ಕಾಫಿಗೆ ಸಕ್ಕರೆ ಕಡಿಮೆ ಆಗಿದೆ..
ಮೋಡರೇಟರ್ - ಓಕೆ..ಈಗ ನಾವು ನಮ್ಮ ಗಣ್ಯವ್ಯಕ್ತಿ X ಅವರೊಂದಿಗೆ ಮಾತನಾಡಲು ಕೆಳಗೆ ಆಡಿಯನ್ಸ್ ಬಾಕ್ಸ್ ನಲ್ಲಿರುವವರಿಗೆ ಕೂಡ ಅವಕಾಶ ನೀಡುತ್ತಿದ್ದೇವೆ.ಆಸಕ್ತ ಕೇಳುಗರು ದಯವಿಟ್ಟು ತಮ್ಮ ಬಲಗೈಯನ್ನು ಮೇಲೆ ಎತ್ತಿ ಬೇಗನೇ ಮೇಲೆ ಬಂದು,ನಿಮ್ಮ ಪ್ರಶ್ನೆಗಳನ್ನು ಇಂದಿನ ನಮ್ಮ ಗಣ್ಯವ್ಯಕ್ತಿ X ಅವರಲ್ಲಿ ಕೇಳಬಹುದು.
ಕೇಳುಗ 1 - ನಮಸ್ತೆ X ಸರ್.. ನಾನು ನಿಮ್ಮ ಬಹಳ ದೊಡ್ಡ ಅಭಿಮಾನಿ ಸರ್.
ಗಣ್ಯವ್ಯಕ್ತಿ - ಹೌದೇ.. ಬಹಳ ಸಂತೋಷ.. ಬಹಳ ಸಂತೋಷ..
ಕೇಳುಗ 1 - ನಿಮ್ಮ ಬಗ್ಗೆ ಬಹಳ ಕೇಳಿದ್ದೇನೆ ಸರ್.. ನಿಮ್ಮ ಜೊತೆ ನೇರವಾಗಿ ಮಾತಾಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ.
ಗಣ್ಯ ವ್ಯಕ್ತಿ - ಹಹ್ಹಾ.. ಬಹಳ ಸಂತೋಷ.. ಬಹಳ ಸಂತೋಷ...
ಕೇಳುಗ 1- ಇಂತಹ ಒಂದು ರೂಮ್ ಕ್ರಿಯೆಟ್ ಮಾಡಿದ ಮಿಸ್ಟರ್ Y ಅವರಿಗೆ ವಿಶೇಷ ಧನ್ಯವಾದಗಳು.
ಮೋಡರೇಟರ್ - ದಯವಿಟ್ಟು ನೇರವಾಗಿ ಪ್ರಶ್ನೆಗಳನ್ನು ಕೇಳಿ ಸರ್.
ಕೇಳುಗ 1 - ಪ್ರಶ್ನೆ ಎಲ್ಲಾ ಏನಿಲ್ಲ ಸಾರ್.. ನಾನು ಸುಮ್ಮನೆ X ಸರ್ ಅವರೊಂದಿಗೆ ಮಾತಾಡುವ ಅಂತ ಬಂದದ್ದು... ಆಯಿತು ಸಾರ್.. ನಂದು ಇನ್ನು ಏನಿಲ್ಲ.. ನೀವು ಮುಂದುವರಿಸಬಹುದು.
ಮೋಡರೇಟರ್ - ಸಮಯದ ಅಭಾವ ಇರುವುದರಿಂದ ದಯವಿಟ್ಟು ಮುಂದಿನ ಎಲ್ಲರೂ ನೇರವಾಗಿ ನಿಮ್ಮ ಪ್ರಶ್ನೆಗಳನ್ನಷ್ಟೇ ಕೇಳಿ ಹಾಗೂ ಇತರರಿಗೂ ಹೆಚ್ಚಿನ ಅವಕಾಶ ಸಿಗುವಂತೆ ನೋಡಿಕೊಳ್ಳಿ. ಓಕೆ.. ಈಗ ನಮ್ಮೊಂದಿಗೆ ಕೇಳುಗ 2 ಇದ್ದಾರೆ.ಹೇಳಿ ಸರ್..ನಮ್ಮ ಗಣ್ಯವ್ಯಕ್ತಿ X ಅವರಲ್ಲಿ ಏನಾದರೂ ಪ್ರಶ್ನೆ ಕೇಳಲು ಇದ್ದರೆ ನೀವು ಈ ಕೂಡಲೇ ಕೇಳಬಹುದು.
