Malik




ನಾಯಕ ಇಲ್ಲಿ "Godfather" ನಂತೆ ಕಾಣುತ್ತಾನೆ,ಕಥೆ ಹೇಳುವವರು ಆವಾಗವಾಗ "ಉಳಿದವರು ಕಂಡಂತೆ" ಮೋಡ್ ಗೆ ಜಾರುತ್ತಾರೆ!


ಒಬ್ಬ ಪ್ರಮುಖ ಕೊಲೆಗಾರ....ಕೈ ಮೀರಿ ನಡೆದು ಹೋಗುವ ಹಲವು ಕೊಲೆ,ಮುಗಿಯದ ಕೋಮು ಗಲಭೆ(ಮುಸ್ಲಿಂ - ಕ್ರಿಶ್ಚಿಯನ್),ಹಗಲು ರಾತ್ರಿಯೆನ್ನದೆ ವಿಶ್ರಮಿಸದ ಆ ಎರಡು ಕಡಲ ತೀರ(ಲಕ್ಷದ್ವೀಪ-ತಿರುವನಂತಪುರ),ಹಲವು ಸುಳ್ಳು,ಒಂದೆರಡು ಕಡು ಸತ್ಯ,ನಡುನಡುವೆ ಗೊಂದಲ,ರಾಜಕೀಯದ ಲಾಭ ನಷ್ಟ,... ಇವಿಷ್ಟನ್ನು ಒಳಗೊಂಡ 2 ಗಂಟೆ 40 ನಿಮಿಷಗಳ ಮೂವಿ ಇದು. 


ಎಲ್ಲಾ ಮೂವಿ ಎಲ್ಲರಿಗೂ ಇಷ್ಟ ಆಗಬೇಕಾಗಿಲ್ಲ.FaFa ನ ಹೆಚ್ಚಿನ ಮೂವಿ ಇಷ್ಟ ಆಗುತ್ತದೆಯಾದರೂ ಯಾಕೋ ಅವನ ರೇಂಜಿಗೆ ಒಟ್ಟಾರೆ ಮೂವಿ ಅಷ್ಟಾಗಿ ರುಚಿಸಲಿಲ್ಲ.ಕೊನೆಯಲ್ಲಿ ಮೂವಿಯ ಕಥೆ ಆಸಕ್ತಿ ಮೂಡಿಸುತ್ತದೆಯಾದರೂ ಅಷ್ಟು ಉದ್ದದ ಮೂವಿಗೆ ಹಿಡಿದು ನಿಲ್ಲಿಸುವ ತಾಕತ್ತು ಸ್ವಲ್ಪ ಕಡಿಮೆ ಇದೆ ಎಂದೇ ಅನಿಸಿತು. 


1960 ರಿಂದ ಈಗಿನವರಿಗೆ ಕಥೆಯನ್ನು ಇಲ್ಲಿ ತೋರಿಸಲಾಗಿದೆ.ಕೆಲವು ನಿಜ ಘಟನೆಗಳನ್ನೇ ಹೆಕ್ಕಿ ಹೆಕ್ಕಿ ಈ ಕಥೆಯನ್ನು ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ. Mahesh Narayanan ಇದನ್ನು ನಿರ್ದೇಶಿಸಿದ್ದಾರೆ.Fahad Fasil, Nimisha Sajayan, Vinay Forrt, Joju George, Dileesh Pothan ಮುಂತಾದವರ ಅಭಿನಯವಿದೆ.FaFa ನ ಅಭಿನಯ ಎಂದಿನಂತೆ ಅವನ ಅಭಿಮಾನಿಗಳಿಗೆ ಇಷ್ಟವಾಗಬಹುದು ಆದರೆ ಒಟ್ಟಾರೆ ಮೂವಿ... ಅದು ಅವರವರ ಅಭಿರುಚಿಗೆ ಬಿಟ್ಟದ್ದು! 


#Malik | Prime 

Malayalam Movie 

Crime Thriller 

Year - 15 July 2021


#Movies 

Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..