Breaking Bad
ಇದು ಎಷ್ಟು ಬ್ರೇಕಿಂಗ್ ಬ್ಯಾಡೋ.. ಅಷ್ಟೇ "ಬೇಕಿಂಗ್ ಬ್ಯಾಡ್" ಕೂಡ ಹೌದು!
ಆದರೆ ಈ ಸಿರೀಸ್ ನ ಕಥೆ ಒಂದು ಉಂಟಲ್ಲಾ,ಅದನ್ನು ನಮ್ಮ ಮುಂದೆ ಪ್ರಸ್ತುತ ಪಡಿಸಿದ ಆ ರೀತಿ ಉಂಟಲ್ಲಾ....
ಅದು ಮಾತ್ರ ಗ್ರೇಟು,ಅಧ್ಭುತ,ವಾಹ್,ಆಹಾ..ಎನ್ನುವ ಎಲ್ಲವನ್ನೂ ಮೀರಿ ಹೃದಯಕ್ಕೆ ತುಂಬಾನೇ ಹತ್ತಿರವಾಗುವ ಚೀಝು.
ಇವತ್ತಿಗೂ ಜಗತ್ತಿನ ಯಾವುದೇ ಟಾಪ್ ರೇಟಿಂಗ್ ಲಿಸ್ಟ್ ತೆಗೆದು ನೋಡಿ ಟಾಪ್ ಟೆನ್ ಸಿರೀಸ್ ಗಳ ಪಟ್ಟಿಯಲ್ಲಿ ಮೊದಲ ಮೂರರಲ್ಲಿ ಒಂದು ಸ್ಥಾನ ಯಾವತ್ತಿಗೂ ಈ ಸಿರೀಸ್ ಗೇ ಇದ್ದೇ ಇದೆ.ಅದರಲ್ಲೂ ಮೂವಿಗಿಂತಲೂ ಹೆಚ್ಚಾಗಿ ಕೇವಲ ಸಿರೀಸ್ ಒಂದನ್ನೇ ನೋಡಿ ಮನರಂಜನೆ ಪಟ್ಟುಕೊಳ್ಳುವಂತಹ ಕಟ್ಟರ್ ಸಿರೀಸ್ ಪ್ರೇಮಿಗಳ ಮನದಲ್ಲಿ ಎದೆಯಲ್ಲಂತು ಮೊದಲ ಸ್ಥಾನದಲ್ಲಿ ಯಾವತ್ತಿಗೂ ರಾರಾಜಿಸುವುದು Breaking Bad ಎಂಬ ಈ ಅಮೋಘ ಅತ್ಯಧ್ಭುತ ಸಿರೀಸ್ ಹಾಗೂ ಇದರ Heisenberg ಖ್ಯಾತಿಯ ಕೆಂಚು ಮೀಸೆಯ Walter White.
ಕಥೆ ಹೇಳುವುದಿಲ್ಲ... ಪೂರ್ತಿ ಕಥೆ ಹೇಳಲು ಸಾಧ್ಯ ಆಗುವುದು ಕೂಡ ಇಲ್ಲ! ಆದರೂ ಒಂದಷ್ಟನ್ನು ಇಲ್ಲಿ ಮೆಲುಕಿ ಹಾಕಿಕೊಳ್ಳಲು ಹಾಗೇ ಇಷ್ಟ ಪಡುತ್ತೇನೆ.
