Who!
#Who | Prime
ಮಂಜು ಮುಸುಕಿದ ಆ ಹಸಿರು ಕಣಿವೆಯೊಳಗೆ,ಅದರೊಳಗಿನ ದೃಶ್ಯದೊಳಗೆ ಇದರ ಕಥೆ ಹುದುಗಿಕೊಂಡಿದೆ.
Sorry, ಕಥೆ ಎಂದರೆ ತಪ್ಪಾಗಿ ಬಿಡುತ್ತದೆ.
ಕಥೆಗಿಂತಲೂ ಅಧಿಕವಾಗಿ ಸುಪ್ತವಾದ ಕನಸ್ಸಿದೆ.
"ಕನಸ್ಸುಗಳು" ಇವೆ ಎಂದರೆ ಇನ್ನೂ ಹೆಚ್ಚು ಸಮರ್ಪಕವಾಗಿರುತ್ತದೆ.
ಇಲ್ಲಿ ಕನಸ್ಸು ಬೀಳುತ್ತದೆ.
ನಿರಂತರವಾಗಿ ಬೀಳುತ್ತಲೇ ಇರುತ್ತದೆ.
Of course ತುಂಬಾನೇ ಬಿಡದೇ ಕಾಡುವಂತವುಗಳು.
ಕನಸ್ಸಿನಲ್ಲಿ ಬರುವ ಎಲ್ಲರೂ ಅಪರಿಚತರೇ.
ಆದರೆ ಅವರುಗಳದ್ದೇ ಕನಸ್ಸುಗಳು ಪದೇ ಪದೇ ಬೀಳುತ್ತದೆ.
ಒಬ್ಬರಿಗೆ ಅಲ್ಲ ಹಲವರಿಗೆ ಇಂತಹದ್ದೇ ಕನಸ್ಸು ಬೀಳುತ್ತದೆ.
ಯಾಕೆ...? ಏನು..? ಏತ್ತ..? ಎಂದು ಯಾರಿಗೂ ಗೊತ್ತಿಲ್ಲ.
ಅದರಲ್ಲೂ ಒಬ್ಬಳಿಗೆ ಬೀಳುವ ಕನಸಲ್ಲಿ ಯಾರೋ ಒಬ್ಬರು ಸಾಯ್ತಾರೆ.
ನಿಜ ಜೀವನದಲ್ಲಿ ಅವರೇ ಒಂದು ಕಡೆ ನಿಜವಾಗಿಯೂ ಸತ್ತಿರುತ್ತಾರೆ!
ಆದರೆ ಇದೆಲ್ಲ ಹೇಗೆ?
December 25, 2012 ರಲ್ಲಿ ಸತ್ತು ಹೋಗಿರುವವರ ಕನಸ್ಸು ಆ ಹುಡುಗಿಗೆ January 28,2014 ರಂದು ಬೀಳುತ್ತದೆ. ಅಂದರೆ ಎರಡು ವರ್ಷಗಳ ನಂತರ!
ಆ ಜಾಗ, ಆ ಮುಖಗಳು,ಆ ಹೆಸರುಗಳು.. ಎಲ್ಲವೂ ಅವಳಿಗೆ ಕನಸ್ಸಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅದನ್ನು ಅವಳು ಕನಸ್ಸಿನಿಂದ ಎದ್ದ ಕೂಡಲೇ ತನ್ನ ಡೈರಿಯಲ್ಲಿ ಬರೆದಿಟ್ಟುಕೊಳ್ಳುತ್ತಾಳೆ ಕೂಡ!
ಆದರೆ ಇನ್ನು ಕೆಲವರಿಗೆ ಆ ಘಟನೆಗೆ ಸಂಬಂಧ ಪಟ್ಟ ಕನಸ್ಸು December 25, 2012 ರಿಂದಲೇ ನಿರಂತರವಾಗಿ ಬೀಳುತ್ತಿರುತ್ತದೆ.!!
