ್ಲಿ ನಡೀತನೇ ಇರ್ತದೆ....ಕೊನೆಯವರೆಗೂ!!
ಇದರ ಕಥೆ ಈ ರೀತಿ ಆರಂಭವಾಗುತ್ತದೆ...
ಒಬ್ಬ ಗಂಡ ಇರ್ತಾನೆ.
ಅವನಿಗೊಬ್ಬಳು ಸಿಂಪಲ್ ಪತ್ನಿ.
ಒಂದು ದಿನ ಗಂಡ ತನ್ನ ಪತ್ನಿಯ ಮೇಲೆ ಸಂದೇಹ ಬಂದು ಜೋರಾಗಿ ಹೊಡೆಯುತ್ತಾನೆ.
ಗಾಯಗೊಂಡ ಅವಳು ಗಂಡನ ಮೇಲೆ ಕೊಲೆ ಯತ್ನದ ಕೇಸು ದಾಖಲಿಸುತ್ತಾಳೆ.
ಗಂಡನ ಕಡೆಯ ಲಾಯರ್ ಗೆ ಈ ಕೇಸ್ ನಲ್ಲಿ ಏನೋ ಬೇರೆಯದ್ದೇ ಆದ ವಿಚಿತ್ರ ವಿಷಯಗಳಿವೆ,ಅದರಲ್ಲೂ ಆ ಮನೆಯಲ್ಲಿ ಏನೋ ಒಂದು ಸರಿ ಇಲ್ಲ ..ಎಂದೇ ಅನಿಸುತ್ತದೆ.
ಅವನು ಎಲ್ಲರನ್ನೂ ಪ್ರಶ್ನಿಸುತ್ತಾನೆ.
ಜೈಲಿನಲ್ಲಿರುವ ಗಂಡ ಅವನ Perspective ನ ಒಂದು ಕಥೆ ಹೇಳ್ತಾನೆ.
ಕೇಸು ಹಾಕಿರುವ ಹೆಂಡತಿ ಅವಳ Perspective ನ ಇನ್ನೊಂದು ಕಥೆ ಹೇಳ್ತಾಳೆ.
ಮನೆಯ ಅಕ್ಕ ಪಕ್ಕದವರು ಬೇರೆಯೇ ಕಥೆಯೇ ಹೇಳ್ತಾರೆ.
ಘಟನೆ ಒಂದೇ ಆದರೂ ಯಾರು ಹೇಳಿದ ಕಥೆಯಲ್ಲೂ ಒಂಚೂರು ಸಾಮ್ಯತೆಯೇ ಇರುವುದಿಲ್ಲ!!
ಒಬ್ಬೊಬ್ಬರು ಒಂದೊಂದು ಕಥೆ ಹೇಳಿರುತ್ತಾರೆ!
ಆದರೆ ಹೆಚ್ಚಿನವರು ಹೇಳಿದ ಕಥೆಗಳಲ್ಲಿ ಆ ಮನೆಯ ಲೇಡಿಯೇ ಸ್ವಲ್ಪ ವಿಚಿತ್ರ ಸ್ವಭಾವದವಳಾಗಿರುತ್ತಾಳೆ!!
ಯೆಸ್.. ತುಂಬಾನೇ ನಾರ್ಮಲ್ ತರಹ ಇರುವ ಅವಳಲ್ಲಿ ಏನೋ ಒಂದು ಸೈಕೋ ಕ್ಯಾರೆಕ್ಟರ್ ಇರುವುರು ಅವರುಗಳ ಕಥೆಯಿಂದ ಮೇಲ್ನೋಟಕ್ಕೆ ತಿಳಿದು ಬರುತ್ತದೆ.
ಲಾಯರ್ ಗೂ ಅದರ ಅನುಭವ ಆಗುತ್ತದೆ!
ಕೊನೆಗೆ ಲಾಯರ್ ಆ ಕೇಸ್ ದಾಖಲಿಸಿರುವ ಲೇಡಿಯ ಮನೆಗೆಯೇ ಹೋಗುತ್ತಾನೆ..!
ರಾತ್ರಿ ಹೊತ್ತಿನಲ್ಲಿ!!
ಆ ದಿನ ಅವನಿಗೂ ಗೊತ್ತಾಗಿ ಬಿಡುತ್ತದೆ... ಈ ಮನೆಯ ಮಹಡಿಯಲ್ಲಿ ಇರುವುದು ಯಾರು,ಅಲ್ಲಿ ಏನು ನಡೀತಾ ಇದೆ ಎಂದು.
ಕೊನೆಗೂ ಲೇಡಿ ಕಥೆಯ ರಹಸ್ಯ ರಿವೀಲ್ ಆಗುತ್ತದೆ.
ಸತ್ಯ ಹೊರಗೆ ಬೀಳುತ್ತದೆ!
ನೋಡುಗನಿಗೂ ನಿಜ ವಿಷಯ ಗೊತ್ತಾಗುತ್ತದೆ.
ಆದರೆ ಅಷ್ಟೂ ಕಥೆ ನಡೆದಿರುವುದು ಕೊಲೆ ಕೇಸ್ ಹಾಕಿರುವ ಆ ಲೇಡಿಯ ಮನೆಯಲ್ಲಿ ಅಲ್ಲವೇ ಅಲ್ಲ!
ಬದಲಿಗೆ ವಕೀಲನದ್ದೇ ಮನೆಯಲ್ಲಿ!!
ಅಷ್ಟು ಮಾತ್ರವಲ್ಲ ಈ ಮೂವಿಯ ಸಂಪೂರ್ಣ ಕಥೆ.. ಆ ಕೇಸ್ ದಾಖಲಿಸಿರುವ ಲೇಡಿಯದ್ದಂತು ಅಲ್ಲವೇ ಅಲ್ಲ..!!!
ಆ ಅನೂಹ್ಯ ಎನಿಸುವ ಮನೆಯಲ್ಲಿ ನಿಜವಾಗಿಯೂ ನಡೆಯುತ್ತಿದ್ದುದಾದರೂ ಏನು?
ಆ ಥ್ರಿಲ್ಲರ್ ಕಥೆ ಹೇಳಲಾರೆ.
ಅದಕ್ಕಾಗಿ ನೀವು ಮೂವಿಯನ್ನೇ ನೋಡಬೇಕು.
ಕೊನೆಯವರೆಗೂ ಅಚ್ಚರಿ ಮೂಡಿಸುತ್ತಲೇ,ಕುತೂಹಲ ಹೆಚ್ಚಿಸುತ್ತಲೇ ಸಾಗುವ ಈ ಕಥೆಯ ಟ್ವಿಸ್ಟ್ ಗಳು ನೋಡುಗನಿಗೆ ಬಹಳನೇ ಕಿಕ್ಕೇರಿಸುತ್ತದೆ.
2018 ರಲ್ಲಿ ಬಂದಂತಹ ಈ Psychological Thriller & Mystery ಮೂವಿಯನ್ನು Prabhakar Meena Bhaskar Pant ನಿರ್ದೇಶಿಸಿದ್ದಾರೆ. Anjali Patil,Sharib Hashmi, Abhimanyu Singh ಮೊದಲಾದವರ ಅಭಿನಯವಿದೆ.ಈ ಮೂವಿಯ ನಿರೂಪಣೆ ಇಷ್ಟವಾಯಿತು.
#My_Clients_Wife | Prime
Hindi Movie
#Movies
Ab Pacchu


Comments
Post a Comment