ಕೇಳುಗ 2 - X ಸರ್ ನಮಸ್ತೆ.
ಗಣ್ಯವ್ಯಕ್ತಿ - ನಮಸ್ತೆ.. ನಮಸ್ತೆ.. ಹೇಳಿ ಇವರೇ..
ಕೇಳುಗ 2 - ಇಲ್ಲಿ ಇರುವ ಎಲ್ಲರಿಗೂ ಕೂಡ ನನ್ನ ನಮಸ್ತೆ.
ಮೋಡರೇಟರ್ - ಕೇಳುಗ 2 ಸರ್.. ದಯವಿಟ್ಟು ನಿಮ್ಮ ಪ್ರಶ್ನೆ ಕೇಳಿ.
ಕೇಳುಗ 2 - ಇಂತಹ ಒಂದು ರೂಮಿನಲ್ಲಿ ನನಗೆ ಮಾತಾಡಲು ಅವಕಾಶ ಕೊಟ್ಟದ್ದಕ್ಕಾಗಿ ನಾನು ಮೊಡರೇಟರ್ ಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ. .
ಮೋಡರೇಟರ್ - 😡😡 ಸರ್.. ಪ್ರಶ್ನೆ ಕೇಳಿ.
ಕೇಳುಗ 2 -.. ¡^>¿€¢¢©!!
ಮೋಡರೇಟರ್ - ಸರ್.. ಕೇಳ್ತಾ ಇಲ್ಲ
ಗಣ್ಯವ್ಯಕ್ತಿ - ಬಹುಶಃ ಅವರ ನೆಟ್‌ವರ್ಕ್ ಅಲ್ಲಿ ಪ್ರಾಬ್ಲಂ ಇರ್ಬೇಕು ಅಂತ ಕಾಣುತ್ತೆ.... ಹಾಗಾಗಿ
ಮೋಡರೇಟರ್ - ಓಕೆ.. ನಾವು ಮುಂದೆ ಹೋಗೋಣ.. ಈಗ ನಮ್ಮ ಜೊತೆ ಈಗ ಕೇಳುಗ 3 ಇದ್ದಾರೆ. ದಯವಿಟ್ಟು ನೇರವಾಗಿ ನಿಮ್ಮ ಪ್ರಶ್ನೆ ಕೇಳಿ ಸರ್.
ಕೇಳುಗ 3 - ಹಹ್ಹಾ... ನಾನು ಮತ್ತು X ಬಹಳ ಒಳ್ಳೆಯ ಗೆಳೆಯರು.. ಅದು ನಿಮಗೆಲ್ಲಾ ಗೊತ್ತಿಲ್ಲ ಅಷ್ಟೇ.. ಹಹ್ಹಾ..
ಮೋಡರೇಟರ್ - 🙄🙄
ಗಣ್ಯವ್ಯಕ್ತಿ - ಹೌದು ಹೌದು...ನಾವಿಬ್ಬರು ಗೆಳೆಯರು..
ಕೇಳುಗ 3 - ನಾನು ಮತ್ತು X ಶಾಲೆಗೆ ಎಲ್ಲಾ ಒಟ್ಟಿಗೆ ಹೋಗಿದ್ದು... ನಿಮಗೆ ಗೊತ್ತಿಲ್ಲ ಅಷ್ಟೇ.. ನಿಮಗೆ ಮಾತ್ರ ಅಲ್ಲ ನಮ್ಮ ಶಾಲೆಯ ಗೆಳೆಯರಿಗೆ ಬಿಟ್ಟರೆ ಅದು ಬೇರೆ ಯಾರಿಗೂ ಕೂಡ ಗೊತ್ತೇ ಇಲ್ಲ. ಹಹ್ಹಾ..
ಮೋಡರೇಟರ್ - 🙄🙄
ಕೇಳುಗ 3 ಯ ಹೆಂಡತಿ ಅಡುಗೆ ಕೋಣೆಯಿಂದ - ರೀ ಕಾಫಿ ಆಯಿತು.. ಬೇಗ ಕುಡಿಯಿರಿ.. ಇಲ್ಲದಿದ್ದರೆ ತಣ್ಣಗೆ ಆಗಿ ಬಿಡುತ್ತದೆ. ನಾನಿಲ್ಲಿ ಸಾಂಬಾರ್ ಮಾಡ್ತ ಇದ್ದೆನೆ.
