Unda


 #Unda | Prime 


ಅವರು ಪೋಲಿಸರು. 


ಛತ್ತೀಸ್ ಘಡದಲ್ಲಿ ನಡೆಯುವ ಚುನಾವಣೆಯ ಭದ್ರತೆಗಾಗಿ ಅವರನ್ನು ಕಳುಹಿಸಲಾಗುತ್ತದೆ. 


ಅವರಿಗೆ.. ನೀವು ರಾಜ್ಯದ ಗೌರವವನ್ನು ಎತ್ತಿ ಹಿಡಿಯಬೇಕು,ಶಿಸ್ತಿನಿಂದ ಹಾಗೂ ಜವಾಬ್ದಾರಿಯುತವಾಗಿ ವರ್ತಿಸಿ ನಾಡಿಗೆ ಕೀರ್ತಿ ತರಬೇಕು.. ಎಂದೆಲ್ಲ ಹೇಳಿ ಸಿಕ್ಕಾಪಟ್ಟೆ ಹುರಿದುಂಬಿಸಿ ಕಳುಹಿಸಲಾಗುತ್ತದೆ.


ಹೇಗೋ ಹೋಗಿ Jolly ಮಾಡಿ ಬರಬಹುದು ಎಂಬ ಮನಸ್ಥಿತಿಯಲ್ಲಿಯೇ ಒಂಬತ್ತು ಪೋಲಿಸರ ಯುನಿಟ್ ಒಂದು ಅಲ್ಲಿಗೆ ಹೋಗುತ್ತದೆ. 


ಒಂದು ಕಾಡಿನ ನಡುವೆ ಇರುವ ಎಲೆಕ್ಷನ್ ಬೂತ್ ನಲ್ಲಿ ಅವರಿಗೆ ಭದ್ರತೆಗಾಗಿ ಹಾಕುತ್ತಾರೆ. 


ಅವರು ಅಲ್ಲಿ ಸಂಜೆ ಹೊತ್ತಲ್ಲಿ ಇಸ್ಪೀಟು ಆಡುತ್ತಾ Jolly ಮಾಡುತ್ತಾ ಇರುತ್ತಾರೆ.


ಅವರ ಮೇಲುಸ್ತುವಾರಿ ನೋಡಿಕೊಳ್ಳುವ Army ಯವರು ಅಲ್ಲಿಗೆ ಬಂದು ಅವರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುತ್ತಾರೆ. 


ಅವರಿಗೆ ಹೇಳುತ್ತಾರೆ ನೀವು ಈಗ ಇರುವುದು ದೇಶದಲ್ಲಿ ಅತೀ ಹೆಚ್ಚು ಮಾವೋವಾದಿಗಳು,ನಕ್ಸಲರು ಇರುವ ಕಾಡಿನ ಪ್ರದೇಶದಲ್ಲಿ.ನಿಮ್ಮನ್ನು ಅವರು ಯಾವಾಗ ಬೇಕಾದರೂ ಕೊಲ್ಲಬಹುದು. ನಿಮಗೆ ಶಿಸ್ತೇ ಇಲ್ಲ.ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿ.. ಎಂದು ಎಚ್ಚರಿಸಿ ಹೋಗುತ್ತಾರೆ. 


ಆ ನಂತರ ನಿಜವಾಗಿಯೂ ರಾತ್ರಿ ವೇಳೆ ಅವರಿದ್ದ ಬೂತ್ ಮೇಲೆ ನಕ್ಸಲರ ಧಾಳಿ ಕೂಡ ನಡೆಯುತ್ತದೆ.ನಕ್ಸಲರು ಒಂದೆರಡು ಗುಂಡು ಹಾರಿಸಿ ನಂತರ ಸುಮ್ಮನೆ ಹೆದರಿಸಲು ಮಾಲೆ ಪಟಾಕಿ ಸಿಡಿಸಿ ಹೋಗುತ್ತಾರೆ. 



