Pariyerum Perumal
#Pariyerum_Perumal | Prime
" ನಿಂಗೆ ನಿಜವಾಗಿಯೂ ಇಂಗ್ಲಿಷ್ ಬರಲ್ವಾ..? "
" ಇಲ್ಲ..."
"ಮತ್ತೆ 10th, PUC ಎಲ್ಲಾ ಹೇಗೆ ಪಾಸ್ ಮಾಡಿದೆ..?"
"ಹೇಗೋ Adjust ಮಾಡಿ ಪಾಸ್ ಆದೆ.. ಟೀಚರ್ ಒಬ್ರು ದೇವತೆ ತರಹ ಎಕ್ಸಾಂ ಹಾಲ್ ನಲ್ಲಿ ಹೆಲ್ಪ್ ಮಾಡಿದ್ರು.."
" ಆದ್ರೆ ಇದು Law ಕಾಲೇಜು, ಇಲ್ಲಿಯೆ ಕೂಡ ಇಂಗ್ಲಿಷ್ ಸಬ್ಜೆಕ್ಟ್ ಇದೆ.. ಹೇಗೆ ಪಾಸ್ ಆಗ್ತೀಯಾ..? "
" ಹೇಗೋ Adjust ಮಾಡಿದ್ರೆ ಆಯಿತು ಬಿಡು.. "
"ನಿಂಗೆ ನಾನು ಇಂಗ್ಲಿಷ್ ಕಲಿಸಿ ಕೊಡ್ಲಾ... ಮತ್ತೆ ನೀನು Advocate ಆಗ್ಬಹುದು ಮತ್ತು ನಾನು ಆಗ್ತೇನೆ ದೇವತೆ.. "
" ನೀನು ದೇವತೆ ಆಗ್ತೀಯಾ.. ಅದು ಹೇಗೆ?"
" ನಿಂಗೆ ಇಂಗ್ಲಿಷ್ ಕಲಿಸುವವರು ಎಲ್ಲರೂ ದೇವತೆಗಳು ಅಲ್ವಾ.. ಹಾಗೇ ನಾನು ಕೂಡ ದೇವತೆ ಆಗ್ತೇನೆ.. "
" ಆಗ್ತೇನೆ ಅಲ್ಲ... ನೀನು ಈ ಕ್ಷಣದಿಂದಲೇ ನನಗೆ ದೇವತೆಯೇ ಆಗಿ ಬಿಟ್ಟಿದ್ದೀಯಾ... "
ಇಂತಹ ಸಂಭಾಷಣೆಗಳೊಂದಿಗೆ ಸಾಗುವ ಇದರ ಕಥೆ ಬರೀ ಪ್ರೇಮ ಕತೆ ಅಲ್ಲ...
ಬೇರೆ ಏನೋ ಇದೆ.
ಈಗಾಗಲೇ Karnan ನೋಡಿದ್ದರೆ ಆದರೆ ಇದ್ದನ್ನು ಇನ್ನೂ ಕೂಡ ನೋಡಿಲ್ಲದಿದ್ದರೆ.. ಒಮ್ಮೆ ಇದನ್ನು ಸಹ ನೋಡುವ ಮನಸ್ಸು ಮಾಡಿ. ಎರಡರ ಡೈರೆಕ್ಟರ್ ಕೂಡ ಒಬ್ಬರೇ... ಎರಡೂ ಮೂವಿಗಳು ಚೆನ್ನಾಗಿಯೇ ಇದೆ. ಆದರೆ ಯಾಕೋ ಇದನ್ನು ನೋಡಿದ ಮೇಲೆ Karnan ಗಿಂತಲೂ ಹೆಚ್ಚಿನ ರೇಟಿಂಗ್ ಈ Pariyerum Perumal ಗೆ ಕೊಡಲು ಮನಸ್ಸು ಬರುತ್ತದೆ. ಕಥೆ ಹೇಳಲ್ಲ... ನೋಡಿ.
Mari Selvaraj ಇದರ ಕಥೆ ಬರೆದು ನಿರ್ದೇಶಿಸಿದ್ದಾರೆ. Kathir, Anandhi, Yogi Babu ಇಷ್ಟ ಆಗುವಂತೆ ನಟಿಸಿದ್ದಾರೆ.
#Pariyerum_Perumal | Prime
Tamil Movie
Drama
Year - 2018
#Movies
Ab Pacchu
Comments
Post a Comment