ಅಮೋಘ ಪ್ರತಿಭೆ




ಗೆಲ್ಲುವ ಅವಕಾಶಗಳು ಅತಿಯಾಗಿ ಇದ್ದರೂ ಸಹ ತಂಡವನ್ನು ದಿನ ನಿತ್ಯವೂ ಸ್ವತಃ ನಾನೇ ನಿರಂತರವಾಗಿ ಸೋಲಿನ ದವಡೆಗೆ ತಳ್ಳುತ್ತಿರುವ ಪರಿಣಾಮ,ತಂಡದಲ್ಲಿ ಅಲ್ಲಲ್ಲಿ ದಂಗೆ ಏಳುವ  ಲಕ್ಷ್ಮಣಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ ಹಾಗೂ ತೆರೆಮರೆಯಲ್ಲಿ " ದಾಯೆಗ್ ಮರ್ರೆ ಈ ಜನನ್ ಒಂಜಿ ಎಂಕ್ಲೆನ ಟೀಮ್ ಗ್ ಲೆತ್ತ್ ದ್ ಸೈತ ಓ ಮಾರಿ ಕ್ಯಾಪ್ಟನ್😡(ಈ ಅಮೋಘ ಪ್ರತಿಭೆ ಒಂದು ನಿಜವಾಗಿಯೂ ನಮ್ಮ ತಂಡಕ್ಕೆ  ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ)" ಎಂಬತಹ ಮಾತುಗಳು ಕೂಡ ಅಸ್ಪಷ್ಟವಾಗಿ ಕೇಳಿಬರುತ್ತಿದೆ.


ಒಟ್ಟಿನಲ್ಲಿ ನಾನಿರುವ ತಂಡದಲ್ಲಿ ಆಕ್ರೋಶದ ವಾತಾವರಣವಿದ್ದು ಯಾವುದೇ ಕ್ಷಣದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಾಧಾನ ಹೊಗೆ ಜ್ವಾಲಾಮುಖಿಯಾಗಿ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ... ಚಿಲ್ಟಾರಿ ಪಿಲ್ಟಾರಿ ಬಾಲಕರು ಕೂಡ " ಇಂಚಿನ ಸಾವ್ ಯೇ ಇರೆನ😡(ಅಣ್ಣಾ.. ಪ್ಲೀಸ್ ಅಣ್ಣಾ,ಈ ಮ್ಯಾಚ್ ಒಂದಾದರೂ ವಿನ್ ಮಾಡಿಸಣ್ಣ)ಅಂತ ನನ್ನ ವಿರುದ್ಧ ರೋಷಗೊಂಡಿರುವುದನ್ನು ನೋಡಿದರೆ,ಬಾಲ್ ಇಲ್ಲವೇ ಪಿಚ್ ನಲ್ಲಿ ನಿಜವಾಗಿಯೂ ಏನೋ ದೋಷವಿದೆ🤷‍♂️

🙄🤔🏃🏻‍♂️🏃🏻‍♂️



#ವಿಷಯ_ಎಂತ_ಗೊತ್ತುಂಟಾ 

Ab Pacchu

Moodubidire 

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