ಅವರಿಬ್ಬರು ಮೂಲತಃ ಗುರು ಶಿಷ್ಯರೇ.ಶಿಷ್ಯ ಪ್ರತಿಯೊಂದರಲ್ಲೂ ಸಿಕ್ಕಾಪಟ್ಟೆ ವೀಕು ಎಂಬಂತಿದ್ದರೆ ಗುರು ಎಲ್ಲವನ್ನೂ ಮೀರಿದ ಅಪ್ರತಿಮ ಜೀನಿಯಸ್.ಬಹುಶಃ ಅವನಿಗೆ ಗೊತ್ತಿರದ ವಿಷಯವೇ ಇಲ್ಲ.ಶಿಷ್ಯ ಡ್ರಗ್ ಹೊಗೆಯಲ್ಲಿ ಅದರ ಪರಿಮಳದಲ್ಲೇ ಪ್ರತಿನಿತ್ಯ ಅರಳುವ ಹರೆಯದ ಹುಡುಗ ಆಗಿದ್ದರೆ,ಗುರು ಲಂಗ್ ಕ್ಯಾನ್ಸರ್ ನಿಂದ ನರಳುವ ಐವತ್ತರ ಅಸುಪಾಸಿನ ಮುದುಕನಂತಿರುವ ಉತ್ಸಾಹಿ ಯುವಕ.ಅವನು ಪಕ್ಕಾ ಫ್ಯಾಮಿಲಿ ಮ್ಯಾನ್.ತನಗಿಂತಲೂ ತನ್ನ ಫ್ಯಾಮಿಲಿಯನ್ನೇ ಅತಿಯಾಗಿ ಪ್ರೀತಿಸುವವ ಅವನು.ಫ್ಯಾಮಿಲಿಯ ರಕ್ಷಣೆಗಾಗಿ ಯಾವ ಹಂತವನ್ನೂ ಅವನು ಹಾಗೇ ಕ್ರಾಸ್ ಮಾಡಿಬಿಡಬಲ್ಲ...ಅದನ್ನವನು ಕೊನೆಯವರೆಗೂ ಹೇಳುತ್ತಲೇ ಇರುತ್ತಾನೆ ಮತ್ತು ಪದೇ ಪದೇ ಪ್ರೂವ್ ಮಾಡಿ ಅದನ್ನು ತೋರಿಸುತ್ತಲೇ ಇರುತ್ತಾನೆ!
ಎಷ್ಟೇ ಸಲ ಬ್ರೇಕ್ ಆಗುವ ಸ್ಥಿತಿ ಉಂಟಾದರೂ ಈ ಗುರು ಶಿಷ್ಯರ ಮಧ್ಯೆ ಒಂದೊಳ್ಳೆಯ ಬಿಡಿಸಲಾಗದ ಕೋವಲೆಂಟ್ ಬಾಂಡ್ ಹಾಗೇ ಕಥೆಯಲ್ಲಿ ಬೆಳೆದು ಬಿಡುತ್ತದೆ.ಹೈಸ್ಕೂಲ್ ನ ಕೆಮಿಸ್ಟ್ರಿ ಲ್ಯಾಬ್ ನಲ್ಲಿ ಹುಟ್ಟಿಕೊಳ್ಳದ ಕೆಮಿಸ್ಟ್ರಿಯೊಂದು ಮುಂದೆ ಇಬ್ಬರೂ ಜೊತೆಯಾಗಿ ಕಾನೂನಿನ ಕಣ್ಣು ತಪ್ಪಿಸಿ ಕದ್ದು ಮುಚ್ಚಿ ಅಲ್ಲಲ್ಲಿ ಕುಕಿಂಗ್ ಮಾಡುವಾಗ ಹುಟ್ಟಿಕೊಳ್ಳುತ್ತದೆ.ಅಡುಗೆಗಾಗಿ ಕುಕ್ಕಿಂಗ್ ಅಲ್ಲ..ಕುಕಿಂಗ್ Meth(Methamphetamine)ಕೇವಲ ನಶೆಗಾಗಿ..ಒಳ್ಳೆಯ ಕ್ವಾಲಿಟಿಯ ನೀಲಿ ಹರಳಿಗಾಗಿ...90 ಶೇಕಡಾಕ್ಕೂ ಮೀರಿದ ಪ್ಯೂರಿಟಿಯ ಅಮಲಿನ ಆ ವಿಶೇಷ ಬ್ಲೂ ಡ್ರಗ್ಗಿಗಾಗಿ... ಅದಕ್ಕೂ ಹೆಚ್ಚಾಗಿ ಎಣಿಸಲು ಆಗದಷ್ಟು ಕೈ ಸೇರುವ ಗರಿ ಗರಿ ಹಣಕ್ಕಾಗಿ !!
ಕಥೆಯಲ್ಲಿ ಮುಂದೆ ಏನೆನೋ ಆವಾಂತರಗಳು ಆಗುತ್ತಲೇ ಹೋಗುತ್ತದೆ.. ಅದಕ್ಕಾಗಿ ನೀವು ಸಿರೀಸ್ ಅನ್ನೇ ನೋಡಬೇಕು.
