ಇಕ್ಕಟ್


ತುಂಬಾ ಗಮ್ಮತ್ ಉಂಟು ಆಯ್ತಾ ಈ ಮೂವಿ.ಎರಡು ಗಂಟೆ ಹಾಗೇ ನಕ್ಕು ಹಗುರಾಗಲು,ಮನಸ್ಸನ್ನು ಒಂದಿಷ್ಟು ಉಲ್ಲಾಸಿತಗೊಳಿಸಲು ಹೇಳಿ ಮಾಡಿಸಿದ ಮೂವಿ ಇದು.ವೀಕೆಂಡ್ ಗೆ ನೋಡಲು ದಿನ ಫಿಕ್ಸ್ ಮಾಡುವಿರಾದರೆ  ಖಂಡಿತವಾಗಿಯೂ ಒಳ್ಳೆಯ ಸರಕೇ ಇದು. 


ಲಾಕ್ ಡೌನ್ ಸಂದರ್ಭದಲ್ಲಿ ಮನೆಯೊಳಗಿನ ಎಡವಟ್ಟುಗಳೇ ಇದರ ಕಥೆ.ಕಥೆ ಹೇಳುವುದಿಲ್ಲ ಅದನ್ನು ನೀವು ನೋಡಿಯೇ ಎಂಜಾಯ್ ಮಾಡಬೇಕು.ಎಲ್ಲರ ಅಭಿನಯವೂ ಬಹಳನೇ ಸೊಗಸಾಗಿದೆ ಇಲ್ಲಿ.Nagabhushana N S,Bhoomi Shetty ಸಂಭಾಷಣೆಗಳು ಮೂವಿಯ ಉದ್ದಕ್ಕೂ ಕಚಗುಳಿ ಇಡುತ್ತಲೇ ಇರುತ್ತವೆ.Sundar Veena ಮತ್ತು Rj Vikki ಅಭಿನಯವೂ ಕೂಡ ಅಷ್ಟೇ ಚೆನ್ನಾಗಿದೆ.Esham Khan ಮತ್ತು Haseen Khan ಇದನ್ನು ನಿರ್ದೇಶಿಸಿದ್ದಾರೆ.ಅಲ್ಲಲ್ಲಿ ಒಂಚೂರ್ಚೂರು ಕುಂದಾಪುರ ಕನ್ನಡ ಭಾಷೆಯ ಸೊಗಡು Bhoomi Shetty ಮಾತಲ್ಲಿ ಕೇಳಲು ಇಂಪಾಗಿದೆ.ಒಂದೆರಡು ಕ್ಯಾಚಿ ಹಾಡುಗಳು ಕಿವಿಗಳೆರಡನ್ನು ಹಾಗೇ ಕ್ಯಾಚ್ ಮಾಡಿಕೊಳ್ಳುವಲ್ಲಿ ಸಫಲವಾಗಿವೆ. 


ಇಂತಹ ಕನ್ನಡ ಸಿನಿಮಾಗಳು OTT platform ಗೆ ಹೇಳಿ ಮಾಡಿಸಿದ್ದು.ಕನ್ನಡದಲ್ಲಿ OTT ಗೆ ಸುಲಭವಾಗಿ ಒಗ್ಗಿಕೊಳ್ಳುವ ಹಾಗೂ ನೋಡುಗರಿಗೂ ಅಷ್ಟೇ ಇಷ್ಟವಾಗುವ ಇಂತಹ ಮೂವಿಗಳು ಇನ್ನಷ್ಟು ಬರಲಿ... 



#IKKAT | Prime

Kannada Movie

Romantic Comedy

Year - 21 july 2021


Movies

ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..