ಕೇಳುಗ 3 - ಬಂದೇ ಇರೇ..ನಮ್ಮ X ತುಂಬಾ ದಿನಗಳ ನಂತರ ಸಿಕ್ಕಿದ್ದಾನೆ ಇಲ್ಲಿ..ಅಂದ ಹಾಗೆ ಕಾಫಿಗೆ ಸಕ್ಕರೆ ಸರಿಯಾಗಿ ಹಾಕಿದ್ದಿ ತಾನೇ.. ಇಲ್ಲ ನಿನ್ನೆಯ ಹಾಗೆಯೇ ಇವತ್ತು ಕೂಡ ಸಕ್ಕರೆಯನ್ನೇ ಹಾಕಲು ಮರೆತಿದ್ದಿಯೋ ಹೇಗೆ..?
ಮೋಡರೇಟರ್ - 😡😡
ಕೆಳಗೆ ನೆರೆದಿರುವ All ಕೇಳುಗಾಸ್ - ಯಾರು ಮರ್ರೆ ಇವನು🙄🙄🤔🤔
ಗಣ್ಯವ್ಯಕ್ತಿ - ಹಹ್ಹಾ... ಅವನು ನನ್ನ ಫ್ರೆಂಡ್..ಅಪ್ಪಟ ಕಾಫಿ ಪ್ರೇಮಿ.
ಮೋಡರೇಟರ್ - ಕೇಳುಗ 3 ಸರ್ ..ಏನಾದರೂ ಪ್ರಶ್ನೆ ಇದೆಯಾ..
ಕೇಳುಗ 3 - ಏನು ಮಾರಾಯ್ತಿ.. ನಿನಗೆ ಬರ್ತಾ ಬರ್ತಾ ನೆನಪಿನ ಶಕ್ತಿಯೇ ಕಡಿಮೆ ಆಗಿ, ಮರೆವಿನ ಕಾಯಿಲೆ ಶುರುವಾಗಿದೆಯಾ ಹೇಗೆ.. ಇವತ್ತು ಸಹ ಕಾಫಿ ಚಪ್ಪೆಯೇ ನೋಡು...!!
ಗಣ್ಯವ್ಯಕ್ತಿ -ಹಹ್ಹಾ.. ಅವನು ಬಹುಶಃ ಕಾಫಿ ಕುಡೀತಾ ಇದ್ದಾನೆ ಎಂದು ಕಾಣುತ್ತೆ...ನಾವು ಮುಂದೆ ಹೋಗೋಣ..
ಮೋಡರೇಟರ್ - ಓಕೆ.. ಈಗ ನಮ್ಮ ಜೊತೆ ಕೇಳುಗ 4 ಇದ್ದಾರೆ. ಇವರೊಬ್ಬ ದೊಡ್ಡ ಅವರು. ಇವರು ಆ ಕ್ಷೇತ್ರದಲ್ಲಿ ಅದನ್ನು ಮಾಡಿದ್ದಾರೆ.ಮುಂದೆ ಇಂತಹ ಕ್ಷೇತ್ರದಲ್ಲಿ ಇದನ್ನೆಲ್ಲಾ ಮಾಡಲು ಇದ್ದಾರೆ. ಅವರೊಬ್ಬ ಉತ್ಸಾಹಿ ಜನ. ಬಡವರ ಬಂಧು, ಸಮಾಜ ಸೇವಕ,ನಿಜವಾಗಿಯೂ ಅವರ ಪ್ರಶ್ನೆಗಳು ಬಹಳ ಚೆನ್ನಾಗಿರುತ್ತದೆ. ಹೇಳಿ ಕೇಳುಗ 4 ಸರ್. X ಅವರಲ್ಲಿ ಕೇಳಲು ಇರುವ ನಿಮ್ಮ ಪ್ರಶ್ನೆ ಏನು..
ಕೇಳುಗ 4 - ಅದೇ... ಪ್ರಶ್ನೆ ಏನಿಲ್ಲ.. ನೀವೆಲ್ಲಾ ಏನು ಮಾಡ್ತಾ ಇದ್ದೀರಿ ಅಂತ ನೋಡೋಕೆ ಬಂದೆ ಅಷ್ಟೇ..
