ಬಿಸಿ ಬಿಸಿ ಕುಕ್ಕು ಸಾರು..
ಕುಕ್ಕು ಸಾರಿನೊಂದಿಗೆ ಒಂದೊಳ್ಳೆಯ ಊಟ ಮುಗಿಸಿ ಎದ್ದೇಳುವ ಸುಖದಲ್ಲಿ,ಗೊರಟೆ ಚೀಪಿ ಉಣ್ಣುವ ಆ ಸುಖವೇ ಒಂಥರಾ ಬೇರೆಯದ್ದೇ ಸುಖ...
ಈಗ ಬಹಳ ಸಿಂಪಲ್ ಆಗಿ ಕುಕ್ಕು ಸಾರು(ಕಾಟು ಮಾವಿನ ಸಾರು)ಮಾಡುವುದು ಹೇಗೆ ಎಂದು ನೋಡೋಣ...
ಒಂದು ಏಳು ಕಾಟು ಮಾವಿನ ಹಣ್ಣುಗಳನ್ನು ಸಿಪ್ಪೆ ಸುಲಿದು ಚೆನ್ನಾಗಿ ಕಿವುಚಿ..ಒಂದು ಪಾತ್ರೆಗೆ ಹಾಕಿ,ಅದಕ್ಕೆ ಬೇಕಾದಷ್ಟು ನೀರು,ಉಪ್ಪು,ಬೆಲ್ಲ ಹಾಕಿ ಬೇಯಲು ಇಡಿ. ಬೇಕಾದರೆ ಮಾವಿನ ಸಿಪ್ಪೆ ಕೂಡ ಹಾಕಬಹುದು.
ಈಗ ಮಸಾಲೆ ಪದಾರ್ಥಗಳನ್ನು ಡ್ರೈ ಆಗಿ ಹುರಿದುಕೊಳ್ಳಿ. ಒಣ ಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆ,ಸಾಸಿವೆ,ಉದ್ದೀನ ಬೇಳೆಗಳನ್ನು ಹುರಿಯಿರಿ. ನಂತರ ಇದನ್ನು ಮಿಕ್ಸರ್ ಜಾರ್ ಗೆ ಹಾಕಿ, ಅರಶಿನದ ಪೌಡರ್ ಹಾಗೂ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಕೂಡ ಹಾಕಿ ಚೆನ್ನಾಗಿ ಪೇಸ್ಟ್ ಆಗುವವರೆಗೆ ನುಣ್ಣಗೆ ಕಡೆಯಿರಿ.
ಮಾವು ಜಾಸ್ತಿ ಬೇಯುವುದು ಬೇಡ.ಇಲ್ಲದಿದ್ದರೆ ತುಂಬಾ ಹುಳಿಯಾಗುತ್ತದೆ.ಮಾವು ಬೆಂದ ನಂತರ ಕಡೆದ ಮಸಾಲೆಯನ್ನು ಹಾಕಿ. ಕುಕ್ಕು ಸಾರು ಜಾಸ್ತಿ ದಪ್ಪ ಬೇಡ. ಹಾಗಾಗಿ ಎಷ್ಟು ಹದ ಬೇಕೋ ಅಷ್ಟು ನೀರು ಹಾಕಿ. ನಂತರ ಉಪ್ಪು ಕಮ್ಮಿ ಇದ್ದರೆ ಉಪ್ಪು ಹಾಕಿ.
ಕೊನೆಯಲ್ಲಿ ಒಗ್ಗರಣೆ ಹಾಕಿ. ತೆಂಗಿನೆಣ್ಣೆಯಲ್ಲಿ ಸಾಸಿವೆ,ಉದ್ದಿನ ಬೇಳೆ, ಒಣ ಮೆಣಸು, ಬೆಳ್ಳುಳ್ಳಿ, ನೀರುಳ್ಳಿ, ಬೇವುರೆಯ ಒಗ್ಗರಣೆ ತುಂಬಾ ಚೆನ್ನಾಗಿರುತ್ತದೆ.ಇಷ್ಟು ಮಾಡಿದರೆ ಕುಕ್ಕು ಸಾರು ರೆಡಿ.ಕುಚಲಕ್ಕಿ ಅನ್ನಕ್ಕೆ ಬಿಸಿ ಬಿಸಿ ಕುಕ್ಕು ಸಾರು ಬಹಳ ರುಚಿಯಾಗಿರುತ್ತದೆ.
#ಮಾ_ಅಂದರೆ_ಮಾವು
Ab Pacchu
Moodubidire
Comments
Post a Comment