RAY




ಇದು ಸಿರೀಸ್ ಗಿಂತಲೂ ಹೆಚ್ಚಾಗಿ ದೃಶ್ಯ ರೂಪದ ಕಥಾ ಸಂಕಲನವಾಗಿದೆ.ಸದ್ಯಕ್ಕೆ ಇದರಲ್ಲಿ ನಾಲ್ಕು ಎಪಿಸೋಡ್ ಗಳಿದ್ದು ಪ್ರತೀ ಎಪಿಸೋಡ್ ನಲ್ಲಿಯೂ ನಾಲ್ಕು ಬೇರೆ ಬೇರೆಯೇ ಕಥೆಗಳಿವೆ. 


Satyajit Ray ಅವರ ಕಥೆಗಳಿಂದ ಪ್ರೇರಿತವಾಗಿ ಈಗಿನ ಕಾಲಮಾನಕ್ಕೆ ತಕ್ಕಂತೆ ಇದರ ಕಥೆಗಳನ್ನು ಹೆಣೆಯಲಾಗಿದೆ.ನಾನಂತು Satyajit Ray ಅವರ ಕಥೆಗಳನ್ನು ಓದಿಲ್ಲ ಹಾಗಾಗಿ ಮೂಲ ಕಥೆಯೊಂದಿಗೆ ಹೋಲಿಕೆ ಮಾಡಿ ನೋಡಲು ಸಾಧ್ಯವಾಗದು.ಆದರೆ ಲೇಖಕರ ಓರಿಜಿನಲ್ ಕಥೆ ಓದಿರುವವರ ಪ್ರಕಾರ ಸತ್ಯಜಿತ್ ರೇ ಅವರ ಆ ಎಲ್ಲಾ ಕಥೆಗಳು ಕ್ಲಾಸಿಕ್ ಕಥೆಗಳು ಆಗಿದ್ದು,ಅಲ್ಲಿ ಇಲ್ಲದನ್ನು ಇಲ್ಲಿ ಯಥೇಚ್ಛವಾಗಿ ತುರುಕಿಸಿ ಮೂಲ ಕಥೆಗಳಿಗೆ ಸರಿಯಾದ ನ್ಯಾಯವನ್ನೇ ಒದಗಿಸಿಲ್ಲ,ಒಂದು ರೀತಿಯಲ್ಲಿ ಇದು ಸತ್ಯಜಿತ್ ರೇ ಅವರಿಗೆ ಮಾಡಿದ ಅವಮಾನ ಎಂದೇ ಹೇಳಲಾಗುತ್ತಿದೆ.ಅದೇ ರೀತಿ ಇನ್ನು ಕೆಲವರ ಪ್ರಕಾರ ಇದೊಂದು ಅತ್ಯಧ್ಭುತ ಭಾರತೀಯ Anthology ಸಿರೀಸ್ ಆಗಿದೆ.


ನಿಜ ಹೇಳಬೇಕೆಂದರೆ ಇದೊಂದು Anthology ಅನ್ನುವುದೇ  ನನಗೆ ಗೊತ್ತಿರಲಿಲ್ಲ.ಟ್ರೈಲರ್ ನೋಡಿ Manoj Bajpayee, Kay Kay Menon, Ali Fazal, Gajraj Rao ನಂತಹ ಅತ್ಯುತ್ತಮ ನಟರು ಒಂದೇ ಸಿರೀಸ್ ನಲ್ಲಿ ಒಂದೇ ಕಥೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದೇ ತಿಳಿದು ಥ್ರಿಲ್ ಆಗಿ ಹೋಗಿದ್ದೆ ನಾನು. ಹಾಗಾಗಿ ಸಿರೀಸ್ ಹೇಗೆ ಬರಬಹುದು ಎಂಬ ಭಯಂಕರ ಕುತೂಹಲ ಇತ್ತು.ಆದರೆ ಸಿರೀಸ್ ನೋಡಿದ ಮೇಲೆ ಇಲ್ಲಿರುವ ಕಥೆ ಒಂದೇ ಕಥೆ ಆಗಿರದೇ,ನಾಲ್ಕು ಕಥೆಗಳು ಬೇರೆ ಬೇರೆಯ ಕಥೆಗಳಾಗಿದ್ದರೂ ಸಹ,ಈ ಮೇಲಿನ ನಾಲ್ಕೂ ಜನ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿ ಕಥೆಯಲ್ಲಿ ತುಂಬಾನೇ ಇಷ್ಟವಾಗಿ ಬಿಟ್ಟರು. 



