Mimi




ಆ ಹಾಡಿನ ಸಾಲಿನಂತೆಯೇ ಅವಳು "ಪರಮ ಸುಂದರಿ". ಹೆಸರು ಮಿಮಿ.ಹಣಕ್ಕಾಗಿ ಸ್ಟೇಜ್ ಏರಿ ಚಂದಗೆ ಡಾನ್ಸ್ ಮಾಡುತ್ತಾಳೆ.ಕನಸು ಆಸೆ ಎರಡೂ ಒಂದೇ,ಅದೇ ಬಾಲಿವುಡ್ ನಲ್ಲಿ ನಾಯಕಿಯಾಗಿ ರಾಣಿಯಂತೆ ಮೆರೆಯಬೇಕು ಎಂದು. 


ಅವನು ಭಾನು.ಭಾನು ಪ್ರತಾಪ್ ಪಾಂಡೆ.ಕೆಲಸ ಕಾರ್ ಡ್ರೈವರ್.ಅವನೇ ಹೇಳಿಕೊಳ್ಳುವಂತೆ ಅವನೊಬ್ಬ ಆರ್ಟ್ ಲವ್ವರ್.ಆದರೆ ಕಮಿಷನ್ ಸಿಗುವ  ಕೆಲಸಗಳನ್ನು ಮಾಡಲು ಮಾತ್ರ ಅವನು ಎಂದೆಂದಿಗೂ ಹಿಂಜರಿಯುವುದೇ ಇಲ್ಲ.



ತಮ್ಮ ಹೊಲದಲ್ಲಿ ಕಬ್ಬು ಬೆಳೆಯಲಾರದು ಎಂದು ಗೊತ್ತಾದಾಗ ಮತ್ತೊಬ್ಬರ ಫಲವತ್ತಾದ ಹೊಲದಲ್ಲಿ ಕಬ್ಬು ಬೆಳೆದು ಖುಷಿ ಪಟ್ಟುಕೊಳ್ಳುವಂತಹ ಕಥೆ ಇದು.ಹೊಲ ಯಾರದ್ದೋ.. ಕಬ್ಬು ಯಾರದ್ದೋ.ಈ ರೀತಿ ಹೇಳಿ ಬಿಟ್ಟರೆ ಇದು ಕಬ್ಬು ಬೆಳೆಯುವ ರೈತರುಗಳ ಕಥೆ ಖಂಡಿತವಾಗಿಯೂ ಅಲ್ಲ.ಬಾಡಿಗೆ ತಾಯಿಯ ಹೊಟ್ಟೆಯಲ್ಲಿ ಇನ್ನಾರಾದೋ ದಂಪತಿಗಳ ಮಗು ಸ್ವತಃ ಸಮ್ಮತಿ ಇದ್ದೇ ಕಸಿಯಾಗುವ Surrogacy ಯ ಕಥೆ ಇದು. 


ಆ ಕಥೆ ಹೇಳಲಾರೆ.. ಅದನ್ನು ನೀವೇ ನೋಡಿ,ಏಕೆಂದರೆ ಇದು ಒಂಥರಾ ಚೆನ್ನಾಗಿದೆ,ಮಜವಾಗಿದೆ,ಅಲ್ಲಲ್ಲಿ ನಗು ಇದೆ,ಒಂದಷ್ಟು ಭಾವನೆಗಳಿವೆ.. ಒಟ್ಟಿನಲ್ಲಿ ಇದೊಂದು ಫೀಲ್ ಗುಡ್ ಮೂವಿ ಎಂದೇ ಹೇಳಬಹುದು. 


