ರೂಮಿನಲ್ಲಿ ಸಿಸ್ತು ಮುಖ್ಯ
ಅದೊಂದು ಕಲಾಬು ಹೌಸಿನ ರೂಮು.ಅದರಲ್ಲಿ ಬೆಸ ಸಂಖ್ಯೆಯಲ್ಲಿ ಹುಡುಗರು,ಸಮ ಸಂಖ್ಯೆಯ ಪ್ರಮಾಣದಷ್ಟು ಯುವತಿಯರು.ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹುಡುಗಿಯರಿಗಿಂತ ಹುಡುಗರೇ ಹೆಚ್ಚಿನ ಪ್ರಮಾಣದಲ್ಲಿ ಇದ್ದರು.ಗಂಟೆ ರಾತ್ರಿ ಹನ್ನೆರಡು ಬಾರಿಸಿ ನಿಧಾನಕ್ಕೆ ಅದರಷ್ಟಕ್ಕೆ ತೆವಳಿಕೊಂಡು ಸಾಗುತ್ತಿತ್ತು.
ಮತ್ತೊಮ್ಮೆ ಒಳಗೆ ನುಗ್ಗದೇ ಬೇಲಿ ಹಕ್ಕಿಯಂತೆ ಅಲ್ಲೇ ಹೊರಗಿನ ಆವರಣದಲ್ಲಿಯೇ ಕುಳಿತುಕೊಂಡು ಎಲ್ಲವನ್ನೂ ಕೇಳುವುದರಲ್ಲಿಯೇ ಮಗ್ನನಾದೆ.ಅಲ್ಲಿಯ ಮಾತುಕತೆ ಎಲ್ಲಾ ಹೀಗೆಯೇ,ಟೈಂ ಪಾಸಿದ್ದೇ ಇತ್ತು.ಮನೆಯಲ್ಲಿ ಬೆಳಿಗ್ಗೆ ತಿಂಡಿಗೆ ಎಂತ,ದೋಸೆಯಾ? ಕಡುಬಾ..? ದೋಸೆಗೆ ಸಾಂಬಾರಾ ಚಟ್ನಿಯಾ...? ನೀನು ಎಷ್ಟು ದೋಸೆ ತಿಂದೆ..? ನಿಮ್ಮ ಮನೆಯಲ್ಲಿ ಪೂರಿ ಮಾಡುವುದಿಲ್ಲವಾ..? ಮಸಾಲೆ ದೋಸೆ ಮಾಡುವುದಿಲ್ಲವಾ.ಹೀಗೆ ಇತ್ಯಾದಿ,ಇತ್ಯಾದಿ ತಿಂಡಿ ಮತ್ತು "ತೀರ್ಥ" ದ ಕಥೆಗಳು.
ಅಷ್ಟರಲ್ಲಿ ಯಾರೋ ಒಬ್ಬ ದುಷ್ಟನ ಆಗಮನವಾಯಿತು ಆ ರೂಮಿಗೆ.ಅವನು ಸಭ್ಯತೆಯ ಎಲ್ಲಾ ಎಲ್ಲೆಯನ್ನು ಮೀರಿ ಅಸಭ್ಯ ವರ್ತನೆಯನ್ನು ಅತೀ ಹೆಚ್ಚಾಗಿಯೇ ಪ್ರದರ್ಶಿಸಿದ.ನಿಜವಾಗಿಯೂ ಅದು ಅಸಭ್ಯ ವರ್ತನೆಯೇ ಆಗಿತ್ತು.ಹೆಚ್ಚಾಗಿ ಎಲ್ಲಾ ಟೈಂ ಪಾಸ್ ರೂಮಿನಲ್ಲಿ ಅರ್ಧ ಗಂಟೆಗೊಮ್ಮೆ ಯಾರಾದರೊಬ್ಬರು ಇಂತಹ ವಿಶೇಷ ತಳಿಗಳು ಬಲಗಾಲಿಟ್ಟು ಒಳಗೆ ಬಂದು ತಮ್ಮದೊಂದು ಜಳಕ್ ತೋರಿಸಿ ಕಿಡಿಗೇಡಿತನವನ್ನು ಬೇಕೆಂದೇ ಪ್ರದರ್ಶನ ಮಾಡುತ್ತಲೇ ಇರುತ್ತಾರೆ.ಅವರಿಗೆ ಅದೇ ಕೆಲಸ.
