Oththa Seruppu Size 7
#Oththa_Seruppu_Size_7 | Netflix
ಪೋಲಿಸರು interrogation ಮಾಡಲೆಂದು ಅವನನ್ನು ಪೋಲೀಸ್ ಸ್ಟೇಷನ್ ಗೆ ಎಳೆದುಕೊಂಡು ಬಂದಿರುತ್ತಾರೆ.
ಅಂತಹದ್ದು ಏನಿಲ್ಲ,ಅವನ ಮೇಲೆ ಒಂದು ಕೊಲೆ ಕೇಸಿನ ಆರೋಪ ಇರುತ್ತದೆ ಅಷ್ಟೇ.
ಜಸ್ಟ್ ಆರೋಪ..!
ಆದರೆ ನೋಡಲು ಅಮಾಯಕನಂತೆ ಕಾಣುವ ಅವನು ಸುಲಭವಾಗಿ ಒಪ್ಪಿಕೊಳ್ಳುತ್ತಾನೆ..ಹೌದು ಈ ಕೊಲೆ ನಾನೇ ಮಾಡಿದ್ದು ಎಂದು!!
ಪೋಲಿಸರಿಗೆ ಆಶ್ಚರ್ಯದ ಜೊತೆ ಜೊತೆಗೆಯೇ ಸುಲಭವಾಗಿ ಈ ಕೇಸ್ Solve ಆಗಿದ್ದು ತುಂಬಾನೇ ಖುಷಿ ನೀಡುತ್ತದೆ.
ಆದರೆ ಆ ಅಮಾಯಕ ಪೋಲಿಸರಿಗೆ ಇನ್ನೊಂದು ಕಥೆ ಹೇಳಲು ಕುಳಿತು ಬಿಡುತ್ತಾನೆ.
ಪೋಲಿಸರು ಅವನ ಕಥೆಯನ್ನು ಕಿವಿಗೊಟ್ಟು ಕೇಳುತ್ತಾರೆ..
ಈ ಹಿಂದೆ ಇನ್ನೊಂದು ಕೊಲೆ ನಡೆದಿತ್ತು ಅಲ್ವಾ.. ಅದರಲ್ಲಿ ಸಿಕ್ಕಿ ಬಿದ್ದಿರುವ ಎಲ್ಲರನ್ನೂ ಬಿಟ್ಟು ಬಿಡಿ ಎಂದು.. ಅಮಯಾಕ ಹೇಳ್ತಾನೆ.
ಪೋಲಿಸರು ಕೇಳ್ತಾರೆ... ಯಾಕೆ? .
ಅಮಾಯಕ ಹೇಳ್ತಾನೆ.. ಏಕೆಂದರೆ ಅವರೆಲ್ಲರೂ ಅಮಾಯಕರು,ನಿಜವಾಗಿಯೂ ಆ ಕೊಲೆ ಕೂಡ ಮಾಡಿದ್ದು ನಾನೇ ಎಂದು ಹೇಳುತ್ತಾನೆ ಅಮಾಯಕ!!
ಪೋಲಿಸರಿಗೆ ಈಗ ನಿಜವಾಗಿಯೂ ತಲೆ ಚಿಟ್ಟು ಹಿಡಿಯುತ್ತದೆ.
ಅವನು ಆ ಎರಡನೆಯ ಕೊಲೆಯ ಕಥೆಯನ್ನು ಕೂಡ ಬಿಡಿಸಿ ಬಿಡಿಸಿ ಸವಿವರವಾಗಿ ಎಲ್ಲವನ್ನೂ ಪೋಲಿಸರ ಎದುರು ಹೇಳುತ್ತಾನೆ!
ಪೋಲಿಸರು ಆ ಕಥೆ ಮುಗಿಯಿತು ಎಂದು ಅಂದುಕೊಳ್ಳುವಾಗ ಅಮಾಯಕ ಇನ್ನೂ ಒಂದು ಕಥೆ ಹೇಳ್ತಾನೆ.
Of course ಅದೂ ಕೂಡ ಕೊಲೆಯ ಕಥೆಯೇ!
ಅಲ್ಲಿಗೆ ಒಟ್ಟು ಮೂರು ಕೊಲೆ!!
ಮೂರು ಕೊಲೆ ಮಾಡಿದ್ದೀಯಾ ಎಂದು ಹೇಳುತ್ತಿದ್ದೀಯಾ....ಆದರೂ ಸಹ ಇಷ್ಟು ಕೂಲಾಗಿ ಎಲ್ಲವನ್ನೂ ಹೇಳಿ,ಏಕೆ ನೀನೇ ಕೊಲೆಗಾರ ಎಂದು ಒಪ್ಪಿಕೊಳ್ಳುತ್ತಿದ್ದೀಯಾ..? ಎಂದು ಪೋಲೀಸರು ಸಿಟ್ಟಿನಿಂದ ಕೆಂಡಾಮಂಡಲ ಆಗಿ ಅವನಲ್ಲಿ ಕೇಳುತ್ತಾರೆ..
