Virus
#Virus | Prime
ಇದು ಒಂದು ವೈರಸ್ ನ ಕಥೆ.
ಮೊದಲಿಗೆ ಒಂದಿಬ್ಬರು ನಾರ್ಮಲ್ ಜ್ವರ ಬಂದು ಆಸ್ಪತ್ರೆ ಸೇರುತ್ತಾರೆ.
ನಂತರ ಅವರ ಜ್ವರ ಜೋರಾಗುತ್ತಾ ಹೋಗುತ್ತದೆ ಅದೇ ರೀತಿ ಅವರ ಬ್ಲಡ್ ಪ್ರೆಶ್ಶರ್ ಕೂಡ ನಿಗದಿತ ಒತ್ತಡವನ್ನು ಮೀರಿ ನಿಲ್ಲುತ್ತದೆ.
ಕಫ,ಕೆಮ್ಮು ಅಧಿಕವಾಗುತ್ತಾ ಹೋಗುತ್ತದೆ.
ಉಸಿರಾಟದ ಸಮಸ್ಯೆ ಇನ್ನಿಲ್ಲದಂತೆ ಹೆಚ್ಚಾಗುತ್ತದೆ.
ದೇಹ ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸಿದೇ ಹೋಗುತ್ತದೆ!
ಸಾಮಾನ್ಯ ಜ್ವರ ಅಸಾಮಾನ್ಯ ರೋಗದ ಲಕ್ಷಣದೊಂದಿಗೆ ದಾಂಧಲೆ ಮಾಡಲು ಶುರು ಮಾಡುತ್ತದೆ.
ವೈದ್ಯರುಗಳಿಗೆ ಇದೊಂದು ಹೊಸ ರೋಗ,ಹೊಸ ವೈರಸ್.
ಅದು ಯಾವ ವೈರಸ್,ಹೇಗೆ Spread ಆಗುತ್ತದೆ,ಯಾರು ಯಾರಿಂದ Spread ಆಗುತ್ತಾ ಹೋಗುತ್ತಿದೆ.... ಎನ್ನುವುದೇ ಈ ಮೂವಿಯ ಕಥೆ.
ಕೆಲವು ವರ್ಷಗಳ ಹಿಂದೆ ಬಾವಲಿಯಿಂದ Spread ಆದ Nipah Virus ನ ಕಥೆ ಇದು.
ಪರಿಚಯವೇ ಇಲ್ಲದ ಹೊಸದಾದ ಭೀಕರ ರೋಗವೊಂದು ಬಂದು ಅಪ್ಪಳಿಸಿದಾಗ ವೈದ್ಯಕೀಯ ರಂಗ,ವೈದ್ಯರು ಹಾಗೂ ನಮ್ಮ ಸಮಾಜ ಯಾವ ರೀತಿ ಅದಕ್ಕೆ ಪ್ರತಿಕ್ರಿಯಿಸುತ್ತದೆ.. ಯಾವ ಯಾವ ಸವಾಲುಗಳು ಎದುರಾಗುತ್ತದೆ ಎಂದು ತಿಳಿಯಲು ನಿಜವಾಗಿಯೂ ಇದು ನೋಡಬೇಕಾದ ಮೂವಿ.ಅದರಲ್ಲೂ ಈ ಕೊರೋನ ಸಮಯದಲ್ಲಿ ಈ ಮೂವಿ ಪ್ರಸ್ತುತ ಸ್ಥಿತಿಗೆ ಹೆಚ್ಚು ತಾಳೆಯಾಗುತ್ತದೆ.
ವೈರಸ್ ನ ಕಥೆಯ ನಡುವೆ ಸಣ್ಣ ಪುಟ್ಟ ಮಾನವ ಸಂಬಂಧಗಳ ಕಥೆಯನ್ನು ಕೂಡ ಹದವಾಗಿ ಬೆರೆಸಿ ಚಂದವಾಗಿ ಈ ಮೂವಿಯನ್ನು ಪ್ರೆಸೆಂಟ್ ಮಾಡಿದ್ದಾರೆ.
2019 ರಲ್ಲಿ ಬಂದಂತಹ ಈ ಮೂವಿಯನ್ನು Aashiq Abu ನಿರ್ದೇಶನ ಮಾಡಿದ್ದಾರೆ.Kunchacko Boban,Tovino Thomas, Parvathy Menon, Asif Ali, Soubin Shahir, Madonna Sebastian, Sreenath Bhasi, Joju George, Dileesh Pothan,Darshana Rajendran,Basil Joseph, Leona Lishoy,Indrans,Revathi, Rahman, Indrajith Sukumaran, Remya Nambeesan..ಮುಂತಾದವರ ಬಹು ದೊಡ್ಡ ತಾರಾಗಣವೇ ಇದಕ್ಕಿದೆ.
#Virus | Prime
Malayalam Movie
#Movies
Ab Pacchu


Comments
Post a Comment