ಪರೇಡ್
3T_D4 ಪರೇಡ್..!
ಸಂಡೆಯ ದಿನವೂ ಮ್ಯಾಚ್ ನೋಡಬಹುದು ಎಂದು ಇನ್ನಿಲ್ಲದಂತೆ ಕನಸು ಕಂಡಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹೆಡಿಂಗ್ಲಿಯಲ್ಲಿ ಇಂದು ಕಂಡು ಬಂದಿದ್ದು ಕೇವಲ ನಮ್ಮ ಬ್ಯಾಟ್ಸ್‌ಮನ್ ಗಳ ಪೆವಿಲಿಯನ್ ಪರೇಡು ಅಷ್ಟೇ!
ಒಬ್ಬರ ನಂತರ ಒಬ್ಬರು ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಗಳು ಹೇಗೆ ಪೆವಿಲಿಯನ್ ಸೇರಿಕೊಂಡರು ಅಂದರೆ ಮೊದಲ ಸೆಷನ್ ಹೆಚ್ಚು ಕಡಿಮೆ ಹೈಲೈಟ್ಸ್ ನೋಡಿದ ಫೀಲಿಂಗ್ ಅನ್ನೇ ಕೊಟ್ಟು ಬಿಟ್ಟಿತ್ತು.
ನಿಜಕ್ಕೂ ತುಂಬಾನೇ ನಿರಾಶಾಧಾಯಕ ಪ್ರದರ್ಶನ ಇವತ್ತಿನದ್ದು.
ನಿನ್ನೆಯ ನಮ್ಮವರ ಆ ಒಂದು ರೆಸಿಸ್ಟೆನ್ಸ್ ಎಲ್ಲಿ,ಇವತ್ತಿನ ಪರದಾಟ,ಪೇಚಾಟ ಎಲ್ಲಿ.
ನಿನ್ನೆ ನಾವು ಇಡೀ ದಿನ ಕಳೆದುಕೊಂಡದ್ದೇ ಎರಡು ವಿಕೆಟ್.
ಆದರೆ ಇವತ್ತಿನ ಕಥೆ ಮಾತ್ರ ಬೇರೆಯೇ ಇತ್ತು.
ಇಂತಹದ್ದೊಂದು ಪತನಕ್ಕೆ ಮೊದಲು ಮಹೂರ್ತ ಬರೆದದ್ದೇ ನಮ್ಮ ಚೇತೆಶ್ವರ್ ಪೂಜಾರ.
ರಾಬಿನ್ಸನ್ ಬೌಲಿಂಗ್ ನಲ್ಲಿ ಅವನು ಮೊದಲು ಎಲ್.ಬಿ.ಡಬ್ಲ್ಯು ಔಟಾಗಿ ಬಿಟ್ಟ.
ಕೆಲವರಿಗೆ ಈ ಚೇತೆಶ್ವರ್ ಪೂಜಾರ ಎಲ್. ಬಿ.ಡಬ್ಲ್ಯು ಔಟಾದ ರೀತಿಯ ಬಗ್ಗೆಯೂ ಒಂದಷ್ಟು ಗೊಂದಲಗಳಿದ್ದವು.
ಆದರೆ ಕ್ರಿಕೆಟ್ ನಿಯಮದ ಪ್ರಕಾರ ಅದು ಔಟೇ ಆಗಿದೆ.
ಯಾವ ಬ್ಯಾಟ್ಸ್‌ಮನ್ ಔಟ್ ಸೈಡ್ ದಿ ಆಫ್ ಸ್ಟಂಪ್ ಬೀಳುವ ಬಾಲನ್ನು ಆಡದೆ ಇದ್ದರೆ ಕ್ರಿಕೆಟ್ ಬಾಷೆಯಲ್ಲಿಯೇ ಹೇಳಬೇಕಾದರೆ "not offering shot" ಕಾರಣದಿಂದಾಗಿ ಅವನದ್ದೊಂದು ಪ್ಯಾಡ್ ಗೆ ಬಾಲ್ ಬಡಿದರೆ,ಆಗ ಯಾವುದೇ ಕಾರಣಕ್ಕೂ impact ನೋಡಬೇಕಾಗಿಯೇ ಇಲ್ಲ.ಕೇವಲ ಬಾಲ್ ಹೋಗಿ ಸ್ಟಂಪ್ ಗೆ ಬಡಿದರೂ ಸಾಕು ಅದು ಆಗ ಔಟೇ.ಇಂತಹ ಸಂಧರ್ಭದಲ್ಲಿ Wicket Zone ಗೆ ಬಾಲ್ 50% ಬಾಲ್ ಬಡಿಯಲೇಬೇಕು ಎಂಬ ನಿಯಮ ಕೂಡ ಇಲ್ಲ. ಜಸ್ಟ್ ಆಫ್ ಸ್ಟಂಪ್ ಗೆ ಬಾಲ್ ಬಡಿದರೂ ಆಯಿತು.ಆಗ ಅದು ಔಟ್.