Good Question..
ಪೋಲಿಸರು ಕೇಳಬೇಕಾದದ್ದೇ..ನೋಡುಗನಿಗೂ ಸಹ ಅಂತಹ Question ಒಂದು ಅವಶ್ಯವಾಗಿ ಮನಸ್ಸಿನಲ್ಲಿ ಬರಬೇಕಾದದ್ದೇ.
ಅದಕ್ಕೆ ಅಮಾಯಕ ಹೇಳ್ತಾನೆ.. ಇಲ್ಲ,ನಾನು ಕೇವಲ ಮೂರು ಕೊಲೆ ಮಾಡಿಲ್ಲ,ಇದು ಶುದ್ಧ ತಪ್ಪು.. ನಾನು ಇನ್ನೂ ಎರಡು ಕೊಲೆ ಕೂಡ ಮಾಡಿದ್ದೇನೆ.. ಎಂದು ಹೇಳುತ್ತಾನೆ ಅಮಾಯಕ!!
ಎಲ್ಲಾ ಸೇರಿ ಲೆಕ್ಕ ಮಾಡಿದರೆ ಐದು ಕೊಲೆ!!!
ಕೊಲೆ ನಡೆದ ಪ್ರತೀ ಸ್ಥಳದಲ್ಲಿ ಏಳು ನಂಬರಿನ ಸಿಂಗಲ್ ಸ್ಲಿಪರ್ ಒಂದನ್ನು ಕೊಲೆಗಾರ ಬಿಟ್ಟು ಹೋಗಿರ್ತಾನೆ!
ಮತ್ತು ಕಥೆಯಲ್ಲಿ ಒಟ್ಟು ನಡೆದ ಐದು ಕೊಲೆಗಳು ಒಂದೇ ರೀತಿಯ Modus Operandi(MO)ಯಲ್ಲಿಯೇ ನಡೆದಿರುತ್ತದೆ. ಅಂದರೆ ಗಾಳಿ ಪಟದ ದಾರದಿಂದ ಉಸಿರುಗಟ್ಟಿಸಿ..ಆ ನಂತರ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿರುತ್ತದೆ.ಕೊನೆಗೆ ಶವದ ಪಕ್ಕ ಏಳನೇ ನಂಬರಿನ ಸಿಂಗಲ್ ಸ್ಲಿಪರ್ ಅನ್ನು ಕೊಲೆಗಾರ ಬಿಟ್ಟು ಹೋಗಿರುತ್ತಾನೆ!!
ಆ ಅಮಾಯಕ ನಿಜವಾಗಿ ಐದು ಕೊಲೆ ಮಾಡಿದ್ದಾನಾ?
ಅವನಿಗೆ ಮಾಡಲು ಸಾಧ್ಯವಾ?
ಶಿಕ್ಷೆ ಆಗುತ್ತದೆ ಎಂದು ಗೊತ್ತಿದ್ದರೂ ಅವನು ಏಕೆ ತಾನೇ ಮಾಡಿದ್ದು ಎಂದು ಎಲ್ಲವನ್ನೂ ಅಷ್ಟೊಂದು ಮುಕ್ತವಾಗಿ ಒಪ್ಪಿಕೊಳ್ಳುತ್ತಾನೆ?
ಮಾತ್ರವಲ್ಲ ಕೊಲೆಗಾರ ಏಕೆ ಈ ರೀತಿ ಕೊಲೆ ನಡೆದ ಸ್ಥಳದಲ್ಲಿ ಒಂದೇ ಚಪ್ಪಲಿಯನ್ನು ಬಿಟ್ಟು ಹೋಗುವುದು?ಅದೂ ಕೂಡ ಏಳನೆಯ ನಂಬರ್ ಚಪ್ಪಲಿ!
ಏತಕ್ಕಾಗಿ ಅಷ್ಟೊಂದು ಕೊಲೆಗಳು?
ಆದರೂ ಕಥೆಯ ಕೊನೆಯಲ್ಲಿ ಪೋಲಿಸರು ಅಮಾಯಕನಂತೆ ಕಾಣುವ ಅವನಿಗೆ ಏನೂ ಮಾಡದೇ ಹಾಗೇ ಮನೆಗೆ ಕಳುಹಿಸಿ ಬಿಡುತ್ತಾರೆ!!
ಆದರೆ ಏಕೆ??
ಅದನ್ನು ಹೇಳಲಾರೆ.ಅದಕ್ಕಾಗಿ ನೀವು ಮೂವಿಯನ್ನೇ ನೋಡಬೇಕು.
Oththa Seruppu Size 7. ಈ ಮೂವಿ ಹೆಸರಿನ ಭಾವನುವಾದ ಕೂಡ ಅದೇ "ಸಿಂಗಲ್ ಸ್ಲಿಪ್ಪರ್ -ಸೈಜ್ 7".
