Anveshanam




ಪುಟ್ಟ ಮಗುವೊಂದು ರಾತ್ರಿಯ ವೇಳೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯೊಂದಕ್ಕೆ ದಾಖಲಾಗುತ್ತದೆ.


ಮನೆಯ ಮೆಟ್ಟಿಲಿನಿಂದ ಕೆಳಗೆ ಜಾರಿ ಬಿದ್ದು ತಲೆಗೆ  ಏಟಾಗಿರುವುದೇ ಇದಕ್ಕೆ ಕಾರಣ.


ಆದರೆ ಪೋಲಿಸರಿಗೆ ಬಂದ ಒಂದು ಅಪರಿಚಿತ ಕಾಲ್  ಬೇರೆಯೇ ಕಥೆ ಹೇಳಿ ಬಿಡುತ್ತದೆ.ಇದು ಜಾರಿ ಬಿದ್ದು ಆದ ಅಪಘಾತವಲ್ಲ,ಬದಲಿಗೆ ಮಗುವಿನ ಮೇಲೆ ದೌರ್ಜನ್ಯ ಎಸಗಲಾಗಿದೆ.. ಎಂಬುದೇ ಆ ಕಥೆ. 


ಏನೋ ಒಂದು ಅರ್ಧ ಗಂಟೆಯ ವಿಚಾರಣೆ ಮಾಡಿ,ಬೇಗ  ಹಿಂದಿರುಗಬಹುದೆಂದು ಪೋಲಿಸ್ ಟೀಮ್ ಕೂಡ ಆ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡುತ್ತದೆ.


ಆದರೆ ಕಥೆ ಅಷ್ಟು ಬೇಗನೆ ಮುಗಿಯುವುದಿಲ್ಲ,


ಬದಲಿಗೆ ಉದ್ದಕ್ಕೆ ಬೆಳೆಯುತ್ತದೆ. 


ಚಿಕಿತ್ಸೆ ಫಲಕಾರಿಯಾಗದೆ ಮಗು ಆಸ್ಪತ್ರೆಯಲ್ಲಿಯೇ ಸತ್ತು ಬಿಡುತ್ತದೆ! 


ಪೋಲಿಸರಿಗೆ ಅನುಮಾನ ಹೆಚ್ಚಾಗುತ್ತದೆ.


ತನಿಖೆ ಶುರುವಾಗುತ್ತದೆ.


ಎಲ್ಲರ ಹೇಳಿಕೆಯನ್ನೂ ಪಡೆಯಲಾಗುತ್ತದೆ. 


ಮಗುವಿನ ತಂದೆ ಮಾರ್ಮಿಕವಾಗಿ ತನ್ನದೊಂದು ಹೇಳಿಕೆಯಲ್ಲಿ ಈ ರೀತಿ ಬರೆದುಕೊಳ್ಳುತ್ತಾನೆ " ಮಗು ಒಂದು ಹುಟ್ಟಿದ ಕೂಡಲೇ ಆ ಕ್ಷಣವೇ ತಂದೆ ಹಾಗೂ ತಾಯಿ ಕೂಡ ಈ ಲೋಕದಲ್ಲಿ ಹುಟ್ಟಿ ಬಿಡುತ್ತಾರೆ.ನನ್ನ ಮಗ ಈಗ ಕೆಲವು ಕ್ಷಣಗಳ ಹಿಂದೆಯೇ ಸತ್ತು ಹೋದ.ಹಾಗಾಗಿ ಅವನ ಜೊತೆಯಲ್ಲಿಯೇ ನಾನೂ ಕೂಡ ಎಲ್ಲೋ ಒಂದು ಕಡೆ ಸತ್ತು ಹೋದೆ.ನನ್ನ ಮಗುವಿನ ಸಾವಿಗೆ ನಾನೇ ಕಾರಣ,ಕೇವಲ ನಾನೊಬ್ಬನೇ ಕಾರಣ..! " ಎಂದು ಬರೆದು ಬಿಡುತ್ತಾನೆ. 


ಆದರೆ ಈ ಹೇಳಿಕೆ ಎಷ್ಟು ನಿಜ?!! 


Prasobh Vijayan ಇದನ್ನು ನಿರ್ದೇಶಿಸಿದ್ದು Jayasurya, Shruti Ramachandran,Vijay Babu,Lal,Lena Kumar, Leona Lishoy ಮುಂತಾದವರ ಅಭಿನಯವಿದೆ. 


#Anveshanam | Prime 

Malayalam Movie 

Mystery Thriller 

Release - 2020 


#Movies 

Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..