ಸೌತ್ಯಾಂಪ್ಟನ್ ಮಳೆ ಹಾಗೂ ಜಂಟಿ ವಿಜೇತರು..
ಪೈನಲ್ ಪಂದ್ಯದ ಆಯೋಜಕರಲ್ಲಿ ಒಂದು ಕಳಕಳಿಯ ವಿನಂತಿ...ಇನ್ನೂ ಮೂರ್ನಾಲ್ಕು ದಿನ ನಾವು ಹೀಗೇ ಕಾದು ನೋಡುವ ತಂತ್ರ ಅನುಸರಿಸೋಣ(ಅದು ಬಿಟ್ಟರೆ ನಮಗೆ ಬೇರೆನು ಮಣ್ಣಾಂಗಟ್ಟಿ ಮಾಡಲು ಆಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ),ಮಳೆ ಇದೇ ರೀತಿ ಸರಿಯಾಗಿ ಕ್ರಿಕೆಟ್ ಆಡ್ಲಿಕ್ಕೆ ಬಿಡದೇ ಇದ್ದರೆ,ಇವತ್ತಿನ ಹಾಗೆಯೇ ಕೊನೆಯವರೆಗೂ ಕೇವಲ ಕಣ್ಣ ಮುಚ್ಚಾಲೆ ಆಟವೊಂದನ್ನೇ ಅದಕ್ಕೆ ಖುಷಿ ಬಂದಂತೆ ಆಟವಾಡಿ ಬಿಟ್ಟರೆ,ದಯವಿಟ್ಟು ಯಾವುದೇ ಕಾರಣಕ್ಕೂ ಪಂದ್ಯ ಡ್ರಾ ಎಂದು ನಾವು ಅಮಸರ ಅಮಸರದಿಂದ ಘೋಷಣೆ ಮಾಡುವ ಮೂಲಕ ಎರಡೂ ತಂಡವನ್ನು ಜಂಟಿ ವಿಜೇತರನ್ನಾಗಿ ಮಾಡುವುದು ಬೇಡವೇ ಬೇಡ.. ಪ್ಲೀಸ್sss..
ಅದರ ಬದಲು ನಾಣ್ಯ ಚಿಮ್ಮುಗೆಯ ಮೂಲಕ ವಿಜೇತರು ಯಾರೆಂದು ಕಂಡು ಹಿಡಿಯುವ ತಂತ್ರಕ್ಕೆ ನಾವು ಮೊರೆ ಹೋಗುವುದೇ ನೂರು ಪಟ್ಟು ಬೆಟರ್.ನಮ್ಮ ಕಡೆ ಉಂಟಲ್ಲಾ ಈ ಗುಡ್ಡೆ ಹಾಗೂ ಕಂಡದಲ್ಲಿ ನಡೆಯುವ ಸಣ್ಣಪುಟ್ಟ ಲಾಟ್ಪೋಟ್ ಟೂರ್ನಮೆಂಟ್ ನಲ್ಲಿ ಸ ನಾವು ಹೆಚ್ಚಾಗಿ ಟೈ ಎಲ್ಲಾ ಆದರೆ ಜಂಟಿ ವಿಜೇತರ ಬದಲು ಹೀಗೆಯೇ ಟಾಸ್ ಹಾಕಿ ಹೇಗಾದರೂ ಮಾಡಿ ಸಿಂಗಲ್ ವಿಜೇತರನ್ನು ಆಯ್ಕೆ ಮಾಡಿಯೇ ಮಾಡುತ್ತೇವೆ.ಇಲ್ಲಿ ಯಾವುದೇ ಪೆಟ್ಟ್ ಲಡಾಯಿಗೆ ಅವಕಾಶವಿಲ್ಲ.ಆಯೋಜಕರ,ಸಂಘಟಕರ ಹಾಗೂ ಟೂರ್ನಮೆಂಟ್ ಗೆ ಅತೀ ಹೆಚ್ಚು Sponsor ನೀಡಿರುವ ಗ್ರಾಮದ ಒಬ್ಬ ಧೀಮಂತ ಕೊಡುಗೈ ದಾನಿಯ ತೀರ್ಮಾನವೇ ಅಂತಿಮವಾಗಿರುತ್ತದೆ.ಚೊರೆ ಮಾಡುವ ತಂಡಕ್ಕೆ ಚೀಮಾರಿ ಹಾಕಿ ಮನೆಗೆ ಕಳುಹಿಸಲಾಗುವುದು.ಹೇಳಿ ಕೇಳಿ ನಮ್ಮ ಟೀಮ್ ಇಂಡಿಯಾದ ಹುಡುಗರು ಅಂತಹ ಅಶಿಸ್ತಿನ ವರ್ತನೆಯನ್ನು ತೋರುವವರಲ್ಲ.ನ್ಯೂಜಿಲ್ಯಾಂಡ್ ನವರಂತು ಮೊದಲೇ ನಮಗಿಂತಲೂ ಬಾರೀ ಪಾಪದವರು.ಹಾಗಾಗಿ ಯಾವುದೋ ಒಂದು ಕಾಟಾಚಾರಕ್ಕೆ ಬಿದ್ದು ಅಮಸರದಲ್ಲಿ ಪಂದ್ಯ ಮುಗಿಸಿ ಕೈ ತೊಳೆದು ಕೊಳ್ಳುವ ಬದಲು ಈ ರೀತಿ ನಾಣ್ಯ ಚಿಮ್ಮುಗೆಯ ಮೂಲಕ, ಟಾಸ್ ವಿನ್ ಆದವರಿಗೆ ಕಪ್ ಕೊಟ್ಟು,ನಗು ನಗುತ್ತಲೇ ಕೈ ಕುಲುಕಿ ಅವರನ್ನು ಗೌರವದಿಂದ ಮನೆಗೆ ಕಳುಹಿಸಿ.