ಆ ಕಣಿವೆಯಲ್ಲಿ ಬೇರೆ ಬೇರೆ ವರ್ಷಗಳಲ್ಲಿ ನಿರಂತರವಾಗಿ ಎಷ್ಟೋ ವರ್ಷಗಳಿಂದ ತಾರೀಕು April 8, ಬೆಳಿಗ್ಗೆ 5.30 ಕ್ಕೆ ಹುಟ್ಟಿದವರು.. December 25 ಕ್ಕೆನೇ ಸತ್ತು ಹೋಗುತ್ತಾರೆ!
ಕೆಲವರದ್ದು ಸಹಜ ಸಾವು.
ಇನ್ನು ಕೆಲವರದ್ದು ಅಸಹಜ.
ಆದರೆ ಏತಕ್ಕಾಗಿ?
Actually ಈ ಮೂವಿಯ ಕಥೆ ಏನು?
ಇದರ ಉತ್ತರಕ್ಕಾಗಿ ಮೂವಿ ಮುಗಿದ ಮೇಲೂ ಕೂಡ ನೀವು ಮೂವಿಯ ಕಥೆಯನ್ನು ಉತ್ಖನನ ಮಾಡಬೇಕಾಗುತ್ತದೆ.
ಪದೇ ಪದೇ ಕನಸ್ಸಿನಲ್ಲಿ ಬರುವ ಆ ಮನೆ,ಆ ಗೂಡುದೀಪ,ಅದರ ಪಾತ್ರಗಳು ಒಂಥರಾ Strange ಅನಿಸುತ್ತದೆ.
ನಿಜ ಹೇಳಬೇಕೆಂದರೆ ಮೂವಿ ಮುಗಿದಾಗ ಇದರ ಕಥೆ ಏನು ಎಂದು ನಿಮಗೆ ಗೊತ್ತಾಗದೆ ಇದ್ದರೆ ಅದರಲ್ಲಿ ನಿಮ್ಮ ತಪ್ಪೇನು ಇಲ್ಲ ಬಿಡಿ.. ಏಕೆಂದರೆ ಇದರ ಕಥೆಯನ್ನು ಅದೇ ರೀತಿ ಗೋಜಲು ಗೋಜಾಲಾಗಿ ಕಟ್ಟಿ ಕೊಟ್ಟಿದ್ದಾರೆ.
ಅಯೋಮಯ ಕನಸುಗಳು ಗೊಂದಲ ಹುಟ್ಟಿಸುವ ಕಥೆಗಳನ್ನು ಕೇವಲ ಕಥೆಯ ಪಾತ್ರಧಾರಿಗಳಿಗೆ ಮಾತ್ರವಲ್ಲ... ನಮ್ಮಲ್ಲೂ ಗೊಂದಲವನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗುತ್ತದೆ.
ನೀವು ಕಥೆಗೆ ಸಂಬಂಧಿಸಿದಂತೆ ಎಷ್ಟು ಸರಿಯಾದ Conclusion ಗೆ ಬಂದಿರುತ್ತಿರಿ ಎನ್ನುವುದು ಕೂಡ ನಿಮಗೆ ಬಿಟ್ಟದ್ದು!
ಏನೂ ಅರ್ಥ ಆಗದಿದ್ದರೆ... ನೋಡಿ... ಜಸ್ಟ್ ಮರೆತು ಬಿಡಿ.
ಮುಂದಿನ ಚಾಪ್ಟರ್ ಬಂದರೂ ಬರಬಹುದು.. ಆಗ ಸ್ಪಷ್ಟತೆ ಇನ್ನಷ್ಟು ನಿಖರವಾಗಬಹುದು.
ಒಂಥರಾ ಮರ್ಲ್ ಮೂವಿ ಅನಿಸಿದರೂ... ಕೆಲವರಿಗೆ ಇಂತಹ ಮೂವಿಗಳು ಬಹಳನೇ ಇಷ್ಟ.ಅಂತವರು ಖಂಡಿತವಾಗಿಯೂ ನೋಡಬಹುದು ಇದನ್ನು.