Pankaj Tripathi ಎಂಬ ನಟ ದಿನದಿಂದ ದಿನಕ್ಕೆ ಇಷ್ಟವಾಗುತ್ತಾ ಹೋಗುತ್ತಿದ್ದಾನೆ ಎಂದರೆ ಅದು ಅವನ  ಅಭಿನಯಕ್ಕೆ ಹಿಡಿದ ಕೈಗನ್ನಡಿಯೇ ಹೊರತು ಮತ್ತೇನೂ ಅಲ್ಲ. ಸ್ವಲ್ಪ ಕಾಮಿಡಿ ಸ್ವಲ್ಪ ಭಾವುಕತೆ ಎರಡನ್ನೂ ಇಲ್ಲಿ ಹದವಾಗಿ ಬೆರೆಸುವ ಪಂಕಜ್  ಎಂದಿನಂತೆ ಇಷ್ಟವಾಗುತ್ತನೆ. Kriti Sanon ಬಗ್ಗೆಯೂ ಹೇಳಬೇಕು.ಅವಳು ಇಲ್ಲಿ ಒಮ್ಮೊಮ್ಮೆ ಚಿಗರೆಯಾಗುತ್ತಾಳೆ.. ಹಾಗೇ ಜಿಗಿಯುತ್ತಾಳೆ.. ಸ್ವಲ್ಪ ನಲಿಯುತ್ತಾಳೆ.. ಹಾಗೇ ನುಲಿಯುತ್ತಾಳೆ,ನಡು ನಡುವೆ ನಗುತ್ತಾಳೆ..ಒಂದೆರಡು ಕ್ಷಣ ನೋಡುಗನನ್ನು ಹಾಗೇ ಅಳಿಸುತ್ತಾಳೆ ಕೂಡ!


ಇದು ಕಾಮಿಡಿ ಸಿನಿಮಾ ಆದರೂ... ಇಲ್ಲೊಂದು ದಿವ್ಯವಾದ ತಾಯಿತನದ ಕಥೆ ಇದೆ.ಹೆಣ್ಣುಮಕ್ಕಳಿಗೆ ಖಂಡಿತವಾಗಿಯೂ ಇದು ಇಷ್ಟವಾಗಬಹುದು.ಸಂಭಾಷಣೆ ಕೂಡ ಅಷ್ಟೇ ನವೀರಾಗಿದೆ..


ಮಿಮಿ ಒಮ್ಮೆ ಭಾನುಪ್ರತಾಪನ  ಬಳಿ ಕೇಳುತ್ತಾಳೆ... ನಿನಗೆ ಈ ಜಂಜಡದಿಂದ ಹೇಗೋ ತಪ್ಪಿಸಿಕೊಂಡು ಹೋಗಬಹುದು, ನಿನ್ನದೆನ್ನುವ ತಪ್ಪು ಕೂಡ ಇಲ್ಲಿ ಯಾವುದೂ ಇಲ್ಲ..ಆದರೆ ಏಕೆ ನೀನು ಓಡಿ ಹೋಗುತ್ತಿಲ್ಲ? 


ಭಾನು ಬಹಳ ಸುಂದರವಾಗಿ ಇದಕ್ಕೆ ಉತ್ತರಿಸುತ್ತಾನೆ.. "ಮಿಮಿ ಜೀ..ನಾನು ಕಾರ್ ಡ್ರೈವರ್. ನಾವು ಡ್ರೈವರ್ ಗಳು ಒಂದು ಪ್ರಿನ್ಸಿಪಲ್ ಅನ್ನು ಕಡ್ಡಾಯವಾಗಿ ಪಾಲಿಸುತ್ತೇವೆ.ಒಮ್ಮೆ ಪ್ರಯಾಣಿಕ ನಮ್ಮ ಗಾಡಿ ಹತ್ತಿದ ಮೇಲೆ ಅವನನ್ನು ಸುರಕ್ಷಿತವಾಗಿ ಅವನು ತಲುಪಬೇಕಾದ ಜಾಗ ನಾವು ತಲುಪಿಸಿಯೇ ಬಿಡುತ್ತವೆ. ರೋಡ್ ನಲ್ಲಿ ಹಂಪು, ಹಳ್ಳಗಳು ಸಾವಿರ ಬರುತ್ತದೆ.ಆದರೆ ನಮ್ಮ ನಿಯತ್ತು ಎಂದಿಗೂ ಬದಲಾಗುವುದಿಲ್ಲ.."