ಕೆಳಗೆ ನೆರೆದಿರುವ All ಕೇಳುಗಾಸ್ ತಮ್ಮ ತಮ್ಮ ಮನಸ್ಸಿನಲ್ಲಿಯೇ - ಇವನು ಜಸ್ಟ್ ಇದನ್ನು ಹೇಳ್ಲಿಕ್ಕೆ ಮೇಲೆ ಹೋಗಿದ್ದಾ.. ಇವನಿಗೆ ಮೋಡರೇಟರ್ ಕೊಟ್ಟ ಬಿಲ್ಡ್ ಅಫ್ ಸ್ವಲ್ಪ ಜಾಸ್ತಿಯೇ ಆಯಿತು.ಮೇಲಿನಿಂದ ತೆಗ್ದು ಮತ್ತೆ ಕೆಳಗೆ ಬಿಸಾಡಿ ಮರ್ರೆ ಅವನನ್ನು.. 😏😏
ಮೋಡರೇಟರ್ - ದಯವಿಟ್ಟು ಎಲ್ಲರಲ್ಲಿಯೂ ಕಳಕಳಿಯ ವಿನಂತಿ. ಆದಷ್ಟು ಚಿಕ್ಕದಾಗಿ ಚೊಕ್ಕವಾಗಿ ನೇರವಾಗಿ ಪ್ರಶ್ನೆ ಕೇಳಿ..ಸಮಯದ ಅಭಾವ ಇದೆ. ಎಲ್ಲರಿಗೂ ನಾವು ಅವಕಾಶ ನೀಡಬೇಕಾಗಿದೆ. ಇನ್ನು ಯಾರೂ ಸರಿಯಾದ ಪ್ರಶ್ನೆಯನ್ನೇ ಕೇಳುತ್ತಿಲ್ಲ!
ಗಣ್ಯವ್ಯಕ್ತಿ - ಮಿಸ್ಟರ್ ಮೋಡರೇಟ್ ಅವರೇ.. ಅಲ್ಲಿ ಕೆಳಗೆ ನೋಡಿ.. W ಅವರು ಬಂದಿದ್ದಾರೆ. ಅವರು ಒಬ್ಬ ಒಳ್ಳೆಯ ಜಿಜ್ಞಾಸು. ಅವರ ಪ್ರಶ್ನೆಗಳೆಲ್ಲಾ ಅಧ್ಬುತವಾಗಿರುತ್ತದೆ.ಅವರು ಮಾತಿನ ಬಾಣಗಳ ಸುರಿಮಳೆಯನ್ನೇ ಮಾಡಬಲ್ಲರು..
ಮೋಡರೇಟರ್ - W ಸರ್.. ನಿಮಗೆ ಮನವಿ ಕಳುಹಿಸಿದ್ದೇನೆ. ದಯಿವಿಟ್ಟು Accept ಮಾಡಿ ಮೇಲೆ ಬನ್ನಿ ಸಾರ್.
ಕೇಳುಗ 5 (W) - ಎಲ್ಲರಿಗೂ ನಮಸ್ತೆ. ನಾನು ಇತ್ತೀಚೆಗೆ ಒಂದು ಇದು ಮಾಡಿದ್ದೇನೆ. ಇದರ ಬಗ್ಗೆ ಪೇಪರ್ ನಲ್ಲೂ ಬಂದಿದೆ. ನನಗೆ ಒಂದು ಕಡೆ ಸನ್ಮಾನವನ್ನೂ ಸಹ ¡^>¿€¢¢©!! ¡^>¿€¢¢©!!..
ಮೋಡರೇಟರ್ - ಸರ್... ನಿಮ್ಮ ವಾಯ್ಸ್ ಬ್ರೇಕ್ ಆಗ್ತಾ ಇದೆ W ಸರ್..
ಗಣ್ಯವ್ಯಕ್ತಿ - ಅವರ ಊರಲ್ಲಿ ಈ ಟೈಂ ಅಲ್ಲಿ ಜೋರು ಮಳೆ ಯಾವಾಗಲೂ,..ಹಾಗಾಗಿ ನೆಟ್‌ವರ್ಕ್ ಇಶ್ಯು ಇರಬೇಕು ಅಂತ ಕಾಣುತ್ತದೆ ಬಹುಶಃ..
ಮೋಡರೇಟರ್ - ಉಫ್..ಓಕೆ ಹಾಗಾದರೆ.. ಇವತ್ತಿನ ಸಮಯ ಮೀರುತ್ತಾ ಬಂತು X ಸರ್.. ಇನ್ನು ರೂಮ್ ಅನ್ನು ಕ್ಲೋಸ್ ಮಾಡೋಣವೇ.
ಗಣ್ಯವ್ಯಕ್ತಿ - ಖಂಡಿತಾ.. ಅದಾಗಲೇ ಎರಡು ಗಂಟೆ ಮೇಲೆ ಆಯಿತು ನೋಡಿ. ಇನ್ನು ಮುಕ್ತಾಯ ಮಾಡಿ ಬಿಡುವುದೇ ಒಳ್ಳೆಯದು.
