WTC ಯ ಫೈನಲ್ ಪಂದ್ಯ ಮತ್ತು ಡ್ರಾ ಫಲಿತಾಂಶ
ಈ ಎರಡೂ ತಂಡಗಳ Predicted 11 ಅನ್ನು ಅಕ್ಕ ಪಕ್ಕ ಇಟ್ಟಾಗ ಭಾರತದ ಬ್ಯಾಟಿಂಗ್,ಬೌಲಿಂಗ್,ಹಾಗೂ ನ್ಯೂಜಿಲೆಂಡ್ ನ ಬ್ಯಾಟಿಂಗ್ ಬಗ್ಗೆ ಅಂತಹ ವಿಶೇಷವಾದದ್ದೇನು ಗೋಚರಿಸದಿದ್ದರೂ ... ಸದ್ಯಕ್ಕೆ ನನಗೆ ತೀವ್ರವಾದ ಕುತೂಹಲ ಹುಟ್ಟಿಸುತ್ತಿರುವುದು ನ್ಯೂಜಿಲ್ಯಾಂಡ್ ಆ ಲೀಥಲ್ ವೇಗದ ದಾಳಿ!
ಅದನ್ನು ಒಂದು ರೇಂಜಿಗೆ ಸಂಭಾಳಿಸಿ ಬಿಟ್ಟರೆ ಆಂಗ್ಲರ ನಾಡಿನಲ್ಲಿ ಚೊಚ್ಚಲ World Test Championship(WTC)ನ ಜಗ ಮಗಿಸುವ ಟ್ರೋಫಿ ಭಾರತದ ತೆಕ್ಕೆಗೆ ಬೀಳಬಹುದು.ಆದರೆ ಇದು ಅಷ್ಟೊಂದು Easy Task ಖಂಡಿತವಾಗಿಯೂ ಅಲ್ಲವೇ ಅಲ್ಲ.
ICC ಮತ್ತೊಮ್ಮೆ ತನ್ನ ದ್ವಂದ್ವ ಕ್ಕೆ ಇಲ್ಲಿಯೂ ಅವಕಾಶ ಕಲ್ಪಿಸಿ ಬಿಟ್ಟಿದೆ. ಫೈನಲ್ ಪಂದ್ಯಕ್ಕೆ ಮಳೆ ಬಂದರೆ ರಿಸರ್ವ್ ಡೇ ಏನೋ ಇದೆ.ಆದರೆ ಫೈನಲ್ ಪಂದ್ಯ ಏನಾದರೂ ಡ್ರಾ ಆದರೆ ಇಲ್ಲಿ ಯಾವುದೇ Tie Breaker ಇರುವುದಿಲ್ಲ!
ಡ್ರಾ ಆದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ ಎಂದು ICC ಈ ಮೊದಲೇ ಸ್ಪಷ್ಟಪಡಿಸಿದೆ.!!
ಎಲ್ಲಾ ತಂಡಗಳು 2019 ರಿಂದ ಮೂರು ವರ್ಷ ನಿರಂತರವಾಗಿ ಆಡಿ... ಕೊನೆಯಲ್ಲಿ ಟೈಟಲ್ ಗಾಗಿಯೇ ಫೈನಲ್ ನಲ್ಲಿ ಆಡುವಾಗ ಅದು ಒಂದು ವೇಳೆ ಡ್ರಾ ಆದರೆ..ಅತ್ತ ಟೈ ಬ್ರೇಕರ್ ಕೂಡ ಇಲ್ಲ ಇತ್ತ ಟೇಬಲ್ ಟಾಪರ್ ಗಳಿಗೆ ಕೂಡ ಯಾವುದೇ ಮಾನ್ಯತೆ ಇಲ್ಲದೇ ಇರುವುದು ಎಷ್ಟು ಸರಿಯೋ ಅದು ICC ಗೆ ಗೊತ್ತು!
ಇಂತಹ ಧೀರ್ಘಕಾಲ ದ ಚಾಂಪಿಯನ್ ಗೆ ಕನಿಷ್ಠ ಪಕ್ಷ ಫೈನಲ್ ನಲ್ಲಿ ಬೆಸ್ಟ್ ಆಫ್ ಥ್ರಿ ಪಂದ್ಯಗಳನ್ನಾದರೂ ಆಡಿಸಬೇಕಿತ್ತು ಅದು ಕಷ್ಟ ಆಗುವುದಾದರೆ ವಿನ್ನರ್ ಅನ್ನು ನಿರ್ಧರಿಸಲು ಬೇರೆ ಯಾವುದಾದರೊಂದು ಮಾರ್ಗವನ್ನು ICC ಯ ಚಿಂತಕರ ಚಾವಡಿ ಆಲೋಚಿಸಲೇಬೇಕಿತ್ತು ಎಂಬುದು ನನ್ನ ಅಭಿಪ್ರಾಯ ಅಷ್ಟೇ.
ಭಾರತದ್ದೊಂದು ಜರ್ನಿ ಈ WTC ಯಲ್ಲಿ ಅಮೋಘವಾಗಿತ್ತು.ಎಲ್ಲಾ ದಿಗ್ಗಜ ತಂಡಗಳ ಹೆಡೆಮುರಿ ಕಟ್ಟಿದ ಭಾರತಕ್ಕೆ ಕೊನೆಯಲ್ಲಿ ಡ್ರಾ ಆದರೆ ಅದಕ್ಕಿಂತ ದೊಡ್ಡ ನಿರಾಸೆ ಇನ್ನೊಂದಿಲ್ಲ.ಭಾರತ ಗೆಲ್ಲುತ್ತದೆ ಎನ್ನುವ ವಿಶ್ವಾಸ ಖಂಡಿತವಾಗಿಯೂ ಇದೆ,ಅದರೊಟ್ಟಿಗೆ ICC ಇನ್ನಾದರೂ Tie Breaker ಗಳ ಬಗ್ಗೆ ಅದರಲ್ಲೂ ಮಹತ್ವದ ಪಂದ್ಯಗಳಲ್ಲಿ ಇವುಗಳ ಬಗ್ಗೆ ಹೆಚ್ಚು ಚಿಂತಿಸಬೇಕಿದೆ.ಇಲ್ಲದಿದ್ದರೆ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ತಪ್ಪಿದ್ದಲ್ಲ..
#Cricket
Ab Pacchu


Comments
Post a Comment