ಟೀಮ್ ಇಂಡಿಯಾದ B ಟೀಮ್




ಟೀಮ್ ಇಂಡಿಯಾದ "B Team " ಎಂದೇ ಕರೆಸಿಕೊಳ್ಳುತ್ತಿರುವ ರಾಹುಲ್ ದ್ರಾವಿಡ್ ಕೋಚಿಂಗ್ ಇರುವ, ಶಿಖರ್ ಧವನ್ ನಾಯಕತ್ವದ ನಮ್ಮ ಭಾರತದ ತಂಡ  ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಬಹಳ ಸುಲಭದಲ್ಲಿ ಗೆದ್ದುಕೊಂಡಿದೆ. 


ಪ್ರಥ್ವಿ ಶಾ ಬಾಲ್ ಇರುವುದೇ ಚಚ್ಚಿ ಬಿಸಾಕಲು ಎಂಬ ತನ್ನ ನೆಚ್ಚಿನ ಥಿಯರಿಯಿಂದ ಒಂದಿಚೂ ಹಿಂದೇ ಸರಿದೇ ಇಲ್ಲ,ಕೆಟ್ಟ ಎಸೆತ ಬಿಡಿ ಒಳ್ಳೊಳ್ಳೆಯ ಬಾಲ್ ಗೆ ಕೂಡ ಆತ ಸರಾಗವಾಗಿ ಬೌಂಡರಿ ಮೇಲೆ ಬೌಂಡರಿ ಬಾರಿಸುತ್ತಲೇ ಇದ್ದ, ಅದೂ ಕೂಡ ಹೆಚ್ಚಿನ ಎಲ್ಲವೂ Copy book Shots ಗಳು.ಅವನು ಆಡುವ ರಭಸ ನೋಡಿ ಸ್ವತಃ ಶ್ರೀಲಂಕಾ ಕೋಚ್ Mickey Arthur ತಲೆ ಚಚ್ಚಿಕೊಳ್ಳುತ್ತಿದ್ದ ದೃಶ್ಯವಂತು ನಿಜವಾಗಿಯೂ ಬಹಳ ಮಜವಾಗಿತ್ತು.


ಪ್ರಥ್ವಿ ಶಾ ಎದುರಿಸುತ್ತಿದ್ದ ಪ್ರತೀ ಎಸೆತದಲ್ಲಿಯೂ ಸಹ ಈಗ ಯಾವ ಕಡೆಗೆ ಇವ ಬೌಂಡರಿ ಹೊಡೆಯಬಹುದು ಎಂಬ ಕುತೂಹಲ,ನಿರೀಕ್ಷೆಗಳು ನೋಡುವ ನಮಗೆ ಮಾತ್ರವಲ್ಲ ಸ್ವತಃ ಶ್ರೀಲಂಕಾದ ಫೀಲ್ಡರ್ಸ್ ಗಳಿಗೆ ಕೂಡ ಅಧಿಕವಾಗಿಯೇ ಇತ್ತು  ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ಬಿಡಿ.ಆ ಹುಡುಗ 100  ಹೊಡೆಯಬೇಕಿತ್ತು.ಪರವಾಗಿಲ್ಲ ಮುಂದೆ ಬೇಕಾದಷ್ಟು ನೂರುಗಳನ್ನು ತ್ವರಿತವಾಗಿ ಆತ ಹೊಡೆಯುತ್ತಾನೆ ಎಂದು ಈಗಲೇ ಅನ್ನಿಸುತ್ತಿದೆ.ಯಾಕೋ ಈ ಹುಡುಗ ವಿರೇಂದ್ರ ಸೆಹ್ವಾಗ್ ನ ಓಪನಿಂಗ್ ಬ್ಯಾಟಿಂಗ್ ಅನ್ನೇ ಪ್ರತೀ ಸಲ ನೆನಪಿಸುತ್ತಾನೆ ಅನ್ನುವುದು ಕೂಡ ಸುಳ್ಳಲ್ಲ.