ಮೋಡರೇಟರ್ - X ಸರ್ ಅವರೇ.. ನಮ್ಮ ಮನವಿಗೆ ಓಗೊಟ್ಟು ಇಲ್ಲಿಗೆ ಬಂದು ನೀವು ಇಷ್ಟು ಹೊತ್ತು ನಮ್ಮೊಡನೆ ಇದ್ದು ಬಹಳಷ್ಟು ಮಾತಾಡಿ ಕೇಳುಗರ ಎಲ್ಲಾ ಪ್ರಶ್ನೆಗಳಿಗೆ ಬಹಳ ಚೆನ್ನಾಗಿ ಉತ್ತರಿಸಿದ್ದೀರಿ.ನಿಮಗೆ ನಮ್ಮ ರೂಮಿನ ಪರವಾಗಿ ವಿಶೇಷ ಧನ್ಯವಾದಗಳು ಸರ್..ಇನ್ನೂ ಕೂಡ ನೀವು ಬರುತ್ತಲೇ ಇರಬೇಕು ನಮ್ಮ ರೂಮಿಗೆ.
ಗಣ್ಯವ್ಯಕ್ತಿ - ನನಗೂ ಬಹಳ ಖುಷಿಯಾಯಿತು ನಿಮ್ಮೊಡನೆ ಎಲ್ಲಾ ಮಾತಾಡಿ. ಧನ್ಯವಾದಗಳು ನಿಮಗೂ ಹಾಗೂ ಎಲ್ಲರಿಗೂ.. ಶುಭರಾತ್ರಿ.
ಮೋಡರೇಟರ್ - ಅದೇ ರೀತಿ ಕೇಳುಗರು ಕೂಡ ಬಹಳ ಒಳ್ಳೆಯ ಪ್ರಶ್ನೆಗಳನ್ನು ಕೇಳಿ ಈ ದಿನದ ಪ್ರೋಗ್ರಾಂ ಅನ್ನು ಚಂದಗಾಣಿಸಿದ್ದೀರಿ.. 😏😏ನಿಮಗೆ ಸಹ ಧನ್ಯವಾದಗಳು..!! ಕೆಳಗೆ ಇಷ್ಟು ಹೊತ್ತು ಇದ್ದ ಲಕ್ಷಾಂತರ ಕೇಳುಗರಿಗೆ ಕೂಡ ಧನ್ಯವಾದಗಳು.ಇಂತಹ ಇನ್ನಷ್ಟು ಒಳ್ಳೆಯ ಕಾರ್ಯಕ್ರಮ ನಮ್ಮ ರೂಮಿನಿಂದ ಬರಲಿದೆ. ರೂಮ್ ಅನ್ನು ಪಾಲೋ ಮಾಡದವರು ದಯವಿಟ್ಟು ಪಾಲೋ ಮಾಡಿ. ಈಗ ರೂಮ್ ಅನ್ನು ಕೊನೆಗೊಳಿಸುತ್ತಿದ್ದೇವೆ.. ಶುಭ ರಾತ್ರಿ..
ಕೇಳುಗ 5(W) - ನಿಜ ಹೇಳಬೇಕೆಂದರೆ ಆ ಸನ್ಮಾನ ನನಗೆ ಯಾವತ್ತೂ ನೆನಪಿನಲ್ಲಿ ಉಳಿಯುತ್ತದೆ. ಅಂದ ಹಾಗೆ ಅವತ್ತು ನನಗೆ ಆ ಸನ್ಮಾನ ಮಾಡಿದ್ದೇ ನಮ್ಮ X..
ಕೇಳುಗ 3 - ಇವಳೇ.. ಇನ್ನೊಂದು ಲೋಟ ಕಾಫಿ ಮಾಡಿ ಕೊಡ್ತೀಯಾ.. ಸಕ್ಕರೆ ಸ್ವಲ್ಪ ಜಾಸ್ತಿಯೇ ಇರಲಿ.
ಕೆಳಗೆ ನೆರೆದಿರುವ All ಕೇಳುಗಾಸ್ - 🙄🙄🙄🤔🤔
ಮೋಡರೇಟರ್ - 😡😡😡😡😡😡
.....................................................................................
#ವಿಷಯ_ಎಂತ_ಗೊತ್ತುಂಟಾ
Ab Pacchu
(ಚಿತ್ರಕೃಪೆ - ಅಂತರ್ಜಾಲ)
Comments
Post a Comment