Perfume :The Story of a Murderer



ಸುವಾಸನೆ ಯಾರಿಗೆ ಇಷ್ಟವಿಲ್ಲ ಹೇಳಿ.ಚಿಕ್ಕವರಿಂದ ಹಿಡಿದು ದೊಡ್ಡವರಿಗೆ ಪರಿಮಳವೆಂದರೆ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಇಷ್ಟವೇ.


ಕೆಲವರಿಗಂತು ಅದು ಅತೀ ಅಗತ್ಯ ಎಂಬಂತಹ ಸರಕು.ಸೆಂಟ್ ಆಗಿ ಅಂದ ಚಂದದ ಬಾಟಲ್ ಗಳಲ್ಲಿ ಹಾಗೇ ತುಂಬಿ  ತುಳುಕಾಡಿ,ನಮ್ಮ ಮನೆ ಸೇರಿ ಇನ್ನೊಬ್ಬರ ಮನ ಗೆಲ್ಲಲು ನಮ್ಮ ಸುತ್ತ ಮುತ್ತ ಆಹ್ಲಾದಕರ ವಾತಾವರಣವನ್ನೇ ನಿರ್ಮಿಸುವ ಈ ಸೆಂಟ್ ಗಳ ಮೂಲ ಸುಗಂಧ ಭರಿತ ಹೂವುಗಳು,ಬೇರು,ನಾರು,ತೊಗಟೆ,ಜಿಡ್ಡು ಇತ್ಯಾದಿ ಇತ್ಯಾದಿ.ಸಸ್ಯ ಮೂಲದಿಂದ ಮಾತ್ರವಲ್ಲ ಪ್ರಾಣಿ ಮೂಲದಿಂದಲೂ ಸೆಂಟ್ ತಯಾರಿಸುತ್ತಾರೆ.ಆದರೆ ಯಾವತ್ತಾದರೂ ಮನುಷ್ಯನೇ ಘಮಘಮಿಸುವ ಸೆಂಟಿನ ಮೂಲವಾದರೆ ಆಂದರೆ ಮನುಷ್ಯನನ್ನೇ ಕೊಂದು ಅವನಿಂದ ಸೆಂಟ್ ಮಾಡಿ ಬಿಟ್ಟರೆ..?! 



ಅವನೊಬ್ಬ ಹುಡುಗ.ಅವನ ಬಡ ತಾಯಿ ಮೀನು ಮಾರುತ್ತಾಳೆ.ಹುಟ್ಟುವಾಗ ತಾಯಿ ಇದ್ದರೂ ಹುಟ್ಟಿದ ಕೂಡಲೇ ಅವನು ಅನಾಥ.ಹುಡುಗನಲ್ಲಿ ಮಾತು ಕಡಿಮೆ. ಆದರೂ ಅವನಿಗೊಂದು ವಿಶೇಷ ಶಕ್ತಿ ಇತ್ತು.ಅದುವೇ ಅವನ ಮೂಗು.ಆದರೆ ಅವನದ್ದು ಅಂದದ ಚಂದದ ಮೂಗು ಅಲ್ಲ. ಜಗತ್ತಿನ ಯಾವುದೇ ವಸ್ತುವಿನ ಪರಿಮಳವನ್ನು ಆಘ್ರಾಣಿಸುವ, ಅದರ ಮೂಲಕ ಆ ಪರಿಮಳವನ್ನು ಬಹುಕಾಲ ನೆನಪಿಟ್ಟುಕೊಳ್ಳುವ ಮತ್ತು ಪರಿಮಳದಿಂದಲೇ ವಸ್ತುವನ್ನಾಗಲಿ, ಮನುಷ್ಯರನ್ನಾಗಲಿ ಗುರುತು ಹಿಡಿದು ಬಿಡುವ ದೈವದತ್ತ ಕಲೆ ಅವನಿಗೆ ಹುಟ್ಟಿನಿಂದಲೇ ಲಭಿಸಿರುತ್ತದೆ.


ಅಂತಹ ಅವನು ಜಗತ್ತಿನ ಎಲ್ಲಾ ರೀತಿಯ ಸುಪ್ರಸಿದ್ಧವಾದ ಸುವಾಸಿತ ಸೆಂಟ್ ಗಳನ್ನು ಮಾಡಿದ ನಂತರ ಕೊನೆಗೊಂದು ತುಂಬಾ ವಿಭಿನ್ನವಾದ ಸೆಂಟ್ ಮಾಡಲು ಹೊರಡುತ್ತಾನೆ.ಅದುವೇ ಮನುಷ್ಯರ ಸೆಂಟ್!


12+1 ಒಟ್ಟು 13 ಜನರಿಂದ ಸುವಾಸನೆಯನ್ನು ತೆಗೆದು ಆ ನಂತರ ಅವೆಲ್ಲವನ್ನೂ ಒಟ್ಟು ಗೂಡಿಸಿ ಆ ಒಂದು ಚಮತ್ಕಾರಿ ಸೆಂಟ್ ಮಾಡಲು ಅವನು ಆಯ್ಕೆ ಮಾಡಿಕೊಳ್ಳುವುದು 12 ಸುಂದರ ಯುವತಿಯರು  ಹಾಗೂ ಇನ್ನೊಬ್ಬಳು ಅತೀ ಸುಂದರಿ ರಾಜಕುಮಾರಿ!


ಮೊದಲಿಗೆ ಲ್ಯಾವಂಡರ್ ಹೂ ಕೀಳುವ ಯುವತಿಯದ್ದೇ ಕೊಲೆ ನಡೆದು ಬಿಡುತ್ತದೆ !ನಂತರ ಒಂದರ ನಂತರ ಒಂದು ಹಾಗೇ ಸರಣಿ ಕೊಲೆಗಳು ಮುಂದುವರಿಯುತ್ತದೆ! ಆ ನಂತರ ಮುಂದೆನಾಗುತ್ತದೆ? ಮನುಷ್ಯರ ಆ ಅಧ್ಭುತ ಸೆಂಟ್ ತಯಾರಾಗಿ ಬಿಡುತ್ತದಾ!? 


Patrick Süskind ಅವರ 1985 ರ ನಾವೆಲ್ "Perfume" ಅನ್ನು ಆಧರಿಸಿ ಈ ಮೂವಿ ಮಾಡಲಾಗಿದೆ.ಈ ಚಂದದ ಮೂವಿಯಲ್ಲಿ Ben Whishaw ನದ್ದು ಬಹಳ ಸುಂದರ ಅಭಿನಯ.Tom Tykwer ಇದನ್ನು ನಿರ್ದೇಶಿಸಿದ್ದಾರೆ.ಬಹಳ ಹಿಂದೆಯೇ ಬಂದಂತಹ ಈ ಮೂವಿಯ ಕಥೆ ಫ್ರಾನ್ಸ್ ನಲ್ಲಿ ನಡೆಯುತ್ತದೆ.ನೋಡಿರದಿದ್ದರೆ ನೋಡಿ ವಿಭಿನ್ನವಾಗಿ ಒಂಥರಾ ಚೆನ್ನಾಗಿದೆ ಇದು. 


#Perfume:The Story of a Murderer | Airtel Xstream

English Movie 

Psychological Thriller

Year - 2006 


#Movies

Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..