Kala
ಮೊದಲ ಫ್ರೇಮ್ ನಿಂದಲೇ ಏನೋ ಒಂದು ತುಂಬಾ ಭೀಕರವಾದದ್ದು ಈಗ ಇಲ್ಲಿ ಘಟಿಸಲಿದೆ ಎಂದು ಇನ್ನಿಲ್ಲದಂತೆ ಕ್ಷಣ ಕ್ಷಣಕ್ಕೂ ಕುತೂಹಲ ಹುಟ್ಟಿಸುತ್ತಾ ಶುರುವಾಗುವ ಈ ಮೂವಿಯ ಮೊದಲ 46 ನಿಮಿಷ ಏನೂ ನಡೆಯುವುದೇ ಇಲ್ಲ!
ಆದರೆ ನಂತರ ನಡೆಯುವ ಘಟನೆಗಳು ಮೊದಲ ಆ 46 ನಿಮಿಷಗಳೇ ನೆನಪಿನಲ್ಲಿರದಂತೆ ಮಾಡಿಬಿಡುತ್ತದೆ!!
ನಾಯಿಯ ಹೆಸರು ಬ್ಲ್ಯಾಕಿ.ಹೆಸರಿಗೆ ತಕ್ಕಂತೆಯೇ ಕಪ್ಪು ಬಣ್ಣದ Cane Corso ಜಾತಿಯ ನಾಯಿ.ಕಥೆಯಲ್ಲಿ ಅದೊಂದೇ ನಾಯಿ ಇರುವುದಲ್ಲ.ಇನ್ನೊಂದು ಲೋಕಲ್ ನಾಯಿಯೂ ಇದೆ.ಆದರೆ ಕಥೆ ಶುರುವಾಗ ಮೊದಲೇ ಅದರ ಕಥೆ ಮುಗಿದಿರುತ್ತದೆ,Sorry ಮುಗಿಸಲಾಗಿರುತ್ತದೆ!
ಅಷ್ಟು ಹೇಳಿದ ಕೂಡಲೇ ಇದು ಬರೀ ನಾಯಿಯ ಕಥೆಯಲ್ಲ.ನಾಯಿಯೂ ಇದೆ,ನಾಯಿಯ ಯಜಮಾನನೂ ಇದ್ದಾನೆ,ಜೊತೆಗೆ ತೋಟದಲ್ಲಿ ಕೆಲಸ ಮಾಡುತ್ತಾ ಕ್ಷಣ ಕ್ಷಣಕ್ಕೂ ಬೀಡಿ ಸೇದುತ್ತಾ ತೋಟದ ತುಂಬಾ ವಿಲಕ್ಷಣವಾಗಿ ವಿಷಲ್ ಹೊಡೆಯುವ ಆ ಸಪೂರ ಕಾಯದ ಕಪ್ಪು ಮೈಬಣ್ಣದ ಬಿಳಿ ಹಲ್ಲಿನ ಹುಡುಗನೂ ಇದ್ದಾನೆ!!
ತೋಟ ಹಾಗೂ ತೋಟದ ನಡುವಿನ ಮೌನದಲ್ಲಿ ಒಂದು ಫೈಟ್ ಹಾಗೇ ನಡೆದು ಬಿಡುತ್ತದೆ.ಇಲ್ಲಿ ಬರೀ ಇಬ್ಬರೇ ಜಿದ್ದಿಗೆ ಬಿದ್ದು ಹೊಡೆದಾಡುತ್ತಾರೆ,ಬಡಿದಾಡುತ್ತಾರೆ,ರಕ್ತವನ್ನು ಹೊಳೆಯಂತೆ ಹರಿಸಿ ಬಿಡುತ್ತಾರೆ.ಇವರ ಫೈಟ್ ಈಗ ಮುಗಿಯುತ್ತದೆ,ಆಗ ಮುಗಿಯುತ್ತದೆ,ಬೇರೆಯೇ ಕಥೆ ಇನ್ನು ಶುರುವಾಗಲಿದೆ.. ಎಂದುಕೊಂಡರೆ ಅವರಿಬ್ಬರ ಫೈಟ್ ಮುಗಿಯುವುದೇ ಇಲ್ಲ...!