ಇವತ್ತು ಒಂದು ಸಮಯದಲ್ಲಿ 9 ಓವರ್ ಗೆ 90 ರನ್ ವರೆಗೂ ನಮ್ಮವರು ಹೊಡೆದಿದ್ದರು.ಈ ರೀತಿಯ ನಮ್ಮವರ ಓಪನಿಂಗ್ ಬ್ಯಾಟಿಂಗ್ ಅನ್ನು ಏಕದಿನ ಪಂದ್ಯದಲ್ಲಿ ನೋಡದೇ ಬಹಳ ದಿನಗಳೇ ಆಗಿತ್ತು.ನನ್ನಿಷ್ಟದ ರೋಹಿತ್ ಶರ್ಮ ಬೇಕಾದಷ್ಟು ಡ್ಯಾಡಿ ಹಂಡ್ರೆಡ್ ಗಳನ್ನು ಬಹಳ ಸುಲಭವಾಗಿ ಹೊಡೆಯಬಲ್ಲವನಾದರೂ ಆತ ಇನಿಶಿಯಲಿ ಮಾತ್ರ ಬಾಲ್ ಟು ಬಾಲ್ ರನ್ ಹೊಡೆಯುತ್ತಾನೆ.ಏಕದಿನದಲ್ಲಿ 10 ಓವರ್ ಗಳಲ್ಲಿ 100 ರನ್ ಅದು ಯಾವತ್ತಿದ್ದರೂ ಸೆಹ್ವಾಗ್ ಕಾಲದ ಕಥೆಗಳು. ಪ್ರಥ್ವಿ ಶಾ ಅಂತಹ ನೆನಪು, ಕನಸುಗಳನ್ನು ತಕ್ಕ ಮಟ್ಟಿಗೆ ಮೆಲ್ಲ ಮೆಲ್ಲನೆ ಗರಿಗೆದರಿಸುತ್ತಾ ಹೋಗುತ್ತಿದ್ದಾನೆ. 


ಇಶಾನ್ ಕಿಶನ್ ತನ್ನ ಪಾದಾರ್ಪಣೆ ಪಂದ್ಯದ ಪ್ರಥಮ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿ ರನ್ ಪೇರಿಸುತ್ತಾ ಹೋಗಿ ಮೊದಲ 50 ಕೂಡ ಹೊಡೆದು ಖುಷಿ ಪಟ್ಟು ಬಿಟ್ಟ,ಶಿಖರ್ ಧವನ್ ನ ತಾಳ್ಮೆಯ ಅರ್ಧಶತಕದಲ್ಲಿ ನಾಯಕತ್ವದ ಜವಾಬ್ದಾರಿ ಕೂಡ  ಸ್ಪಷ್ಟವಾಗಿ ಗೋಚರಿಸುತ್ತಿತ್ತು


ಒಟ್ಟಿನಲ್ಲಿ ಭಾರತದ B ತಂಡ ಶ್ರೀಲಂಕಾದ A ತಂಡವನ್ನು ಸೋಲಿಸಿ ಪ್ರಥಮ ಏಕದಿನ ಪಂದ್ಯ ಗೆದ್ದುಕೊಂಡಿದೆ,ಜೊತೆಗೆ ರಾಹುಲ್ ದ್ರಾವಿಡ್ ಕೂಡ ಅಷ್ಟೇ ಗೆದ್ದಿದ್ದಾರೆ..ಸರಣಿ ಕೂಡ ಗೆದ್ದರೆ ಭಾರತದ ಬೆಂಚ್ ಸ್ಟ್ರೆಂತ್ ಗೆ ವಿಶ್ವ ಕ್ರಿಕೆಟ್ ಹಾಗೇ ಉಘೇ ಉಘೇ ಅನ್ನಲಿದೆ...


ಹಾಗಾಗಲಿ💙💙🤘


#Congratulations_Team_India 💙🎉🎉


Ind Vs Srilanka 2021 

1st ODI Colombo

ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..