ಮೊದಲನೆಯ ಕಥೆ "#Forget_Me_Not". ಇದನ್ನು ಸತ್ಯಜಿತ್ ರೇ ಅವರ 'Bipin Chowdhury'r Smritibhrom' ಸಣ್ಣ ಕಥೆಯನ್ನು ಆಧಾರಿಸಿ ಪ್ರಸ್ತುತ ಪಡಿಸಲಾಗಿದೆ.ಒಂಥರಾ ದೃಶ್ಯಂ - 1 ಕಥೆಯಂತೆ ಇದ್ದು,ಮೊದಲಿನಿಂದಲೇ ಗೊಂದಲ ಹುಟ್ಟಿಸುತ್ತಾ ಸಾಗುತ್ತದೆ.ಅಂದ ಹಾಗೇ ಇದು ರಿವೇಂಜ್ ನ ಕಥೆ.ಈ ಕಥೆ ಇಷ್ಟವಾಯಿತು. ಎಲ್ಲರ ಅಭಿನಯವೂ ಚೆನ್ನಾಗಿತ್ತು. 



ಎರಡನೆಯ ಕಥೆ "#Bahrupiya".ಇದು ಸತ್ಯಜಿತ್ ರೇ ಅವರ 'Bahurupi 'ಯಿಂದ ಆಯ್ದುಕೊಳ್ಳಲಾಗಿದೆ.Kay Kay Menon ಎಂಬ ದೈತ್ಯನ ನಟನ ಮಾತುಗಳಿಗೆ ಕಡಿವಾಣ ಹಾಕಿ ಮೇಕಪ್ ಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ ಇಲ್ಲಿ! ವಿಧಿಯನ್ನು ಬದಲಿಸ ಬಲ್ಲೆ ಎಂಬ ಮನಸ್ಥಿತಿಯ ಕಥೆ ಇದು.ಕಥೆ ಚೆನ್ನಾಗಿದೆ.Kay Kay  Menon ನ ಅಭಿನಯವೂ ಚೆನ್ನಾಗಿದೆ.ಇದೂ ಕೂಡ ಇಷ್ಟವಾಯಿತು.ಆದರೆ ನನಗೆ Kay Kay Menon ನ ಮಾತುಗಳು ಬಹಳಷ್ಟು ಬೇಕಿತ್ತು. 



ಮೂರನೆಯ ಕಥೆ " #Hungama_Hai_Kyon_Barpa ". ಇದನ್ನು ಸತ್ಯಜಿತ್ ರೇ ಅವರ 'Barin Bhowmik-er Byaram' ನಿಂದ ತೆಗೆದುಕೊಳ್ಳಲಾಗಿದೆ. ಒಬ್ಬ ಗಜಲ್ ಗಾಯಕ ಹಾಗೂ ಒಬ್ಬ ಹಳೆಯ ಕುಸ್ತಿಪಟು ಟ್ರೈನ್ ಒಂದರಲ್ಲಿ ಪ್ರಯಾಣಿಸುವಾಗಿನ ಕಥೆ ಇದು.ಇಲ್ಲಿ ಇಬ್ಬರೂ ಕಳ್ಳರೇ ಆದರೆ ಆ ಮಜವಾದ ಕಥೆ ಇಲ್ಲಿ ಹೇಳಲಾರೆ. Manoj Bajpayee ಹಾಗೂ Gajraj Rao ಅಭಿನಯವಂತು ಬಹಳನೇ ಸೊಗಸಾಗಿದೆ ಹಾಗೂ ಅಷ್ಟೇ ಕಚಗುಳಿ ಇಡುತ್ತದೆ.ನನಗೆ ಎಲ್ಲಕ್ಕಿಂತ ಇಷ್ಟವಾಗಿದ್ದು ಇದೇ ಕಥೆ. 