ಆವಾಗ ರೂಮಿನ ಖಡಕ್ ಹುಡುಗ ಒಬ್ಬ Rash ಆಗಿ," ಏರ್ಂಬೆ ಅವ್ವ್ ..😡ಸುರೇಸಾ.. ನಿನ್ನ ದೋಸ್ತಿಯಾ ಆಯೆ..? ಯಾನ್ ಸುರುಕ್ಕೆ ಪಂತೆ ನಿಕ್ಲೆಗ್.. ಎಂಕ್ ರೂಮ್ ಡ್ ಸಿಸ್ತು ಮುಖ್ಯ ಪಂದ್,ಗಲ್ಸ್ ಗ್ ಪುರ ರೆಸ್ಪೆಕ್ಟ್ ಕೊರ್ರೆ ಗೊತ್ತಿಜ್ಜಿ ಆಯಗ್ ಮಗ್ಗಗ್,ಆಯನ್ ಯಾನ್ ದೆಪ್ಪುವೆನೇ..😡(ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ ಅವನಿಗೆ ನಾನು ತಕ್ಕ ಶಾಸ್ತ್ರಿ ಮಾಡುವೆನು)ಎಂದು ಆಕ್ರೋಶ ವ್ಯಕ್ತಪಡಿಸಿದ.ನಂತರ ಮತ್ತೊಬ್ಬ ಸಜ್ಜನ " ಓ ಬೋರಿ ರಮೇಸ.. ಗುರ್ತ ಇಪ್ಪಂದಿನಕ್ಲೆನ್ ದಾಯೆಗ್ Add ಮಲ್ತದ್ ಸೈಪ ಮಾರ್ರೆ.. ಮಾರಿಲೆನ್ ಪೂರ ಕಡ್ಪೊಡು😡(ಅಪರಿಚಿತರೆಲ್ಲೆರನ್ನು ಈಗಲೇ ಚಿವುಟಿ ಹಾಕುವೆನು)ಎಂದು ಮಾತಿನಲ್ಲಿಯೇ ಹರಿತವಾದ ಮಚ್ಚನ್ನು ಒಟ್ರಾಸಿ ಜಳಪಿಸಿಕೊಂಡು ಆರ್ಭಟಿಸಿದ.
ನಂತರ ರಮೇಸ ಸುರೇಸ ಎಲ್ಲವನ್ನೂ ಕ್ಷಣ ಮಾತ್ರದಲ್ಲಿಯೇ ಮರೆತು ಹುಡುಗಿಯರ Instagram Id ಗಳನ್ನು ಕಲೆಕ್ಟ್ ಮಾಡುವುದರಲ್ಲಿ ತಲ್ಲೀನರಾದರು.ನಾನು "ಮಾತೆರೆನ್ಲ ಕಡ್ಪೊಡು(ರುಂಡ ಮುಂಡಗಳನ್ನು ಚೆಂಡಾಡಬೇಕು)" ಎಂಬ ಆ ಒಂದು ಶಬ್ಧ ಕೇಳಿದೊಡನೆ.. ಅಯ್ಯೋ ಜೀವ ಉಳಿದರೆ ಸಾಕಪ್ಪ ಇವರು ಬಿಟ್ಟರೆ ನನ್ನನ್ನು ಸ ಕಡ್ಪಬಹುದು ಎಂದು.. ಪ್ರಾಣ ಭಯದಿಂದ ಜೀವ ಉಳಿಸಿಕೊಂಡು ಅಲ್ಲಿಂದ ಹಾಗೇ ಹಾರಿ ಮತ್ತೊಂದು ಪೆಟ್ಟು ಲಡಾಯಿ ಅತೀ ಕಡಿಮೆ ಇರುವ ರೂಮಿನ ಬೇಲಿಯಲ್ಲಿ ಹೋಗಿ ಕುಳಿತುಕೊಂಡೆ.ಅಲ್ಲಿಯ ಜನರು ಬಹಳ ಮುಗ್ದರು. ಶಿಸ್ತಿನವರು ಕೂಡ. ಅವರು ಒಬ್ಬರ ನಂತರ ಒಬ್ಬರು ಹಾಡು ಹಾಡುತ್ತಿದ್ದರು.
ಒಬ್ಬ ಹುಡುಗ " Jhalak dikhla jaa,Jhalak dikhla jaa.. Ek baar aaja aaja aaja aaja aa ja " ಅಂತ ಸುಶ್ರಾವ್ಯವಾಗಿ ಹಿಮೇಶ್ ರೆಷಮಿಯಾ ರೇಂಜಿಗೆ ಬಹಳ ಚೆನ್ನಾಗಿ ಎತ್ತರದ ಪಿಚ್ ನಲ್ಲಿ ಹಾಡುತ್ತಿದ್ದ.ಅವನು ಎಷ್ಟೇ ಜೋರಾಗಿ "ಏಕ್ ಬಾರ್ ಆಜ..ಏಕ್ ಬಾರ್ ಆಜ " ಅಂತ ಎಷ್ಟೇ ಬಾರಿ ಕರೆದರೂ ಪುಣ್ಯಕ್ಕೆ ಯಾವುದೇ ದುಷ್ಟ ಬಾಲಕ ಆ ರೂಮಿಗೆ ಬಂದು ಆ ರೂಮನ್ನು ಕಲಕಂಬುಲ(ರಣರಂಗ) ಮಾಡಲಿಲ್ಲ.ಹಾಡು ಮುಂದುವರಿದಿತ್ತು.." Aa.. Ante Amalapuram,Ah Ante Ahapuram,E ante Ecchapuram,Eela kotti lagutaru andhra janam..."
#Club_house_ಮ್ಯಾಟರುಗಳು
#ವಿಷಯ_ಎಂತ_ಗೊತ್ತುಂಟಾ....
Ab Pacchu
Moodubidire
Comments
Post a Comment