ಹೇಳಿ ಕೇಳಿ ಇದೊಂದು Time Travel ಮೂವಿ.
ಯಾರದ್ದೋ Frequency,Wave Length ಬೇರೆ ಯಾರಿಗಾದರೂ ಮ್ಯಾಚ್ ಆದರೆ.. ಅವರ ಕನಸುಗಳೇ ಇಲ್ಲಿ ಬೀಳಲು ಶುರುವಾಗುತ್ತದೆ!
ಆ ಕನಸ್ಸಿನ ಬೆನ್ನು ಹಿಡಿದು ಮತ್ತೆ ಕನಸಿನಲ್ಲಿ ಸ್ಪಷ್ಟತೆಗಾಗಿ ಇನ್ನಿಲ್ಲದಂತೆ ತಡಕಾಡುವುದೇ ಕಥೆ!
December 25, 2012 ರಂದು ಕೊಲೆ ಆಗಿರುವ ಹುಡುಗಿಯ ಕೇಸ್ ಅನ್ನು ಒಬ್ಬ ಪೋಲಿಸ್ ತನಿಖೆ ಮಾಡಲು ಹೋಗುತ್ತಾನೆ.
ಅವನ ತನಿಖೆಯಲ್ಲಿ ಅವನಿಗೆ ಕಂಡು ಬರುವುದು ಏನೆಂದರೆ... ಈ ಕೊಲೆಯ ಕನಸ್ಸು ಬೀಳುವ ಹುಡುಗಿ... 2014 ಡಿಸೆಂಬರ್ 25 ರ ನಂತರ,ಸತ್ತು ಹೋಗುವ ಎಲ್ಲರನ್ನೂ ಅವರು ಸಾಯುವುದಕ್ಕೆ ಮೊದಲು ಒಮ್ಮೆ ಭೇಟಿ ಆಗಿರುತ್ತಾಳೆ.
ಆದರೆ ಈ ಮೂವಿಯ ಕಥೆಯಲ್ಲಿ 2014 ಡಿಸೆಂಬರ್ ನಂತರ ಆ ಕೊಲೆಯ ಕನಸ್ಸು ಬೀಳುವ ಹುಡುಗಿ... ಮನೆಯಿಂದ ಎಲ್ಲೂ ಹೊರಗೆ ಹೋಗದೇ ಮೂರು ವರ್ಷ ಬರೀ ಕೋಮದಲ್ಲಿಯೇ ಇರುತ್ತಾಳೆ!!!
ಅತ್ಯಧ್ಭುತವಾದ ಸಿನಿಮಾಟೋಗ್ರಫಿ ಇದಕ್ಕಿದೆ.ಬಹುಶಃ ಇಂಡಿಯಾದಲ್ಲಿ ಶೂಟ್ ಮಾಡಿದ್ದು ಎಂದು ಅನ್ನಿಸುವುದೇ ಇಲ್ಲ. ಇದನ್ನು ಉತ್ತರಾಖಂಡದ ನೈನಿತಾಲ್ ನ ಸುಂದರ ಮಂಜಿನ ಕಣಿವೆಗಳಿಗಿಳಿದು ಚಿತ್ರಿಕರಿಸಿದ್ದಾರೆ.
2018 ರಲ್ಲಿ ಬಂದಂತಹ ಈ ಚಿತ್ರ ಒಂದು Science fiction film ಆಗಿದೆ. Ajay Devaloka ಇದನ್ನು ನಿರ್ದೇಶಿಸಿದ್ದಾರೆ. Shine Tom Chacko, Pearle Maaney, Shruthy Menon, Rajeev Pillai ಇದರಲ್ಲಿ ಅಭಿನಯಿಸಿದ್ದಾರೆ.
#Who | Prime
Malayalam Movie
Science Fiction
#Movies
Ab Pacchu


Comments
Post a Comment