ಒಂದು ವೇಳೆ ಬ್ಯಾಟ್ಸ್‌ಮನ್ ಏನಾದರೊಂದು ಶಾಟ್ ಹೊಡೆಯಲು ಮುಂದಾಗಿದ್ದರೆ ಆವಾಗ Imapct ಕಡ್ಡಾಯವಾಗಿ ಲೈನಿನಲ್ಲೇ ಇರಬೇಕು ಮಾತ್ರವಲ್ಲ ಎಂದಿನ ಎಲ್.ಬಿ.ಡಬ್ಲ್ಯು ನಿಯಮದಂತೆ ಬಾಲ್ 50% Wicket Zone ಗೆ ಬಡಿಯಲೇ ಬೇಕು. ಇದರ ಬಗ್ಗೆ ಸ್ಪಷ್ಟತೆ ಬೇಕಿದ್ದರೆ ನೀವು ಕಳೆದ ಬಾರಿ ಆಂಗ್ಲರು ಭಾರತಕ್ಕೆ ಪ್ರವಾಸ ಮಾಡಿದ್ದಾಗ ಆಗ ಜೋ ರೂಟ್, ಮತ್ತು ರೋಹಿತ್ ಶರ್ಮ ಇದೇ ರೀತಿ ಪರಿಸ್ಥಿತಿಯನ್ನು ಎದುರಿಸಿದ್ದು ಒಮ್ಮೆ ನೆನಪು ಮಾಡಿಕೊಳ್ಳಬೇಕು.ಒಂದಕ್ಕೊಂದು ಹೋಲಿಸಿಕೊಂಡು ನೋಡಿದರೆ ಒಂದಷ್ಟು ಸ್ಪಷ್ಟತೆ ಖಂಡಿತವಾಗಿಯೂ ಸಿಗುತ್ತದೆ.
ಅಲ್ಲೂ ಔಟ್ ಸೈಡ್ ದಿ ಆಫ್ ಸ್ಟಂಪ್ ಬಾಲ್ ಬಿದ್ದಿತ್ತು. ಅಷ್ಟು ಮಾತ್ರವಲ್ಲ ರಿವ್ಯೂ ನಲ್ಲಿ ಬಾಲ್ ಹೋಗಿ ನೇರವಾಗಿ ಮಿಡಲ್ ಸ್ಟಂಪ್ ಗೆ ಕೂಡ ಬಡಿದಿತ್ತು.ಆದರೆ ಅಂಪೈರ್ ಔಟ್ ಕೊಡಲಿಲ್ಲ. ಕಾರಣ ಇಷ್ಟೇ.ಅವರಿಬ್ಬರೂ ಅಂಪೈರ್ ಪ್ರಕಾರ ಶಾಟ್ ಆಫರ್ ಮಾಡಿದ್ದರು.ಹಾಗಾಗಿ Impact ನೋಡುವಾಗ ಅದು ಲೈನಿನಲ್ಲಿ ಇರಲಿಲ್ಲ.ಆ ರೀತಿಯಾಗಿ ಅವರು ಅಲ್ಲಿ ಔಟಾಗಿರಲಿಲ್ಲ.ಆದರೆ ಇಲ್ಲಿ ಶಾಟ್ ಆಫರ್ ಮಾಡದ ಪೂಜಾರ ಔಟ್ ಆಗಿ ಬಿಟ್ಟ.(LBW ಬಗ್ಗೆ ಹೆಚ್ಚಿನ ಮಾಹಿತಿ ಬರಹದ ಕೊನೆಯಲ್ಲಿರುವ ಲಿಂಕ್ ನಲ್ಲಿ ಇದೆ)
ಪೂಜಾರ ನಂತರ ಅರ್ಧಶತಕ ಗಳಿಸಿದ ಕೊಹ್ಲಿ ಕೂಡ ಔಟಾಗಿ ಬಿಟ್ಟ. ನಂತರ ರಹಾನೆ, ಪಂತ್ ಹೀಗೆ ಒಬ್ಬರ ನಂತರ ಒಬ್ಬರು ಅರ್ಜೆಂಟ್ ಅಲ್ಲಿ ಆಟವಾಡಲು ಬಂದಂತೆ ಔಟಾಗುತ್ತಲೇ ಹೋದರು.ಬಾಲಗೋಂಚಿಗಳು ಕೂಡ ಬಹಳ ಸುಲಭವಾಗಿ ವಿಕೆಟ್ ಒಪ್ಪಿಸುತ್ತಲೇ ಹೋದರು.
