ಸಿಹಿ ಹುಳಿ ನೆನಪಿನ ಮಾವು..
ಹಣ್ಣು ಉದುರಿಸುವ ಮರಗಳು ನನಗೆ ತುಂಬಾ ಇಷ್ಟ. ಅದರಲ್ಲೂ ಕಾಡು ಗುಡ್ಡೆಯ ಕಾಟು ಮಾವಿನ ಮರಗಳು ನನ್ನ ಪರಮ ಮಿತ್ರ.ಒಂದೊಳ್ಳೆಯ ಗಾಳಿಗೆ ಮರವೊಂದು ಮಾವಿನ ತೊಟ್ಟಿನೊಂದಿಗೆ ಹಾಗೇ ತನ್ನ ಕೊನೆಯ ಸಂಬಂಧ ಕಡಿದುಕೊಂಡು ಇಷ್ಟೊಂದು ಹಣ್ಣುಗಳನ್ನು ಉದುರಿಸಿಕೊಂಡು ಬಿಟ್ಟಿತ್ತು.ಇಷ್ಟನ್ನೂ ಕಂಡಾಗ ನನ್ನೊಳಗೆ ಗರಿಗೆದುರುವ ಮಾವಿನ ಖಾದ್ಯದ ಬಯಕೆಗಳು ಒಂದಾ ಎರಡಾ.ಎಲ್ಲವನ್ನೂ ಅಮ್ಮನದ್ದೇ ಫೇವರೆಟ್ ಗಳು.ಈಗ ಅವು ಎಂದೆಂದಿಗೂ ನನ್ನದೂ ಕೂಡ ಆಗಿದೆ.ಕಾಟು ಮಾವಿನ ಗೊರಟೆ ಚೀಪಿ ಉಂಡ ಬೆರಳುಗಳಲ್ಲಿ ಬಾಲ್ಯದ ನೆನಪುಗಳು ಎಂದಿಗೂ ಒಂದಿಷ್ಟು ಹುಳಿಯ ಜೊತೆಗೆ ದುಪ್ಪಟ್ಟು ಸಿಹಿ..ಆ ನೆನಪು,ಈ ಮಾವು ಇನ್ನಷ್ಟು ಬೇಕು ಎಂದೇ ಅನ್ನಿಸುತ್ತದೆಯೇ ಹೊರತು ಸಾಕು ಎಂದು ಎಂದಿಗೂ ಅನಿಸುವುದೇ ಇಲ್ಲ..
#ಮಾ_ಅಂದರೆ_ಮಾವು🧡💛
ಪಚ್ಚುಪಟಗಳು
ab


Comments
Post a Comment