ಅವರಿಬ್ಬರದ್ದು ಮುಗಿಯದ ಕದನ.. ಹೌದು ಮೂವಿ ಮುಗಿಯುವವರೆಗೂ ಅದಕ್ಕೊಂದು ಯುದ್ಧವಿರಾಮ ಎನ್ನುವುದೇ ಇರುವುದಿಲ್ಲ! ನಿಜ ಹೇಳಬೇಕೆಂದರೆ ಈ ಹೊಡೆದಾಟವೇ ಮೂವಿಯ ಪ್ರಧಾನ ಕಥೆ!!
ಏಕಾಂಗಿ ತೋಟ ಅವರಿಬ್ಬರ ಆ ಹೊಡೆದಾಟಕ್ಕೆ ಪ್ರತ್ಯಕ್ಷ ಸಾಕ್ಷಿ! ಇಡೀ ಕಥೆಯನ್ನು ಆವರಿಸಿಕೊಂಡಿರುವ ಆ ಒಂದು ಫೈಟ್ ಗೆ ಅಸಲಿ ಕಾರಣವಾದರೂ ಏನು?ನಿಜಕ್ಕೂ ಏತಕ್ಕಾಗಿ ಅಷ್ಟೊಂದು ರೋಷ,ಅಂತಹ ಹೊಡೆದಾಟ ಬಡಿದಾಟ??!!
Rohith V. S ಇದನ್ನು ನಿರ್ದೇಶಿಸಿದ್ದಾರೆ.Tovino Thomas, Sumesh Moor, Lal Paul, Divya Pillai ಇದರಲ್ಲಿ ಅಭಿನಯಿಸಿದ್ದಾರೆ.ಕಥೆಯನ್ನೇ ಎಂತಹ ಹೀರೋ ಮಾಡಿದ್ದಾರೆ ಎಂದರೆ ಅಷ್ಟು ದೊಡ್ಡ ನಟ Tovino Thomas ಈ ಕಥೆಗೆ ಹೀರೋ ಎಂದು ಯಾವ ಕ್ಷಣದಲ್ಲಿಯೂ ಅನ್ನಿಸುವುದೇ ಇಲ್ಲ!
ಎಂದಿನಂತೆ ಹೆಚ್ಚಿನ ಮಲಯಾಳಂ ಮೂವಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಪ್ರಕೃತಿಯ ಕ್ಯಾನ್ವಾಸ್ ಇಲ್ಲೂ ಇದೆ.ಮಲಯಾಳಂ ಮೂವಿಗಳಲ್ಲಿ ಅದು ಯಾವತ್ತಿಗೂ ಬೋರ್ ಹಿಡಿಸುವುದಿಲ್ಲ.ಇಲ್ಲಿ ಮಾತ್ರ ಅದಂತು ಇನ್ನಷ್ಟು ಸುಂದರ. ತುಂಬಾನೇ ಸೊಗಸಾಗಿ,ಡಿಟೈಲ್ ಆಗಿ ಎಲ್ಲವನ್ನೂ ಚಿತ್ರಿಸಿದ್ದಾರೆ.ಕರಿಮೆಣಸು, ಕಾಡುಹಂದಿ,ಭಟ್ಟಿ ಸಾರಾಯಿ,ಅಡಿಕೆ ತೋಟ,ಎಲಕ್ಕಿಯ ಘಮ.. ಎಲ್ಲದರ ನಡುವೆ ಆ ಒಂದು ಫೈಟು! ಅದಕ್ಕಾಗಿ ನೋಡಿರದಿದ್ದರೆ ನೋಡಿ #Kala
#Kala | Prime
Malayalam Movie
Thriller Movie
Year - 2021
#Movies
Ab
Comments
Post a Comment