ಈ ಸಿರೀಸ್ ನ Black Comedy ತುಂಬಾ ಸಲ ಸಿಕ್ಕಾಪಟ್ಟೆ ನಗಿಸುತ್ತದೆ. ನಕ್ಕು ಹಾಗೇ ಹಗುರಾಗಿಸುತ್ತದೆ.ಕಥೆ ಕೆಲವೊಂದು ಕಡೆ ಥ್ರಿಲ್ ಹುಟ್ಟಿಸುತ್ತದೆ,ಹಾಗೇ ಬೆಚ್ಚಿ ಬೀಳಿಸುತ್ತಾ ಹೋಗುತ್ತದೆ.. ಕೊನೆ ಕೊನೆಯಲ್ಲಿ ಮಾತ್ರ ಬೇಡವೆಂದರೂ ಹೃದಯ ಮಾತ್ರ ಸಿಕ್ಕಾಪಟ್ಟೆ ಭಾರ!
ಎಲ್ಲವೂ ಮುಗಿದ ನಂತರ ಒಂದೈದು ನಿಮಿಷ ಸುದೀರ್ಘ ಮೌನ!...ನೀವು ಬೇಡವೆಂದರೂ Walter White ನಿಮ್ಮಿಂದ ಹಾಗೇ ಕಸಿದುಕೊಳ್ಳುತ್ತಾನೆ!!
ಕಥೆ ಡ್ರಗ್ ಗೆ ಸಂಬಂಧಿಸಿದ್ದಾದರೂ,Walter white ಎಂಬ ಶಿಕ್ಷಕ ಕಾನೂನು ಬಾಹಿರ ಕೆಲಸ ಮಾಡುವವನಾದರೂ..ಇಲ್ಲಿ ಯು ವೋಂಟ್ ಹೇಟ್ Walter White. ಅವನು ಎಷ್ಟು ಇಷ್ಟವಾಗುತ್ತಾನೆ ಎಂದರೆ Breaking bad ಎಂದರೆ ಅವನು.. ಅವನೆಂದರೆನೇ Breaking bad ಎನ್ನುವಷ್ಟು ನಿಮ್ಮನ್ನು ಅವನು ಆಕ್ರಮಿಸಿಕೊಳ್ಳುತ್ತಾ ಹೋಗುತ್ತಾನೆ.ಆ ಪಾತ್ರವೇ ಅಂತಹದ್ದು. ತಪ್ಪು ಮಾಡುತಿದ್ದರೂ ಅವನು ಸೋಲದಿರಲಿ ಎಂದು ಮನಸಾರೆ ಹಾರೈಸುವಷ್ಟು ಚೆನ್ನಾಗಿ ಸೃಷ್ಟಿಸಿದ್ದಾರೆ ಆ ಕೆಮಿಸ್ಟ್ರಿ ಟೀಚರ್ ನ ಪಾತ್ರವನ್ನು.
Bryan Cranston ಎಂಬ ನಟ ಕೆಲವೊಮ್ಮೆ ಬೋಳು ಮಂಡೆಯಲ್ಲಿ ಇನ್ನು ಕೆಲವೊಮ್ಮೆ ತಲೆಗೊಂದು ಹ್ಯಾಟ್ ಏರಿಸಿ ಕಣ್ಣಿಗೊಂದು ಚಂದದ ಗ್ಲಾಸ್ ಸಿಕ್ಕಿಸಿ ಹಾಗೇ Walter White ಆಗಿ ಆ ಪಾತ್ರಕ್ಕೆ ಇನ್ನಿಲ್ಲದಂತೆ ಜೀವ ತುಂಬಿ ಬಿಟ್ಟಿದ್ದಾನೆ ಇಲ್ಲಿ.ಅವನು ಯಾವತ್ತಿಗೂ ಇನ್ನು ಬೇರೆ ನಟನೆಯನ್ನೇ ಮಾಡಬೇಕಾಗಿಲ್ಲ ಬಿಡಿ.ಈ ಒಂದು ಪಾತ್ರಕ್ಕಾಗಿಯೇ ತುಂಬಾ ಸಮಯ ನೆನಪಿನಲ್ಲಿ ಉಳಿಯುತ್ತಾನೆ Bryan Cranston.
