Who am I
#Who_Am_I | Netflix
FRI3NDS ಎಂಬ ನಾಲ್ಕು ಜನರ ನಟೋರಿಯಸ್ ಹ್ಯಾಕಿಂಗ್ ಗ್ರೂಪ್ ಬಗ್ಗೆ ಹಾಗೂ ಜಗತ್ತಿನ ಯಾವುದೇ ಸಿಸ್ಟಂ ಅನ್ನು ಅತೀ ಸುಲಭವಾಗಿ ಹ್ಯಾಕ್ ಮಾಡಬಲ್ಲ Darknet ನ ವೆರೀ ಫೇಮಸ್ ಹ್ಯಾಕರ್ MRX ನ ಬಗ್ಗೆಯೂ ಎಲ್ಲವನ್ನೂ ಹೇಳುತ್ತೇನೆ, ಅವರೆಲ್ಲರನ್ನು ಹಿಡಿಯಲು ನಿಮಗೆ ಸಹಾಯ ಮಾಡುತ್ತೇನೆ ಎಂದು Europol ನ Cyber Devision ನ ಮುಖ್ಯಸ್ಥೆಯ ಎದುರು ಬಂಧಿಯಾಗಿ ಹೇಳುವ Benjamin Engel ಎಂಬುವವ ಸ್ವತಃ ಒಬ್ಬ ಬುದ್ಧಿವಂತ ಹ್ಯಾಕರ್ ಮಾತ್ರವಲ್ಲ CLAY (Clowns Laughing At You) ಎಂಬ ನಾಲ್ಕು ಜನರ ಹ್ಯಾಕಿಂಗ್ ತಂಡದ ಸಕ್ರೀಯ ಸದಸ್ಯ ಕೂಡ ಹೌದು.. !!
"NO SYSTEM IS SAFE" ಎಂದು ಹೇಳಿಕೊಂಡು ದೊಡ್ಡ ದೊಡ್ದ ಸೇಫೆಸ್ಟ್ ಸಿಸ್ಟಂಗಳನ್ನು ಕೂಡ ಮಾಸ್ಕ್ ಹಿಂದೆ ಮುಖ ಮರೆಸಿಕೊಂಡು ಹ್ಯಾಕ್ ಮಾಡುತ್ತಲೇ ಹೋಗುವ ಈ ಟೆಕ್ನೋ ಥ್ರಿಲ್ಲರ್ ಕಥೆಯ ಟ್ವಿಸ್ಟ್ ಗಳು ಕೂಡ ಅಷ್ಟೇ ಚೆನ್ನಾಗಿದೆ.Baran bo Odar ನಿರ್ದೇಶನ ಈ ಜರ್ಮನ್ ಮೂವಿಯಲ್ಲಿ Tom Schilling, Elyas M'Barek ಮೊದಲಾದವರ ಅಭಿನಯವಿದೆ.
#Who_Am_I | Netflix
German Movie
Techno Thriller
Year - 2014
#Movies
Ab Pacchu



Comments
Post a Comment