ಕೊನೆಗೊಮ್ಮೆ ಆಲ್ ಔಟ್ ಆಗುವಾಗ ಟೀಮ್ ಇಂಡಿಯಾ 278 ರನ್ ಗಳಿಸಿತ್ತು.ಈ ರೀತಿಯಾಗಿ ಮೊದಲ ಸೆಷನ್ ನಲ್ಲಿಯೇ ಇವತ್ತಿನ ನಮ್ಮದೊಂದು ಆಟ, ಹೋರಾಟ ಮುಗಿದು ಹೋಗಿತ್ತು.
ಇನ್ನಿಂಗ್ಸ್ ಹಾಗೂ 76 ರನ್ನುಗಳಿಂದ ಆಂಗ್ಲರು ಈ ಪಂದ್ಯ ಗೆದ್ದುಕೊಂಡು ಸರಣಿಯನ್ನು ಈಗ 1-1 ರಿಂದ ಸಮಬಲ ಮಾಡಿಕೊಂಡಿದ್ದಾರೆ.
ಅವರ ಇಂದಿನ ಬೌಲಿಂಗ್ ಗೆ ಒಂದು ಅಭಿನಂದನೆ ಹೇಳಲೇಬೇಕು. ಒಂದು ಸೆಷನ್ ನಲ್ಲಿಯೇ 8 ವಿಕೆಟ್ಗಳು!
ರಾಬಿನ್ಸನ್ ಗೆ 5 ವಿಕೆಟ್ ಗಳ ಗೊಂಚಲು ಸಿಕ್ಕರೆ, ಕ್ರೇಗ್ ಓವರ್ಟನ್ ಗೆ 3, ಮೋಯಿನ್ ಅಲಿ ಮತ್ತು ಆಂಡರ್ಸನ್ ಒಂದೊಂದು ವಿಕೆಟ್ ಕಬಳಿಸಿ ಮಿಂಚಿದರು. ಅರ್ಹವಾಗಿಯೇ ಈ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿದ ರಾಬಿನ್ಸನ್ ಪಂದ್ಯಶ್ರೇಷ್ಠ ದಿಂದ ಪುರಸ್ಕೃತನಾದ.
ಖಂಡಿತವಾಗಿಯೂ ಒಂದೊಳ್ಳೆಯ ಕ್ರಿಕೆಟ್ ನಿರೀಕ್ಷಿಸಿದ್ದ ಭಾರತೀಯ ಅಭಿಮಾನಿಗಳಿಗೆ ಬಹಳಷ್ಟು ನಿರಾಸೆ ಆಗಿದೆ.
ಆದರೆ ಬೇಜಾರು ಬೇಡ. ಆಟ ಅಂದ ಮೇಲೆ ಇವೆಲ್ಲ ಇದ್ದದ್ದೇ.
ಮುಂದಿನ ಪಂದ್ಯ ಸೆಪ್ಟೆಂಬರ್ 2 ಗುರುವಾರ ಲಂಡನ್ ನ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯಲಿದೆ. ಟೀಮ್ ಇಂಡಿಯಾ ಫೈಟ್ ಬ್ಯಾಕ್ ಮಾಡುತ್ತದೆ ಎನ್ನುವ ವಿಶ್ವಾಸದೊಂದಿಗೆ 4 ನೇ ಟೆಸ್ಟ್ ನ ಮೊದಲ ದಿನದಾಟದ ಅಂತ್ಯಕ್ಕೆ ಮತ್ತೊಮ್ಮೆ ಸಿಗುವ.. ಎಂದಿನಂತೆ ಒಂದಷ್ಟು ಕ್ರಿಕೆಟ್ ಮತ್ತೊಮ್ಮೆ ಮಾತಾಡೋಣ.
Ind Vs England
3rd Test - Headingley - Leeds.
#Day_4 :
India 1st Innings - 78/10
England 1st Innings - 432/10
India 2nd Innings - 278/10
England won by an innings and 76 runs.
MOM - Ollie Robinson
#WTC_S02E01_3TD4_2021_23
Ab pacchu
( " ಕ್ರಿಕೆಟ್ ಮತ್ತು Law 36" ಲಿಂಕ್ 👉https://m.facebook.com/story.php?story_fbid=10215958955080387&id=1642747008)
Comments
Post a Comment