Cold Case

 #Cold_Case | Prime





ಮೀನು ಹಿಡಿಯಲು ಕೆರೆಗೆ ಬಲೆ ಬೀಸಿದಾಗ ಎಂದಿನಂತೆ ಮೀನುಗಳಷ್ಟೇ ಸಿಕ್ಕಿ ಬಿದ್ದರೆ ಅದು ಬರೀ ಅಷ್ಟೇ ಕಥೆ,ಅದರ ಬದಲು ಮನುಷ್ಯನದ್ದು ತಲೆಬರುಡೆಯೊಂದು ಬಲೆಯೊಳಗೆ ಸಿಕ್ಕಿ ಹಾಗೇ ಅದು ಮೇಲೆ ಬಂದು ಬಾಯ್ಬಿಟ್ಟು ನಕ್ಕು ಬಿಟ್ಟರೆ..? ಆಗ ಅಲ್ಲಿಂದಲೇ ಶುರು ಥ್ರಿಲ್ ಎನಿಸುವ ಹೊಸತೊಂದು ಕಥೆ! 


ನಡುರಾತ್ರಿಯ ನಿಶ್ಶಬ್ಧತೆಯಲ್ಲಿ ಮನೆಯ ಫ್ರಿಡ್ಜ್ ತಂಪಗೆ ತೆಪ್ಪಗೆ ಇರುವುದು ಬಿಟ್ಟು ಗಡಗಡ ಎಂದು ತಾನೇ ಸ್ವತಃ ಅದುರಿಕೊಂಡು,ನಡುಗಿಕೊಂಡು ಇನ್ನಿಲ್ಲದಂತೆ ಹೆದರಿಸಲು ಶುರುಮಾಡಿ ಬಿಟ್ಟರೆ,ಆ ರಾತ್ರಿ ಮಾತ್ರವಲ್ಲ ಪ್ರತೀ ರಾತ್ರಿಯೂ ಆ ಮನೆಯಲ್ಲೊಂದು ನಿದ್ದೆ ಅತೀ ಕಷ್ಟವೇ!


ಈ #Cold_Case ಮೂವಿಗೆ Tanu Balak ಅವರ ನಿರ್ದೇಶನವಿದ್ದು,Prithviraj Sukumaran, Aditi Balan, Lakshmi Priyaa Chandramouli ಮುಂತಾದವರ ಅಭಿನಯವಿದೆ. Murder Mystery ಮೂವಿಗಳನ್ನು ಇಷ್ಟ ಪಡುವವರಿಗೆ ಇದೂ ಕೂಡ ಇಷ್ಟವಾಗಬಹುದು.



#Cold_Case | Prime 

Malayalam Movie 

Crime Thriller 

Year - 2021


#Movies 

Ab Pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..