ರೋಷಾಗ್ನಿ ಜ್ವಾಲೆ ಉರಿದುರಿದು..
ಅದೇ ಹೇಳ್ಲಿಕ್ಕೆ ಎಂತ ಸ ಇಲ್ಲ.
ವಿಷಯ ಎಲ್ಲರಿಗೂ ಗೊತ್ತಿರುವಂತಹದ್ದೇ.
ನಮ್ಮವರು ಹಿಂದೆ ಉಳಿದಿದ್ದಾರೆ,ಅವರು ಮಾತ್ರ ನಮ್ಮನ್ನು ಬಿಟ್ಟು ಬಹಳಷ್ಟು ಮುಂದೆ ಓಡಿ ಹೋಗಿದ್ದಾರೆ.
ಆದರೆ ನಾವು ಬಿಡುವುದಿಲ್ಲ.
ಸಾಧಿಸಿ ತೋರಿಸುತ್ತೇವೆ.
ಆಂಗ್ಲರಿಗೆ ನೀರು ಕುಡಿಸುತ್ತೇವೆ ಹಾಗೂ ಅವರನ್ನು ಬಗ್ಗು ಬಡಿದು ಮಣ್ಣು ಸ ಮುಕ್ಕಿಸುತ್ತೇವೆ... ಅನ್ನತಕ್ಕಂತಹ ಏನು ಈ ಒಂದು ಬೆಚ್ಚದ ಮನದ ಮಾತಿನೊಂದಿಗೆ ಇವತ್ತಿದ್ದು ಟಾಪಿಕ್ ನಾವು ರಪ್ಪ ಅಂತ ಇಲ್ಲಿಗೆ ವೈಂಡ್ ಅಫ್ ಮಾಡಿ ಬಿಡುತ್ತಿದ್ದೇವೆ.
ಕೊನೆಯ ಒಂದು ಹನಿ ಮುತ್ತು...ನಮ್ಮ ಈ ಏನು ಒಂದು ಹೋರಾಟ ಅದು ಇಲ್ಲಿಗೆ ನಿಲ್ಲುವುದಿಲ್ಲ.ಬ್ಯಾಟಿಂಗ್ ನಮ್ಗೆ ಸ ಬರ್ತದೆ.ನೆಕ್ಸ್ಟ್ ನಮ್ಗೆ ಸ ಅದು ಸಿಕ್ತದೆ.ನಮ್ಮ ಸರದಿ ಬಂದಾಗ ನಮ್ಮವರು ಸಹ ಮ್ಯಾಜಿಕ್ ಹಾಗೂ ಜಾದು ಎರಡನ್ನೂ ಮಾಡಿ ನಿಮ್ಮನ್ನೆಲ್ಲಾ ಖಂಡಿತವಾಗಿಯೂ ಬೆಚ್ಚಿ ಬೀಳಿಸುತ್ತಾರೆ ಹಾಗೂ ಎದುರಾಳಿಯನ್ನು ಚಕಿತಗೊಳಿಸುತ್ತಾರೆ.ಯಾರೂ ಕೂಡ ಆಕ್ರೋಶಗೊಳದ್ದೇ ಶಾಂತಚಿತ್ತರಾಗಿ ಸಂಯಮ ಹಾಗೂ ಸಹನೆಯಿಂದ ಮ್ಯಾಚ್ ನೋಡುವುದರಿಂದ ರಕ್ತದೊತ್ತಡವನ್ನು ಕಂಟ್ರೋಲ್ ಮಾಡಬಹುದು.ತಾಜಾ ಸೊಪ್ಪು ತರಕಾರಿ ಹಾಗೂ ಪ್ರೆಶ್ಶು ಹಣ್ಣು ಹಂಪಲುಗಳ ಸೇವನೆಯಿಂದ ಕೂಡ ಅಧಿಕ ರಕ್ತದೊತ್ತಡವನ್ನು ಸಾಕಷ್ಟು ನಿಯಂತ್ರಿಸಬಹುದಂತೆ.ನಾಳೆ ಸಿಗೋಣ.ಮಿರಾಕುಳ್ ಸಂಭವಿಸಲಿ....