ವಾಲ್ಟರ್ ವೈಟ್ ನಂತೆಯೇ Jesse Pinkman(Aaron Paul),Hank Schrader(Dean Norris), Skyler White(Anna Gunn),Walter Jnr(RJ Mitte),Marie Schrader( Betsy Brandt)Saul Goodman(Bob Odenkirk),Gustavo Fring( Giancarlo Esposito) ಮೊದಲಾದವರ ಪಾತ್ರ ಕೂಡ ಬಹಳಷ್ಟು ನೆನಪಿನಲ್ಲಿ ಉಳಿಯುವಂತಹದ್ದು.ಅವರೂ ಕೂಡ ಬಹಳಷ್ಟು ರಂಜಿಸಿದ್ದಾರೆ.
2008 ರಿಂದ 2013 ರವರೆಗೆ ಐದು ವರ್ಷಗಳ ಕಾಲ,ಸಿರೀಸ್ ಪ್ರಿಯರ ಮನತಣಿಸಿದ ಈ ಸೀರಿಸ್ ನಲ್ಲಿ 5 ಸೀಸನ್ ಹಾಗೂ ಒಂದೊಂದು ಎಪಿಸೋಡ್ 45 ನಿಮಿಷಗಳಂತೆ ಒಟ್ಟಾರೆ 62 ಎಪಿಸೋಡ್ ಗಳಿವೆ.
Vince Gilligan ನಿಂದ ನಿರ್ಮಿತವಾದ ಈ ಸಿರೀಸ್ ಪಡೆದುಕೊಂಡ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ.ಕೇವಲ Emmy Awards ಒಂದನ್ನೇ ಇದು 16 ಬಾರಿ ಮುಡಿಗೇರಿಸಿಕೊಂಡಿದೆ. ಇತರ ಪ್ರಶಸ್ತಿಗಳ ಲಿಸ್ಟು ಕೂಡ ಇನ್ನೂ ಬಹಳಷ್ಟು ಉದ್ದವಿದೆ.ಇದು ಜನರಿಂದ ಅಪಾರವಾದ ಮೆಚ್ಚುಗೆ ಪಡೆದುಕೊಂಡ ಶೋ ಎಂಬ ಕಾರಣಕ್ಕಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನ ಕಾರ್ಪೆಟ್ ಕೂಡ ಹಾಗೇ ತುಳಿದು ಬಂದಿತ್ತು.
ಹೆಚ್ಚಿನ ಎಲ್ಲಾ Genre ಯನ್ನು ಕವರ್ ಮಾಡಿಕೊಂಡು ರಂಜಿಸುವ ಈ Breaking Bad ನ ಮತ್ತೊಂದು ಅಡ್ಡನಾಮವೇ " to raise Hell " ಅಂತ. ಹೆಚ್ಚಿನವರು ಇದನ್ನು ನೋಡಿಯೇ ಇರುತ್ತೀರಾ.ಒಂದು ವೇಳೆ ನೋಡಿರದಿದ್ದರೆ ನೀವು ಬಹಳ ಚೆನ್ನಾಗಿರುವ ಯಾವುದೋ ಒಂದನ್ನು ಇನ್ನೂ ನೋಡದೇ ಹಾಗೇ ಉಳಿಸಿದ್ದೀರಿ ಮತ್ತು ಉಳಿದಿದ್ದೀರಿ ಎಂದೇ ಅರ್ಥ.
ಎಲ್ಲವೂ ಎಲ್ಲರಿಗೂ ಇಷ್ಟವಾಗಬೇಕಿಲ್ಲ.ಆದರೆ ಬಹುಶಃ ಇದೊಂದು ಮಾತ್ರ ಹೆಚ್ಚಿನವರಿಗೆ ಇಷ್ಟವಾಗದೇ ಉಳಿಯುವುದು ಕೂಡ ಇಲ್ಲ..