ನಾಲ್ಕನೆಯ ಕಥೆ " #Spotlight ". ಇದನ್ನು ಸತ್ಯಜಿತ್ ರೇ ಅವರ ಇದೇ ಹೆಸರಿನ ಕಥೆಯನ್ನೇ ಆಧಾರಿಸಿ ಮಾಡಲಾಗಿದೆ.ತನ್ನ ಲುಕ್ ನಿಂದಲೇ ಖ್ಯಾತಿ ಆಗಿರುವ ಒಬ್ಬ ಸಿನಿಮಾ ನಟ ಹಾಗೂ ಡೋಂಗಿ ಸಂನ್ಯಾಸಿನಿಯ ಕುರಿತಾಗಿ ಇರುವ ಕಥೆ ಇದು.ಇರುವ ನಾಲ್ಕರಲ್ಲಿ ಚೆನ್ನಾಗಿಲ್ಲದೇ ಇರುವುದು ಇದೊಂದೇ.ಅಭಿನಯ ಕೂಡ ತಕ್ಕ ಮಟ್ಟಿಗೆ ಇದ್ದು ತೆಗೆದುಕೊಂಡ ಸಬ್ಜೆಕ್ಟ್ ಕೂಡ ಅಷ್ಟೆನೂ ಹಿತವೆನಿಸಲಿಲ್ಲ.ನಮ್ಮ ಸಾಧು ಪರಂಪರೆ ಬಹಳ  ದೊಡ್ಡದು.ಒಳ್ಳೆಯದೆನಿಸುವಂತಹದ್ದು ಈ ಪರಂಪರೆಯಲ್ಲಿ ಬೇಕಾದಷ್ಟು ಇದೆ.ಆದರೆ ಪ್ರತೀ ಬಾರಿಯೂ ಕೇವಲ ಗೇಲಿ ಮಾಡುವುದಕ್ಕಾಗಿಯೇ ಆ ಪರಂಪರೆಯನ್ನು ದೃಶ್ಯ ಮಾಧ್ಯಮಗಳು ಬಳಸಿಕೊಳ್ಳುವ ರೀತಿ ಮಾತ್ರ ಸಹ್ಯ ಎನಿಸುವುದಿಲ್ಲ! 


ಕೊನೆಯ ಕಥೆ ಒಂದು ಬಿಟ್ಟರೆ ಬಾಕಿ ಮೂರು ಕಥೆಗಳು ಒಂದೊಳ್ಳೆಯ ಮ್ಯಾಜಿಕ್ ಲೋಕವನ್ನೇ ತೆರೆದಿಡುತ್ತದೆ.ಕಥೆಗಳನ್ನು ಇಷ್ಟಪಟ್ಟು ಓದುವವರಿಗೆ ಇದೊಂತರಹದ ಕಥಾ ಸಂಕಲನವನ್ನು  ಓದುವ ಹಾಗೂ ಅದರ ಒಟ್ಟಿಗೆ ಒಳ ಹೋಗಿ ಎಲ್ಲವನ್ನೂ ಹತ್ತಿರದಿಂದ ನೋಡುವ ಅನುಭವವನ್ನು ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ.ಯಾವುದಾರೊಂದು ಕಥೆಯಲ್ಲಿ Pankaj Tripathi ಎಂಬ ದೈತ್ಯ ನಟನಿಗೂ ಒಂದು Slot ಇರಬೇಕಿತ್ತು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.. ನೋಡಿರದಿದ್ದರೆ ನೋಡಿ #Ray. 





#RAY | Netflix

Hindi Series 

Anthology Mini Web Series

Year - 2021 


#Series 

Ab Pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..