ಅರ್ಧಶತಕ ಸಿಡಿಸಿದ ರಾರಿ ಬರ್ನ್ಸ್ ಅವರಿಗೆ ಅಭಿನಂದನೆಗಳು, ಅರ್ಧಶತಕ ಹೊಡೆದ ಹಸೀಬ್ ಹಮೀದ್ ಅವರಿಗೆ ಅಭಿನಂದನೆಗಳು, ಅರ್ಧಶತಕ ಬಾರಿಸಿದ ಡೇವಿಡ್ ಮಲನ್ ಅವರಿಗೆ ಅಭಿನಂದನೆಗಳು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಈ ಸಿರೀಸ್ ನಲ್ಲಿ ಸತತ ಮೂರು ಶತಕ ಗಳಿಸಿದ ಸನ್ಮಾನ್ಯ ಜೋ ರೂಟ್ ಅವರಿಗೊಂದು ವಿಶೇಷ ಅಭಿನಂದನೆಗಳು.
ಸದ್ಯಕ್ಕೆ ಆಂಗ್ಲರ ಮುನ್ನಡೆ..345!
ಇಲ್ಲೊಂದು ವಿಷಯ ನಾವು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮವರಿಗೆ ಎಷ್ಟೊಂದು ಬ್ಯಾಟಿಂಗ್ ಮಾಡಬಹುದು ಅಂದರೆ ಅದಕ್ಕೆ ಎಲ್ಲೆಯೇ ಇಲ್ಲ.ಅಷ್ಟೊಂದು ವಿಪುಲ ಅವಕಾಶ ಸದ್ಯಕ್ಕೆ ನಮ್ಮ ಮುಂದಿದೆ.ವೈಯಕ್ತಿಕವಾಗಿ ಎಷ್ಟು ರನ್ ಸ ನಮ್ಮ ಬ್ಯಾಟ್ಸ್‌ಮನ್ ಗಳು ಗಳಿಸಬಹುದು ಅಂದರೆ ಡಬಲ್ ಸೆಂಚುರಿ,ಟ್ರಿಪಲ್ ಸೆಂಚುರಿ ಮಾತ್ರವಲ್ಲ ಸಮಯವಿದ್ದರೆ ಒಂದು ನಾಲ್ನೂರು ಕೂಡ ಹಾಗೇ ಹೊಡೆದು ಬಿಸಾಕಿ ಬಿಡಬಹುದು. ಇದೊಂದು ಸುವರ್ಣಾವಕಾಶ.ಯಾರಿಗುಂಟು ಯಾರಿಗಿಲ್ಲ.ಬಾರಿಸುವ ಎಲ್ಲರಿಗೂ ಉಂಟು ಆ ಒಂದು ಅವಕಾಶ.ಇದನ್ನು ನಾವು ಕ್ಷಣ ಕ್ಷಣವೂ ಮರೆಯಬಾರದು.ಜೀವನದಲ್ಲಿ ಮತ್ತು ಆಟದಲ್ಲಿ ಯಾವತ್ತೂ ನಾವು ಆಶಾವಾದಿಯಾಗಿರಬೇಕು.
ಹಾಗಾಗಿ ಅಯ್ಯೋ ಈ ರೀತಿ ಆಯಿತಲ್ಲಾ ಎಂದು ತೀವ್ರವಾಗಿ ನೊಂದು ಬೆಂದು ಹತಾಶರಾಗಬೇಡಿ,ಇನ್ನೂ ಮೂರು ದಿನ ಮ್ಯಾಚ್ ನೋಡಲು ಮರೆಯದಿರಿ,ಮರೆತು ನಿರಾಶರಾಗದಿರಿ..ಮುಂದೈತ್ತೆ ಹಬ್ಬ.. ಫೆಸ್ಟಿವಲ್ & ಜಾತ್ರೆ.
ಹೋಪು ಇರಲಿ..
ವಿ ವಿಲ್ ಬೌನ್ಸ್ ಬ್ಯಾಕ್..🤘
Day_2 : Stumps
India 1st Innings - 78/10
England 1st Innings - 423/8
Ind Vs England
3rd Test - Headingley - Leeds.
#WTC_S02E01_03_2021_23
Ab pacchu
Comments
Post a Comment