Walter White ತಮ್ಮ ಫ್ಯಾಮಿಲಿಗೆ ಏನಾದರೂ ಆಗಬಹುದು ಎಂದು ಭಯ ಬೀಳುವ ತನ್ನ ಹೆಂಡತಿಗೆ “You clearly don’t know who you’re talking to,so let me clue you in. I'm not in danger Skyler. #I_am_the_DANGER !! " ಎಂದು ಹೇಳಿ ಅವಳನ್ನು ಮತ್ತಷ್ಟು ಗಾಬರಿ ಗೊಳಿಸಿದ ಮರುಕ್ಷಣವೇ "Skyler.. A guy opens his door and gets shot, and you think that of me..? No!..#I_am_the_one_who_knocks!!! ” ಎನ್ನುತ್ತಾ ಕ್ಷಣ ಕ್ಷಣಕ್ಕೂ Skyler ಳಲ್ಲೂ ಜೊತೆಗೆ ನಮ್ಮಲ್ಲೂ ಅಷ್ಟೇ ದಿಗಿಲು ಹುಟ್ಟಿಸುತ್ತಾ,ಎಪಿಸೋಡ್ ನಿಂದ ಎಪಿಸೋಡ್ ಗೆ ಏನೇನೋ ಸರ್ಕಸ್ ಮಾಡುತ್ತಾ ಕೊನೆಯವರೆಗೂ ಅಷ್ಟೇ ಇಷ್ಟವಾಗುತ್ತಾ ಹೋಗುವ Walter White ಹಾಗೂ ಈ Breaking Bad ಮುಗಿದು ಹೋಗಿಯೇ ಹೆಚ್ಚು ಕಡಿಮೆ ಎಂಟು ವರ್ಷಗಳು ಸಂಧಿವೆ.
ಆದರೆ ಯಾವಾಗ ಬೇಕಾದರೂ ಮಾತ್ರವಲ್ಲ ಇನ್ನು ಎಷ್ಟು ವರ್ಷ ಕಳೆದರೂ ಮತ್ತೆ ಮತ್ತೆ ನೋಡಬೇಕೆನಿಸುವ ಇದು ಒಂಥರಾ ರುಚಿ ಹೆಚ್ಚಿಸಿಕೊಳ್ಳುವ ಹಳೆಯ ವೈನು.ವರುಷ ಉರುಳಿದಂತೆ ಇದರ ಸ್ವಾದ ಜಾಸ್ತಿ ಆಗಬಹುದೇ ಹೊರತು ಕಡಿಮೆ ಅಂತು ಎಂದಿಗೂ ಆಗದು.ಅಂಕೆ ತಪ್ಪಿ ಸಿಕ್ಕಾಪಟ್ಟೆ ಹೊಗಳಿ ಬಿಟ್ಟೆ ಎಂದು ಅನಿಸಿದರೆ ನೀವು ಬ್ರೇಕಿಂಗ್ ಬ್ಯಾಡ್ ಅಭಿಮಾನಿಗಳನ್ನೇ ಒಮ್ಮೆ ಇವುಗಳ ಬಗ್ಗೆ ಕೇಳಿ ನೋಡಬೇಕು.
ಅವರುಗಳಿಂದ ಎವರ್ ಗ್ರೀನ್, ಎಪಿಕ್, ಕ್ಲಾಸಿಕ್.. ಇಂತಹ ಮಾತುಗಳೇ ಹೆಚ್ಚಾಗಿ ಕೇಳಿಬಂದರೆ ಅದರಲ್ಲಿ ಯಾವುದೇ ಅಚ್ಚರಿ ಇಲ್ಲ ಬಿಡಿ.ಈ ಸಿರೀಸ್ ಗೆ ಸಂಬಂಧಿಸಿದಂತೆ ಅದು ತೀರಾ ಸಾಮಾನ್ಯ ವಿಷಯ.
ಮೊದಲಿನಿಂದಲೂ ಎಲ್ಲವನ್ನೂ ತನ್ನ ಫ್ಯಾಮಿಲಿಗೆಂದೇ ಮಾಡಿದ್ದೇ ಎಂದು ಹೇಳುವ ಸಾವಿನೊಡನೆ ಹೊರಡುವ ಕ್ಯಾನ್ಸರ್ ರೋಗಿ, ಅಪ್ರತಿಮ ಕೆಮಿಕಲ್ ತಜ್ಞ Walter White... ಕೊನೆಯಲ್ಲಿ ವಿಷಾದದಲ್ಲಿ ಯಾವತ್ತೂ ಹೇಳದ ಆ ಒಂದು ಮಾತು ಕೂಡ ಹೇಳಿಯೇ ಬಿಡುತ್ತಾನೆ...
" I did it for me,I liked it.I was good at it, and i was really... I was alive!!! ".
#Breaking_Bad | Netflix
English Series
Neo-Western,Crime Drama,Black Comedy,Thriller, Tragedy
Year- 2008 - 2013
#Series
Ab Pacchu
(https://phalgunikadeyavanu.blogspot.com)
Comments
Post a Comment