ಈ ಪೋಲಿಸರು ಹೊರಗಿನಿಂದ ನಿಜ ಫೈರಿಂಗ್ ಆಗುತ್ತಿದೆ ಎಂದುಕೊಂಡು ಭಯ ಬಿದ್ದು ತಮ್ಮಲ್ಲಿರುವ ಇದ್ದ ಬದ್ದ ಗುಂಡುಗಳನ್ನು ತಮ್ಮ SLR ರೈಫಲ್ ನಿಂದ ಹಾರಿಸಿ ಹಾರಿಸಿಯೇ  ಖಾಲಿ ಮಾಡಿ ಬಿಡುತ್ತಾರೆ. 


ನಂತರ Army ಯವರು ಬಂದು ಅವರಿಗೆ ಪುನಃ ಛೀಮಾರಿ ಹಾಕಿ ಎಚ್ಚರಿಸಿ ಹೋಗುತ್ತಾರೆ.


ಈಗ ಪೋಲಿಸರಲ್ಲಿ ಉಳಿದಿರುವುದೇ ಒಟ್ಟು 8 ಬುಲ್ಲೆಟ್ ಗಳು. 


ಮೊದಲು ಪೋಲಿಸ್ ಇಲಾಖೆ ಕೂಡ ಅವರಿಗೆ ಹೆಚ್ಚಿನ ಬುಲ್ಲೆಟ್ ಗಳನ್ನು ಸಪ್ಲೈ ಮಾಡಲು ನಿರಾಕರಿಸುತ್ತದೆಯಾದರೂ ನಂತರ ಎಕ್ಸ್ಟ್ರಾ ಬುಲ್ಲೆಟ್ ಗಳನ್ನು ಕಳುಹಿಸುತ್ತದೆ. ಆದರೆ ಇಬ್ಬರು ಪೋಲಿಸರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಬುಲ್ಲೆಟ್ ಬಾಕ್ಸೇ  ಕಳೆದು ಹೋಗುತ್ತದೆ. 


ಉಳಿದ 8 ಬುಲ್ಲೆಟ್ ಗಳಿಂದ ಹಾಗೂ ತಮ್ಮಲ್ಲಿರುವ ಲಾಠಿಯಿಂದ ನಕ್ಸಲರು ಹಾಗೂ ಲೋಕಲ್ ಪಾರ್ಟಿ ಗೂಂಡಗಳ ವಿರುದ್ಧ ಎಲೆಕ್ಷನ್ ದಿನ ಪೋಲಿಸರು  ಹೋರಾಡುವುದೇ ಈ ಮೂವಿಯ ಕಥೆ. 


ಆ ಕಥೆ ಏನಾಗುತ್ತದೆ ಎಂದು ತಿಳಿಯಲು ನೀವು ಮೂವಿಯೇ ನೋಡಬೇಕು. 


ಇದೊಂದು Black Comedy ಮೂವಿ. ಸೀರಿಯಸ್ ಸಬ್ಜೆಕ್ಟ್ ನ ನಡು ನಡುವೆ ಅಲ್ಲಲ್ಲಿ ಇರುವ ಕಾಮಿಡಿ ನೋಡುವವರಿಗೆ ನಿಜವಾಗಿಯೂ ಸಿಕ್ಕಾಪಟ್ಟೆ ಕಚಗುಳಿ ಇಡುತ್ತದೆ.ಅಂದ ಹಾಗೆ ಇದೊಂದು ನೈಜ ಘಟನೆ ಆಧಾರಿತ ಕಥೆಯಂತೆ.


ಈ ಮೂವಿಯನ್ನು Khalid Rahman ನಿರ್ದೇಶನ ಮಾಡಿದ್ದಾರೆ.Mammootty,Shine Tom Chacko, Arjun Ashokan, Ranjith,Dileesh Pothan,Asif Ali... ಮೊದಲಾದವರ ಅಭಿನಯವಿದೆ.Unda ಅಂದ್ರೆ ಬುಲ್ಲೆಟ್.




#Unda | Prime 

Malayalam Movie 

Black Comedy 

Year - 2019


#Movies 

Ab Pacchu

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!