ಈ ಮೂವಿಯ ಗಮ್ಮತ್ ಏನು ಗೊತ್ತಾ..
ಈ ಕಥೆಯಲ್ಲಿ ಪೋಲಿಸರು ಇದ್ದಾರೆ,ಎಂದಿನಂತೆ ಅಮಾಯಕ ಇದ್ದಾನೆ,ಅಮಾಯಕನ ಹೆಂಡತಿ ಇದ್ದಾಳೆ,ಮಗ ಇದ್ದಾನೆ ಎಲ್ಲರೂ ಇದ್ದಾರೆ... ಇದರೆ ಇಡೀ ಮೂವಿಯಲ್ಲಿ ಇರುವುದು, ಅಭಿನಯಿಸಿದ್ದು ಬರೀ ಒಬ್ಬನೇ.ಅವನೇ ಆ ಅಮಾಯಕ!!
ಕೇವಲ ಪೋಲಿಸ್ ಸ್ಟೇಷನ್ ನ ಆ ಒಂದು Interrogation ರೂಮ್ ಒಂದರಲ್ಲಿಯೇ ಮೂವಿಯ ಸಂಪೂರ್ಣ ಕಥೆಯನ್ನು ಚಿತ್ರಿಸಿದ್ದಾರೆ.
ಕಥೆಯಲ್ಲಿ ಎಲ್ಲರ ಧ್ವನಿಯೂ ಇದೆ.
ಆದರೆ ಮೊದಲ ಪ್ರೇಮ್ ನಿಂದ ಕೊನೆಯ ಫ್ರೇಮ್ ವರೆಗೆ ಈ ಚಿತ್ರದಲ್ಲಿ ನಟಿಸಿದ್ದು ಒಬ್ಬನೇ!
2019 ರಲ್ಲಿ ಬಂದಂತಹ ಈ Thriller ಮೂವಿಯ Story ಬರೆದು,Produce ಮಾಡಿ,Direct ಮಾಡಿ,ನಟಿಸಿದ್ದು ಕೂಡ ಒಬ್ಬರೇ. R. Parthiepan ಎನ್ನುವವರೇ ಈ ಸಾಹಸ ಮಾಡಿದ್ದು.
Single person writing, directing, solo acting and producing a film ಎಂಬ ಕಾರಣಕ್ಕಾಗಿ ಈ ಮೂವಿ Asia Book of Records ಮತ್ತು India Book of Records ಸ್ಥಾನ ಪಡೆದಿದೆ. ದಾಖಲೆಗಳ ಪ್ರಕಾರ ಇದು ವಿಶ್ವದ 13 ನೇ Solo Acting ಮೂವಿ ಅಂತೆ ಮತ್ತು South India ದ ಎರಡನೆಯ ಮೂವಿ ಅಂತೆ. 2001 ರಲ್ಲಿ ಬಂದಂತಹ ಮಲಯಾಳಂ ಮೂವಿ The Guard,South India ದ ಮೊದಲ Solo Acting ಮೂವಿ ಆಗಿದೆ.All is lost (ಸಮುದ್ರ ನಡುವೆ ಒಬ್ಬನೇ),Cast Away(ದ್ವೀಪದಲ್ಲಿ ಒಬ್ಬನೇ/Tom hanks)ಯಲ್ಲಿ ಕೂಡ Solo Acting ಇದ್ದು ನೋಡಿದವರಿಗೆ ಗೊತ್ತಿರುತ್ತದೆ Solo Acting ಇದ್ದರೂ ಸಹ ಮೂವಿಯನ್ನು ಚೆನ್ನಾಗಿ ಪ್ರೆಸೆಂಟ್ ಮಾಡಿದರೆ ಇಂತಹ ಮೂವಿಗಳು ಕೂಡ ನೋಡಲು ಎಷ್ಟೊಂದು ಚೆನ್ನಾಗಿರುತ್ತದೆ ಎಂದು.
IMDb ಯಲ್ಲೂ ಕೂಡ Oththa Seruppu Size 7, 8.5/10 ರೇಟಿಂಗ್ ಹೊಂದಿದೆ.ಈ ತರಹದ ಮೂವಿ ನೋಡಲು ವಿಪರೀತ ಕಿಕ್ಕ್ ಕೊಡುತ್ತದೆ.ಆದರೆ ಅದಕ್ಕಾಗಿ ಕೊನೆಯವರೆಗೂ ನೋಡುವ ತಾಳ್ಮೆಯನ್ನು ನಾವು ಹೊಂದಿಸಿಕೊಳ್ಳಬೇಕು ಅಷ್ಟೇ. ಅಭಿನಯವೂ ಕೂಡ ಚೆನ್ನಾಗಿದೆ.ಇಷ್ಟವಾಯಿತು.
#Oththa_Seruppu_Size_7 | Netflix
Tamil Movie
#Movies
Ab pacchu
Moodbidri
(https://phalgunikadeyavanu.blogspot.com)

Comments
Post a Comment