ಅದೇ ಮಿಮಿ ಡಾಕ್ಟರ್ ಗೂ ಒಂದು ಮಾತು ಹೇಳುತ್ತಾಳೆ.ಇದು ಮಾತ್ರ ಬಹಳಷ್ಟು ಕಾಡುವಂತಹದ್ದು ಅಷ್ಟೇ ಅರ್ಥಗರ್ಭಿತವಾದದ್ದು ಕೂಡ.ಮಿಮಿ ಹೇಳುತ್ತಾಳೆ.. " ಡಾಕ್ಟರ್.. ಮಗು ಹೊಟ್ಟೆಯೊಳಗೆ ಇದ್ದಾಗ ಕೂಡ ಜೀವಂತವಾಗಿಯೇ ಇರುತ್ತದೆ, ಅದು ಉಸಿರಾಡುತ್ತದೆ, ಕೆಲವೊಮ್ಮೆ ಕೊಸರಾಡುತ್ತದೆ,ಆಹಾರ ಕೂಡ ಸೇವಿಸುತ್ತದೆ.ಕೆಲವೊಮ್ಮೆ ಅನಿಸುತ್ತದೆ ಅದು ಒಳಗೆ ಇದ್ದುಕೊಂಡೇ ನನ್ನ ಮಾತುಗಳನ್ನು  ಕೂಡ ಹಾಗೇ ತನ್ಮಯತೆಯಿಂದ ಕೇಳಿಸಿಕೊಳ್ಳುತ್ತದೆ ಎಂದು,ಆದರೆ ಡಾಕ್ಟರ್.. ಅದೇ ಮಗುವನ್ನು ಹೊರಗೆ ಬಂದಾಗ ಕೊಂದರೆ ಈ ಸಮಾಜ ಅದಕ್ಕೆ ಕ್ರೈಮ್ ಅಂತ ಹೇಳುತ್ತದೆ.. ಅದೇ ಒಳಗಡೆ ನಾವುಗಳೇ ಕೊಂದು ಹಾಕಿ ಬಿಟ್ಟರೆ.. ಆವಾಗ ಅದು ಏಕೆ ಕ್ರೈಮ್ ಎಂದೆನಿಸುವುದಿಲ್ಲ?! ಮಗು.. ಮಗುವೇ ಅಲ್ಲವೇ.. ಹೊರಗಡೆ ಇರಲಿ..ಒಳಗಡೆಯೇ ಇರಲಿ..! "


ಕೇವಲ ತಾಯ್ತನ ಮಾತ್ರವಲ್ಲ ಇಲ್ಲಿ ಅಷ್ಟೇ ಗಮನ ಸೆಳೆಯುವುದು ಸಾಮಾನ್ಯ ಕುಟುಂಬವೊಂದು ಹೇಗೆ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ತಾನೂ ಕೂಡ ಸಮಸ್ಯೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು, ನಗುವನ್ನು ಅರಸುವತ್ತ ಮನಸ್ಸು ಮಾಡುತ್ತದೆ ಎನ್ನುವುದು.ಇದು ನಮ್ಮ ನಿಮ್ಮ ಹೆಚ್ಚಿನ ಮನೆಗಳ ಕಥೆ! 


Laxman Utekar ಇದನ್ನು ನಿರ್ದೇಶಿಸಿದ್ದಾರೆ. Kriti Sanon, Pankaj Tripathi, Sai Tamhankar ಮುಂತಾದವರ ಅಭಿನಯವಿದೆ. ಒಂದೆರಡು ಹಾಡು ನಿಮಗೂ ಇಷ್ಟವಾಗಬಹುದು ಇಷ್ಟವಾಗದೆಯೂ ಇರಬಹುದು ಆದರೆ ಪಂಕಜ್ ಈ ಮೂವಿಯಲ್ಲಿ ಕೂಡ ನೋಡುಗನಿಗೆ ಒಂಚೂರು ಮೋಸ ಮಾಡಿಲ್ಲ.ಎಂದಿನಂತೆ  ಇಷ್ಟವಾಗುತ್ತಾನೆ ಆತ...



#Mimi | Netflix 

Hindi Movie 

Comedy Drama 

Release - 26/07/2021


#Movies 

Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..