ಈ ರೀತಿ ನ್ಯೂಜಿಲ್ಯಾಂಡ್ ನವರು ಕಪ್ ವಿನ್ ಆದರೂ ನಮಗೆ ಅಂತಹ ಬೇಜಾರು ಏನಿಲ್ಲ,ಹಾಗಾಗಿ Southampton ಊರಿನ ಹತ್ತು ಸಮಸ್ತರು ಹಾಗೂ ಪಂದ್ಯದ ಆಯೋಜಕರು ಇದರ ಬಗ್ಗೆ ಮನಸ್ಸು ಮಾಡಿ.ಏಕೆಂದರೆ ಐಸಿಸಿ ಎನ್ನುವುದು ಒಂದು ಜೀವಂತವಾಗಿದೆ ಎಂದು ಫೀಲ್ ಆಗ್ತವೇ ಇಲ್ಲ ನಮಗೆ.ಕೇವಲ ಚಹಾ ಕುಡಿಸಿ ಆಂಗ್ಲನಾಡಿನ ಮಳೆ ತೋರಿಸಲು ಇತ್ತಂಡಗಳನ್ನು ಕರೆಸಿಕೊಂಡಿದ್ದಾರೆ ಎಂದು ನಮಗೆ ಮೇಲ್ನೋಟಕ್ಕೆ ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ.ಬಹಳಷ್ಟು ಯೋಚಿಸಿ ಸರಿಯಾದ ಸಂದರ್ಭದಲ್ಲಿಯೇ ಪಂದ್ಯವನ್ನು ಆಯೋಜನೆ ಮಾಡಿರುವ ಅವರು ಈ ಮಳೆಗೆ ಕನಿಷ್ಟ ಪಕ್ಷ " ಕೆಸರ್ಡ್ ಒಂಜಿ ದಿನ(ಕೆಸರುಗದ್ದೆಯಲ್ಲಿ ಒಂದು ದಿನ)" ದಂತಹ ಗ್ರಾಮೀಣ ಕ್ರೀಡೆಯನ್ನು ಸಹ ಆಯೋಜಿಸುವ ಯಾವುದೇ ಭರವಸೆ ಕೂಡ ನಮ್ಮಲ್ಲಿ ಉಳಿದಿಲ್ಲ.ಸತ್ಯ ಆ ಹೋಪ್ ಸ ಇಲ್ಲ..
ಆದರೂ ಅದೆಲ್ಲಾ ಏನೇ ಇರಲಿ.. ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಗ್ರೌಂಡಿನಲ್ಲಿ ಆಟಗಾರರಿಗೆ ಹಾಗೂ ಅಂಪೈರ್ ಗೆ ಒಡಾಡಲೆಂದು ತರಿಸಿಕೊಂಡ ದೊಡ್ಡ ದೊಡ್ಡ ಗಾತ್ರದ ಕೊಡೆಗಳು ಮಾತ್ರ ಬಹಳ ಚಂದ ಹಾಗೂ ಬಲಿಷ್ಟವಾಗಿತ್ತು.ಅದನ್ನೊಂದನ್ನು ಮಾತ್ರ ಮೊದಲೇ ಬಾರೀ ಆಲೋಚನೆ ಮಾಡಿ ತರಿಸಿಕೊಂಡು, ಮಳೆಯಿಂದ ಆಟಗಾರರು,ಅಂಪೈರ್ ಗಳು ಒದ್ದೆಯಾಗದಂತೆ ತಡೆದು ಸೂಕ್ತ ರಕ್ಷಣೆ ಒದಗಿಸಿದ ಹಾಗೂ ಈ ವಿಷಯದಲ್ಲಿ ಹೆಚ್ಚಿನ ಕಾಳಜಿ ತೋರಿದ ಐಸಿಸಿಯನ್ನು,ಈ ಒಂದು ವಿಷಯದಲ್ಲಿ ಮಾತ್ರ ನಿಜವಾಗಿಯೂ ನಾವೆಲ್ಲರೂ ಅಭಿನಂದಿಸಲೇಬೇಕು... ಗ್ರೇಟ್ ಐಸಿಸಿ, ಹ್ಯಾಟ್ಸ್ ಆಫ್ ಯು🤘🤘
ಇಂತೀ..
ತೀವ್ರವಾಗಿ ನೊಂದು ಬೆಂದಿರುವ ಟೆಸ್ಟ್ ಕ್ರಿಕೆಟ್ ಅಭಿಮಾನಿ,
Ab Pacchu
#World_Test_championship_final 2021
INDIA Vs New Zealand
Southampton_UK
Day 1 - 18/6/2021
Comments
Post a Comment