Nayattu
#Nayattu | Netflix
ಒಂದು Accident ನಡೆಯುತ್ತದೆ.
ಅದೂ ರಾತ್ರಿ ಹೊತ್ತಿನಲ್ಲಿ.
ಜೀಪು ಮತ್ತು ಟೂ ವೀಲರ್ ನಡುವೆ ಸಂಭವಿಸುವ Accident ಅದು.
ಟೂ ವೀಲರ್ ನವನು ಸತ್ತೇ ಹೋಗುತ್ತಾನೆ.
ಜೀಪಲ್ಲಿ ಇದ್ದ ನಾಲ್ವರಲ್ಲಿ ಮೂವರು ಪೋಲಿಸರು.
ಆ ಮೂವರು ಪೋಲಿಸರಲ್ಲಿ ಒಬ್ಬಳು ಲೇಡಿ ಪೋಲಿಸ್.
ಆದರೆ ಈ Accident ನಡೆಯುವಾಗ ಆ ಜೀಪ್ ಡ್ರೈವ್ ಮಾಡುತ್ತಿದ್ದದ್ದು...ಆ ಮೂವರು ಪೋಲಿಸರಲ್ಲಿ ಯಾರೊಬ್ಬರೂ ಅಲ್ಲ.
ಬದಲಿಗೆ ಒಬ್ಬ ಪೋಲಿಸನ ಸಹೋದರಿಯ ಮಗ ಆ ಜೀಪ್ ಡ್ರೈವ್ ಮಾಡುತ್ತಿದ್ದ.
ಆದರೆ ಅವನು ಹೆದರಿಕೆಯಿಂದ ಅಲ್ಲಿಂದ ಜೀಪು ಬಿಟ್ಟು ಓಡಿ ಹೋಗುತ್ತಾನೆ.
ಈ ಮೂವರು ಪೋಲಿಸರು ಕೊನೆಗೆ ಡೆಡ್ ಬಾಡಿಯನ್ನು ಆಸ್ಪತ್ರೆಗೆ ತರುತ್ತಾರೆ.
ಆಸ್ಪತ್ರೆಯಲ್ಲಿಯೇ ಈ ಮೂವರು ಪೋಲಿಸರ ವಿರುದ್ಧವಾಗಿ ಸತ್ತವನ ಕಡೆಯ ಜನರು ತಿರುಗಿ ಬಿದ್ದು.. ಅಲ್ಲಿಯೇ ಸಾಕಷ್ಟು ಜಗಳ ಆಗುತ್ತದೆ.
ಪೋಲಿಸರು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಓಡುತ್ತಾರೆ.
ಅದು Election ಟೈಂ ಬೇರೆ.
ಸತ್ತವನು ಒಂದು ಪ್ರಮುಖ ಜಾತಿಗೆ ಸೇರಿದವನು.
ರಾಜ್ಯದಲ್ಲಿ ಒಮ್ಮೆಲೇ ಜಾತಿ ರಾಜಕೀಯ ಶುರು ಆಗುತ್ತದೆ..ದೊಂಬಿ,ಹರತಾಳಗಳು ಹೆಚ್ಚಾಗುತ್ತದೆ.
ಆಳುವ ಸರ್ಕಾರಕ್ಕೆ ಉತ್ತರಿಸಲು ತುಂಬಾನೇ ಕಷ್ಟ ಆಗುತ್ತದೆ.
ಕೊನೆಗೆ ಆ ಮೂವರು ಪೋಲಿಸರ ತಲೆಯ ಮೇಲೆಯೇ ಈ ಕೊಲೆಯ ಕೇಸನ್ನು ಸರ್ಕಾರವೇ ಕಟ್ಟಿ ಬಿಡುತ್ತದೆ!
ಆದರೆ ನಿಜವಾಗಿಯೂ ಅವರು ಮೂವರು ಅಮಯಾಕರೇ ಆಗಿರುತ್ತದೆ.
ಆದರೆ ಆ ಕಥೆ ಇಲ್ಲಿ ಯಾರಿಗೂ ಬೇಕಾಗಿಲ್ಲ.
ಕಥೆಯಲ್ಲಿ ಅಲ್ಲಿಂದ ಚೇಸಿಂಗ್ ಶುರು...
ರೋಡು ರೋಡುಗಳಲ್ಲಿ...
ಕಾಡು ಗುಡ್ಡಗಳಲ್ಲಿ ಹುಡುಕಾಟ.
ಪೋಲೀಸರು ಪೋಲಿಸರನ್ನೇ ಬೆನ್ನು ಹತ್ತುವ ಕಥೆ ಇದು.
ನಂತರ ನಿಜವಾಗಿಯೂ ಕಥೆಯಲ್ಲಿ ಏನಾಗುತ್ತದೆ ಎನ್ನುವುದಕ್ಕೆ ನೀವು ಮೂವಿಯನ್ನೇ ನೋಡಬೇಕು.
ಇದೊಂದು ಕಾಡುವ ಕಥೆ.ಬಹುಶಃ ರಾಜಕೀಯ ಜಗತ್ತಿನಲ್ಲಿ ಇಂತಹದ್ದೇ ಎಷ್ಟೋ ಕಥೆಗಳು ನಡೆದಿರಬಹುದು,ನಡೆಯುತ್ತಿರಬಹುದು ಎಂಬ ಫೀಲ್ ಈ ಮೂವಿ ಕೊಡುತ್ತದೆ.ಕೊನೆಯವರೆಗೆ ನೋಡುವ ತಾಳ್ಮೆ ಹಾಗೂ ವ್ಯವಧಾನ ಇದ್ದರೆ ಮಾತ್ರ.. ಈ Realistic ಮೂವಿಯೂ ನಿಮಗೆ ಇಷ್ಟ ಆಗಬಹುದು.
ಈ ಮೂವಿಯನ್ನು Martin Prakkat ನಿರ್ದೇಶಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ Kunchako Boban, Joju George, Nimisha Sajayan ನವರ ಅಭಿನಯವಿದೆ.
#Nayattu | Netflix
Malayalam movie
Political Thriller
Year - 2021
#Movies
Ab Pacchu




Comments
Post a Comment